ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟ ನೀಡುವ ಮೂಲಕ: ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ವಿಶಿಷ್ಟ ರೀತಿ ಆಚರಣೆ
ಮೈಸೂರು

ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟ ನೀಡುವ ಮೂಲಕ: ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ವಿಶಿಷ್ಟ ರೀತಿ ಆಚರಣೆ

August 13, 2019

ಮೈಸೂರು, ಆ.12 (ಆರ್‍ಕೆಬಿ)- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು, ಬೆಂಬಲಿಗರು ಸೋಮವಾರ ಮೈಸೂರಿನ ತಿಲಕ್‍ನಗರದ ಸರ್ಕಾರಿ ಅಂಧ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯ ದರ್ಶಿ ಎಂ.ಶಿವಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಅನಂತು ಇನ್ನಿತರರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯ ಕರ್ತರು  ತಿಲಕ್‍ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಸರ್ಕಾರಿ ಅಂಧ, ಕಿವುಡ, ಮೂಕರ ಪಾಠಶಾಲೆಯ 150ಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಊಟವಾಗಿ ಪುಳಿಯೋಗರೆ, ಪಾಯಸ, ಸಿಹಿ ಬೂಂದಿ, ಹುರುಳಿ ಪಲ್ಯ, ಅನ್ನ-ಸಾಂಬಾರ್, ಬಾಳೆಹಣ್ಣು ನೀಡಿ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿದರು.

ಇದಕ್ಕೂ ಮುನ್ನ ಚಾಮುಂಡಿಬೆಟ್ಟದಲ್ಲಿ ಚಾಮುಂ ಡೇಶ್ವರಿ ಅಮ್ಮನವರಿಗೆ ಸಿದ್ದರಾಮಯ್ಯರ ಹೆಸರಿನಲ್ಲಿ ವಿಶೇಷ ಪೂಜೆ, ಗರಡಿಕೇರಿ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಕಾಳಯ್ಯ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮಧು ರೇವಣಕರ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ್‍ಬಾಬು, ಎಸ್.ರವಿ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಗರಡಿಕೇರಿ ಆದಿಪೂಜಿತ ಗೆಳೆಯರ ಬಳಗ, ಕೆ.ಆರ್. ಆಸ್ಪತ್ರೆ ರಸ್ತೆ ಸಿದ್ದಿವಿನಾಯಕ ಯುವಕರ ಸೇವಾ ಸಂಘ, ಕುರುಬಗೇರಿ ಪಂಚಮುಖಿ ಗಣಪತಿ ಯುವಕರ ಸಂಘ, ಸಿಂಹಾದ್ರಿ ಗ್ರೂಪ್ ಇನ್ನಿತರ ಸಂಘಟನೆಗಳ ಮುಖಂ ಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *