ಪ್ರವಾಹ ಸಂತ್ರಸ್ತರಿಗೆ ಸಂಘ-ಸಂಸ್ಥೆಗಳಿಂದ ನೆರವು
ಮೈಸೂರು

ಪ್ರವಾಹ ಸಂತ್ರಸ್ತರಿಗೆ ಸಂಘ-ಸಂಸ್ಥೆಗಳಿಂದ ನೆರವು

August 13, 2019

ಮೈಸೂರು,ಆ.12(ಪಿಎಂ)-ನೆರೆ ಸಂತ್ರಸ್ತರ ನೆರವಿಗೆ ವಿವಿಧ ಬಗೆಯ ಅಗತ್ಯ ಸಾಮಗ್ರಿ ಗಳನ್ನು ಸಂಗ್ರಹಿಸಿ ತಲುಪಿಸುವುದು ಮತ್ತು ವೈಯಕ್ತಿಕವಾಗಿ ಕೊಡುಗೆ ನೀಡುವ ಕಾರ್ಯಕ್ಕೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದಾಗಿರುವುದು ಸೋಮವಾರವೂ ಕಂಡುಬಂತು.

ಮೈಸೂರಿನ ಪುರಭವನದಲ್ಲಿ ಜಿಲ್ಲಾಡ ಳಿತ ತೆರೆದಿರುವ ಸಾಮಗ್ರಿ ಸಂಗ್ರಹ ಕೇಂದ್ರಕ್ಕೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ನಾನಾ ಬಗೆಯ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದರು. ಬೆಡ್ ಶೀಟ್, ಕಂಬಳಿ, ಬಟ್ಟೆ, ಟವಲ್, ಟೂತ್ ಪೇಸ್ಟ್, ಟೂತ್ ಬ್ರಷ್, ಸಾಬೂನು, ಚಪ್ಪಲಿ, ಸೊಳ್ಳೆ ಬತ್ತಿ, ಬಿಸ್ಕತ್, ಜ್ಯೂಸ್, ಹಾಲು, ಹಣ್ಣ, ದವಸ-ಧಾನ್ಯ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ಕೇಂದ್ರಕ್ಕೆ ನೀಡಿದರು.

ದಲಿತ ವೇಲ್‍ಫೇರ್ ಟ್ರಸ್ಟ್: ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಸೀರೆ, ಬಟ್ಟೆ ಹಾಗೂ ಅಕ್ಕಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ನೀಡಲಾ ಯಿತು. ಇದೇ ವೇಳೆ ಟ್ರಸ್ಟ್ ಅಧ್ಯಕ್ಷ ಶಾಂತ ರಾಜು ಮಾತನಾಡಿ, ಒಂದೂವರೆ ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಟ್ರಸ್ಟ್ ನಿಂದ ನೀಡಲಾಗಿದೆ. 30 ಸೀರೆ, 30 ಕಂಬಳಿ, ತಲಾ 25 ಕೆಜಿ ತೂಕದ 25 ಅಕ್ಕಿ ಮೂಟೆಗಳು ಹಾಗೂ ಒಳ ಉಡುಪು ಸೇರಿದಂತೆ ಅನೇಕ ಬಗೆಯ ವಸ್ತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ನಂಜರಾಜ ಅರಸ್, ಲೇಖಕ ಸಿದ್ದ ರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

ಹಿಂದುಳಿದ ವರ್ಗಗಳ ಜಾಗೃತ ವೇದಿಕೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಪ್ರಗತಿಪರ ಸಂಘ ಟನೆಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಪರಿಹಾರ ಸಾಮಗ್ರಿಗಳನ್ನು ನೀಡಲಾಯಿತು. ಚಾಪೆ, ಬೆಡ್‍ಶೀಟ್ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗ ವಾನ್ ಮಾತನಾಡಿ, ಲಕ್ಷ ರೂ. ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕೇಂದ್ರಕ್ಕೆ ನೀಡುತ್ತಿದ್ದೇವೆ. ಸಂತ್ರಸ್ತರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದೇ ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ರಾಜ್ಯದ ಜನತೆ ನೆರವಾಗುತ್ತಿದ್ದು, ಸಂತ್ರಸ್ತರು ಧೈರ್ಯದಿಂದ ಇರುವಂತೆ ಮನವಿ ಮಾಡಿದರು.

ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಮುಖಂಡರಾದ ಗೋಪಾಲಕೃಷ್ಣ, ಮೂಗೂರು ನಂಜುಂಡ ಸ್ವಾಮಿ ಮತ್ತಿತರರು ಹಾಜರಿದ್ದರು.

ವಿದ್ಯಾರಣ್ಯಪುರಂನ ಬೈಲಪ್ಪ ಅವರ ವತಿಯಿಂದ 8 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಆಟೋರಿಕ್ಷದಲ್ಲಿ ತಂದು ಕೇಂದ್ರಕ್ಕೆ ನೀಡಲಾಯಿತು. ಇದಲ್ಲದೆ, ಸಾರ್ವಜನಿಕರು ನಾನಾ ಸಾಮಗ್ರಿಗಳನ್ನು ಕೇಂದ್ರಕ್ಕೆ ನೀಡಿದರು.

ಪ್ರಗತಿಪರ ಚಿಂತಕರ ವೇದಿಕೆ: ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ವತಿ ಯಿಂದ ವೇದಿಕೆ ಅಧ್ಯಕ್ಷ ಕೆ.ಸಿ.ಪುಟ್ಟ ಸಿದ್ಧಶೆಟ್ಟಿ ನೇತೃತ್ವದಲ್ಲಿ ಮೈಸೂರಿನ ಚಿಕ್ಕಗಡಿಯಾರ ಹಾಗೂ ಸುತ್ತಮುತ್ತಲಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಸಾಮಗ್ರಿಗಳನ್ನು ಸಂಗ್ರಹಿಸಲಾಯಿತು.

 

 

Translate »