ಯೋಜನೆಗಳ ಅನುಷ್ಠಾನದಲ್ಲಿ ನಂಜನಗೂಡು ಕನಿಷ
ಮೈಸೂರು

ಯೋಜನೆಗಳ ಅನುಷ್ಠಾನದಲ್ಲಿ ನಂಜನಗೂಡು ಕನಿಷ

January 10, 2019

ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಧ್ರುವನಾರಾಯಣರಿಂದ ಅಧಿಕಾರಿಗಳ ತರಾಟೆ
ನಂಜನಗೂಡು: ಕೇಂದ್ರ ಪುರಸ್ಕøತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಂಜನಗೂಡು ತಾಲೂಕು ವಿಫಲವಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ವಿಷಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ 21 ಯೋಜನೆಗಳ ಅನುಷ್ಠಾನದಲ್ಲಿ ಹೆಗ್ಡಡದೇವನ ಕೋಟೆಯದು ಗರಿಷ್ಠ ಸಾಧನೆ ನಂಜನಗೂಡಿನದು ಕನಿಷ್ಠÀ ಸಾಧsನೆ ಎಂದು ಬೇಸರ ವ್ಯಕ್ತಪಡಿಸಿದರು. ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ನಂಜನಗೂಡು ತಾಲೂಕು 32.5 ಕೋಟಿ ಬಳಸಿಕೊಳ್ಳಬೇಕಿತ್ತು ಆದರೆ ಈವರೆಗೆ ಕೇವಲ 9.5 ಕೋಟಿ ಮಾತ್ರ ಉಪಯೋಗಿಸಿಕೊಂಡಿದ್ದೀರಿ. ಹೀಗಾದರೆ ಹೇಗೆ ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದೇವನೂರು, ಮಲ್ಲುಪುರ, ದೇವರಸನಹಳ್ಳಿ, ತಾಯೂರು, ಕೆಎಸ್‍ಹುಂಡಿ ಪಂಚಾಯಿತಿ ಅಧಿಕಾರಿಗಳು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಅನುದಾನವನ್ನು ಬಳಸಿಕೂಳ್ಳದೇ ಕಳಪೆ ಸಾಧನೆ ತೋರಿದ್ದೀರಿ ಎಂದು ಖಂಡಿಸಿದರು. ಹೀಗೆ ನಿರಾಸಕ್ತಿ ತೋರಿಸಿರುವುದಕ್ಕೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
2016-17ನೇ ಸಾಲಿನಲ್ಲಿ ತಾಲೂಕಿಗೆ ಮಂಜೂರಾಗಿದ್ದ 1440 ಮನೆಗಳಲ್ಲಿ 323 ಹಾಗೂ 2017-18ರ ಸಾಲಿನ 484 ಮನೆಗಳನ್ನೂ ಇನ್ನೂ ಆರಂಭಿಸದೇ ಇರಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸಂಸದರು ಸಿಟ್ಟಾದರು. ಕೇವಲ ಶೇ.0.46ರಷ್ಟು ಪ್ರಗತಿ ಸಾಧಿಸಿರುವುದನ್ನು ಉಲ್ಲೇಖಿಸಿ, ಇದಕ್ಕಿಂತಲೂ ಅವಮಾನ ಬೇರೊಂದಿಲ್ಲ. ರಾಷ್ಟ್ರದ ಬೆನ್ನೆಲುಬಾದ ರೈತರ ಪರವಾಗಿ ಕಾರ್ಯನಿರ್ವಹಿಸಬೇಕಾದ ನೀವೇ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನೀವು ಕ್ರೀಯಾಶೀಲರಾಗಿದ್ದರೆ ಪ್ರಗತಿ ಇಷ್ಟೊಂದು ಕಳಪೆಯಾಗುತ್ತಿರಲಿಲ್ಲ. ತಾಲೂಕಿನ ಸಾಧನೆ ಕನಿಷ್ಠವಾಗಲು ನಿಮ್ಮ ಇಲಾಖೆಯದೇ ಸಿಂಹ ಪಾಲು ಎಂದು ಕೃಷಿ ಇಲಾಖೆ ಅಧಿಕಾರಿ ವಿರುದ್ಧ ಹರಿಹಾಯ್ದರು.

ಭತ್ತದ ಸೀಜನ್ ಮುಗಿದ ಮೇಲೆ ಭತ್ತ ಖರಿದಿಗಿಲಿಯುವ ನೀವು ರೈತ ಪರವೋ ದಲ್ಲಾಳಿಗಳ ಪರವೋ ? ಎಂದು ಕುಟುಕಿದರು. ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ 1,700 ರೂ. ನಿಗದಿಪಡಿಸಿದೆ. ಆದರೆ ನೀವು ಖರೀದಿಗಿಳಿದಿಲ್ಲ. ಸಾಲ ಮಾಡಿ ಅನ್ನ ಬೆಳೆದ ಕೃಷಿಕ ಅದನ್ನು 1,200 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾನೆ ಇದನ್ನು ನೋಡಿಯೂ ಕೃಷಿ ಇಲಾಖೆ ಸಂಬಳ ಪಡೆಯುವ ನೀವು ಸುಮ್ಮಿನಿರುವುದು ರೈತರಿಗೆ ಹಾಗೂ ಸರ್ಕಾರಕ್ಕೆ ಮಾಡುತ್ತಿರುವ ದ್ರೋಹ ಎಂದು ಸಂಸದರು ಕಿಡಿಕಾರಿದರು.

ತೋಟಗಾರಿಕೆ ಇಲಾಖೆ ಸರದಿ ಬಂದಾಗ, ಈ ಭಾಗದಲ್ಲಿ ಹೆಚ್ಚಾಗಿ ರೈತರು ಬಾಳೆ ಬೆಳೆಯುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಬಾಳೆಗೆ ಪ್ರೋತ್ಸಾಹ ನೀಡಬೇಕು ಎಂದು ಸಂಸದರು ತಿಳಿಸಿದಾಗ, ಅಧಿಕಾರಿ ಸುರೇಂದ್ರ ಪ್ರತಿಕ್ರಿಯಿಸಿ ಇಲ್ಲಿ ಹೆಚ್ಚಾಗಿ ಬೆಳೆಯುವದು ಎಲಕ್ಕಿ ಬಾಳೆ, ಆದರೆ ಅದಕೆ ಹಾಗೂ ನಂಜನಗೂಡು ರಸಬಾಳೆಗೆ ಉದ್ಯೋಗಖಾತ್ರಿಯಲ್ಲಿ ಅವಕಾಶವಿಲ್ಲವಾಗಿದೆ ಎಂದರು. ಈ ವಿಷಯ ಮೊದಲೇ ತಿಳಿಸಿದ್ದರೆ ಇವೆರಡಕ್ಕೂ ಅನುಮತಿ ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ ಅನುಮತಿ ಕೊಡಿಸಲು ಪ್ರಯತ್ನಿಸುವೆ ಎಂದು ಸಂಸದರು ಭರವಸೆ ನೀಡಿದರು.
ಬಹು ನಿರೀಕ್ಷಿತ ಸಸ್ಯಕಾಶಿ ಕಾಮಗಾರಿ ಪ್ರಾರಂಭವಾಗಿದ್ದನ್ನು ಉಲ್ಲೇಖಿಸಿದ ಸಂಸದರು ಮುತುವರ್ಜಿ ವಹಿಸಿ. ಅಲ್ಲಿ ಅಚ್ಚುಕಟ್ಟಾಗಿ ಉದ್ಯಾನವನ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಹಾಗೂ ತಾಪಂ ಸದಸ್ಯರು ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾದರೆ ಶಾಸಕರು ಹಾಗೂ ಸಂಸದರಿಗೆ ಸಮಸ್ಯೆಗಳೇ ಎದುರಾಗುವದಿಲ್ಲ ಎಂದು ಅಭಿಪ್ರಾಯಪಟ್ಟ ಸಂಸದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಒಗ್ಗೂಡಿ ಇನ್ನಾದರೂ ಕ್ರಿಯಾಶೀಲರಾಗಿ. ಉಳಿದಿರುವ 60 ದಿನಗಳಲ್ಲಿ ಕೆಲಸ ಮಾಡಿ, ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ನಿಮ್ಮ ಪಂಚಾಯಿತಿ ಹಾಗೂ ತಾಲೂಕನ್ನು ಸದೃಢಗೊಳಿಸಿ ಎಂದು ಕಿವಿ ಮಾತು ಹೇಳಿದರು.

ತಾಲೂಕಿನಲ್ಲಿ ಮುರಾರ್ಜಿವಸತಿ ಶಾಲೆ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಕಾರಣ ಸಮಾಜ ಕಲ್ಯಾಣಧಿಕಾರಿ ಅಧಿಕಾರಿ ಜನಾರ್ಧನ ಅವರನ್ನು ಸಂಸದರು ತೀವ್ರ ತರಾಟೆಗೆ ತೆಗೆದುಕೊಂಡರು ಕೆಲಸದಲ್ಲಿ ಆಸಕ್ತಿಯಿಲ್ಲ, ಬೇಜಾವಬ್ದಾರಿ ತೋರುತ್ತಿದ್ದೀರಿ ಎಂದು ಖಂಡಿಸಿದರು.

ಜಿ.ಪಂ ಸಹ ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ದಯಾನಂದ ಮೂರ್ತಿ, ಮಂಗಳಾ ಸೋಮಶೇಖರ್, ಪುಷ್ಪಾ ನಾಗೇಶರಾಜ್, ಲತಾ ಸಿದ್ದಶೆಟ್ಟಿ, ತಾ.ಪಂ ಅಧÀ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧÀ್ಯಕ್ಷ ಗೋವಿಂದರಾಜ್, ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಣ್ಣ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸು ಮತ್ತಿತರರು ಉಪಸ್ಥಿತರಿದ್ದರು.

ಇಂತಹ ಮಹತ್ವದ ಸಭೆಗೆ ಗೈರುಹಾಜರಾಗಿರುವ ಅಬಕಾರಿ, ಅರಣ್ಯ, ಅಕ್ಷರ ದಾಸೋಹ, ಜಿ.ಪಂ, ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿ.ಪಂ, ನೋಡೆಲ್ ಅಧಿಕಾರಿಗಳಿಗೆ ಸೂಚಿಸಿದರು.

Translate »