ವರುಣಾ ಕ್ಷೇತ್ರದ ಬೊಕ್ಕಹಳ್ಳಿ ಗಂಜಿಕೇಂದ್ರದಲ್ಲಿ ಶಾಸಕ ಡಾ.ಯತೀಂದ್ರರಿಂದ ಅಗತ್ಯ ವಸ್ತುಗಳ ವಿತರಣೆ
ಮೈಸೂರು

ವರುಣಾ ಕ್ಷೇತ್ರದ ಬೊಕ್ಕಹಳ್ಳಿ ಗಂಜಿಕೇಂದ್ರದಲ್ಲಿ ಶಾಸಕ ಡಾ.ಯತೀಂದ್ರರಿಂದ ಅಗತ್ಯ ವಸ್ತುಗಳ ವಿತರಣೆ

August 13, 2019

ಮೈಸೂರು,ಆ. 12- ವರುಣಾ ಕ್ಷೇತ್ರದಲ್ಲಿ ನದಿ ನೀರಿನಿಂದ ಮುಳುಗಡೆಯಾಗಿ ಮನೆ ಹಾನಿಗೊಳ ಗಾದವರಿಗೆ ಬೇರೆ ಜಾಗ ಖರೀದಿಸಿ ಹೊಸ ಮನೆ ಗಳನ್ನು ಕಟ್ಟಿಸಿಕೊಡುವ ಮುಖಾಂತರ ಜನರನ್ನು ಸ್ಥಳಾಂತರಿಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯ ತ್ನಿಸುವುದಾಗಿ ಡಾ.ಯತೀಂದ್ರ ತಿಳಿಸಿದರು.

ವರುಣಾ ಕ್ಷೇತ್ರದ ಬೊಕ್ಕಹಳ್ಳಿ ನಿರಾಶ್ರಿತರ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ವೈಯಕ್ತಿಕವಾಗಿ ಚಾಪೆ, ಕಂಬಳಿ, ಪಂಚೆ, ಬಿಸ್ಕತ್, ಸೀರೆ, ಟೂತ್ ಪೇಸ್ಟ್, ಬ್ರಷ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 3 ಗಂಜಿಕೇಂದ್ರಗಳನ್ನು ತೆರೆದಿದ್ದು, ಸುಮಾರು 1100 ಜನ ನಿರಾಶ್ರಿತರಾಗಿದ್ದಾರೆ. ಬೊಕ್ಕಳ್ಳಿ, ಹೆಜ್ಜಿಗೆ, ತೊರೆಮಾವುಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗೌಡರಹುಂಡಿ, ಅಹಲ್ಯ, ಕೆಂಬಾಲು, ಮರಳೂರು, ಗೊದ್ದನಪುರಗಳಲ್ಲಿಯೂ ಮನೆಗಳು ಬಿದ್ದು ಹೋಗಿವೆ. ನಗರ್ಲೆ, ಸುತ್ತೂರು, ತಿರುಮಕೂಡಲು

ಟಿ. ನರಸೀಪುರದ ಕೆಲವು ವಾರ್ಡ್‍ಗಳಲ್ಲಿಯೂ ಮನೆಗಳಿಗೆ ಹಾನಿಯುಂಟಾಗಿದೆ. ಇದಲ್ಲದೆ ಬೆಳೆ ನಷ್ಟ ವಾಗಿದೆ, ಹತ್ತಾರು ಜಾನುವಾರು ಜೀವ ಬಿಟ್ಟಿವೆ. ಇವೆಲ್ಲವನ್ನು ಸರ್ವೆ ಮಾಡಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಪರಿಹಾರ ಕೇಂದ್ರದಲ್ಲಿರುವವರಿಗೆ ಊಟದ ವ್ಯವಸ್ಥೆ, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ವರುಣಾ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಯಲ್ಲಿ ನಷ್ಟವಾಗಿರುವ ಕುಟುಂಬದವರಿಗೆ ಹೆಚ್ಚಿನ ಪರಿಹಾರ ಕೊಡಿಸಲು ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ ಎಸ್.ಸಿ.ಬಸವರಾಜು, ಓಬಿಸಿ ಅಧ್ಯಕ್ಷ ಕೆ.ಮಾರುತಿ, ಮುಖಂಡರಾದ ಮಾಲೇಗೌಡ, ಕೃಷ್ಣಕುಮಾರ್‍ಸಾಗರ್, ನಾಡನಹಳ್ಳಿ ರವಿ, ಯೋಗೀಶ್, ಹುಳಿಮಾವು ಗ್ರಾಪಂ ಅಧ್ಯಕ್ಷ, ಮಹೇಶ್‍ಪ್ರಸಾದ್, ಮಾದಪ್ಪ, ಸೋಮಸುಂದರ್, ಲಿಂಗಣ್ಣ, ಪರಶಿವ ಮೂರ್ತಿ, ರವಿ, ಧನಗಳ್ಳಿ ಬಸವರಾಜು, ಶಿವಣ್ಣ ಇದ್ದರು.

 

Translate »