ಮೈಸೂರು: ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ವರು ರೋಗಿಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ವನ್ನು ಭರಿಸುವ ವ್ಯವಸ್ಥೆ ಮಾಡಿ, ಈ ಬಡ ರೋಗಿಗಳ ಚಿಕಿತ್ಸೆಗೆ ನೆರವಾ ಗಿದ್ದಾರೆ.
ಮೈಸೂರು ಸಿದ್ಧಾರ್ಥನಗರ ಬನ್ನೂರು ಮುಖ್ಯ ರಸ್ತೆ ನಿವಾಸಿ ಶ್ರೀಮತಿ ಪದ್ಮಾವತಿ (ಕಿಡ್ನಿ ಸಮಸ್ಯೆ) ಅವರಿಗೆ ರೂ.2.25, 000, ರಾಜೇಂದ್ರನಗರ ನಿವಾಸಿ ಸೋಮಣ್ಣ (ಕ್ಯಾನ್ಸರ್ ಸಮಸ್ಯೆ) ರೂ. 1,43,000, ಮೈಸೂರು ತಾಲೂಕು ಆಲನಹಳ್ಳಿ ಗ್ರಾಮ ನಿವಾಸಿ ಮಾಸ್ಟರ್ ತರುಣ್ (ಕಿಡ್ನಿ ಸಮಸ್ಯೆ) ರೂ.3,00,000 ಹಾಗೂ ಜೆ.ಪಿ.ನಗರ ನಿವಾಸಿ ರಾಮ ಪ್ರಕಾಶ್ (ಕಿಡ್ನಿ ಸಮಸ್ಯೆ) ರೂ.2,85,000 ಚಿಕಿತ್ಸಾ ವೆಚ್ಚ ಮಂಜೂರಾದ ಪ್ರತಿಯನ್ನು ಫಲಾನುಭವಿಗಳಿಗೆ ಪ್ರತಾಪ್ ಸಿಂಹ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿನ ತಮ್ಮ ಕಚೇರಿಯಲ್ಲಿ ಗುರುವಾರ ವಿತರಿಸಿದರು.