ಮೈಸೂರು: ಮೈಸೂ ರಿನ ಪಾಲಿಕೆ 1ನೇ ವಾರ್ಡಿನ ಹೆಬ್ಬಾಳು 1ನೇ ಹಂತ, ಲಕ್ಷ್ಮಿಕಾಂತ ನಗರದಲ್ಲಿ ಚಾಮ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಇಂದು ಪಾದಯಾತ್ರೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.
ಮಾಜಿ ಕಾರ್ಪೋರೇಟರ್ ಎಂ.ಶಿವಣ್ಣ ರೊಂದಿಗೆ ವಾರ್ಡಿನಾದ್ಯಂತ ಬೆಳಿಗ್ಗೆ 8.30 ರಿಂದ ಮಧ್ಯಾಹ್ನದವರೆಗೂ ಪಾದಯಾತ್ರೆ ನಡೆಸಿದ ಶಾಸಕರಿಗೆ ಹಲವೆಡೆ ಚರಂಡಿ ಗಳು ಕಸಕಡ್ಡಿಯಿಂದ ಬಂದ್ ಆಗಿರುವುದು, ಬಹುತೇಕ ಪಾರ್ಕುಗಳಲ್ಲಿ ಗಿಡಗಂಟಿ ಬೆಳೆದುಕೊಂಡು ಕಸದ ರಾಶಿಯಿಂದ ಕೂಡಿ ರುವುದು, ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ ಹರಿದು ಬಿಟ್ಟಿರುವುದು, ಸಮುದಾಯ ಭವನ ನಿರ್ಮಾಣ ಕಾಮ ಗಾರಿ ಅರ್ಧಕ್ಕೆ ನಿಂತಿರುವುದೂ ಸೇರಿದಂತೆ ಹಲವು ಸಮಸ್ಯೆಗಳ ದರ್ಶನವಾಯಿತು.
ವಾರ್ಡ್‍ನಲ್ಲಿರುವ ಸಣ್ಣ ಸಣ್ಣ ಪಾರ್ಕು ಗಳನ್ನು ಸ್ವಚ್ಛಗೊಳಿಸಬೇಕು, ಮುಂದೆ ಸುತ್ತಲಿನ ನಾಗರಿಕರೇ ನಿರ್ವಹಿಸುವಂತೆ ತಿಳಿ ಹೇಳಬೇಕೆಂದು ಪಾಲಿಕೆ ಆರೋಗ್ಯಾಧಿ ಕಾರಿ ಡಾ.ನಾಗರಾಜ್ ಹಾಗೂ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ ಶಾಸಕರು, ಪ್ರತೀ ದಿನ ರಸ್ತೆಗಳ ಸ್ವಚ್ಛತೆ, ಗಿಡಗಂಟಿಗಳು, ಡೆಬ್ರೀಸ್ ತೆರವುಗೊಳಿಸಬೇಕೆಂದೂ ತಾಕೀತು ಮಾಡಿದರು.
ಮುಕ್ತ ಮಳೆ ನೀರು ಚರಂಡಿಗೆ ಒಳ ಚರಂಡಿ ನೀರು ಬಿಟ್ಟು ಪರಿಸರ ಹಾಳು ಮಾಡುತ್ತಿದ್ದ ಮನೆ ಮಾಲೀಕರಿಗೆ ತಿಳಿ ಹೇಳಿ, ತಕ್ಷಣವೇ ಯುಜಿಡಿಗೆ ಸಂಪರ್ಕ ಕಲ್ಪಿಸಿಕೊಡುವಂತೆ ಪಾಲಿಕೆ ಒಳಚರಂಡಿ ವಿಭಾಗದ ಇಂಜಿನಿಯರ್‍ಗಳಿಗೆ ತಿಳಿಸಿದರು.
ಬಡಾವಣೆಗೆ ಹೊಂದಿಕೊಂಡಂತಿರುವ ರಿಂಗ್ ರೋಡ್‍ನ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದ್ದು, ರಿಂಗ್ ರೋಡ್‍ನ ಬೀದಿ ದೀಪಗಳ್ಯಾವು ಬೆಳಗದಿರುವುದು ಹಾಗೂ ಸರ್ವೀಸ್ ರಸ್ತೆ ಮಧ್ಯೆ ಇರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನಿಂದ ಅಪಾಯ ಸಂಭವಿ ಸುವ ಸಾಧ್ಯತೆ ಕಂಡು ಅಸಮಾಧಾನಗೊಂಡ ನಾಗೇಂದ್ರ, ಸಂಬಂಧಪಟ್ಟ ಅಧಿಕಾರಿ ಗಳು ತಕ್ಷಣವೇ ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದರು.
ಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ತೆಂಗಿನ ಮರಗಳನ್ನು ಬೆಳೆಸಿಕೊಂಡಿರುವುದರಿಂದ ತುರ್ತು ಸಂದರ್ಭ ನೀರಿನ ಟ್ಯಾಂಕರ್, ಇನ್ನಿತರ ವಾಹನಗಳು ಓಡಾಡಲು ತೊಂದರೆ ಯಾಗುತ್ತಿದೆ ಎಂದು ಸ್ಥಳೀಯರು ದೂರಿದ ಹಿನ್ನೆಲೆಯಲ್ಲಿ, ನಿವಾಸಿಗಳೊಂದಿಗೆ ಸಮಾ ಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮಾಜಿ ಕಾರ್ಪೋ ರೇಟರ್ ಎಂ.ಶಿವಣ್ಣ(ಶಿವಣ್ಣ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಅವರು ವಾರ್ಡಿನ ಪಾಲಿಕೆ ಸದಸ್ಯರು) ಅವರಿಗೆ ನಾಗೇಂದ್ರ ತಿಳಿಸಿದರು.
ನಗರಪಾಲಿಕೆ, ಕಂದಾಯ ಉಪ ಆಯುಕ್ತ ಕುಮಾರ ನಾಯಕ, ಅಭಿವೃದ್ಧಿ ಅಧಿಕಾರಿ ವೀರೇಶ, ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶಬಾಬು, ಸೆಸ್ಕ್, ತೋಟ ಗಾರಿಕೆ, ವಾಣಿವಿಲಾಸ ವಾಟರ್ ವರ್ಕ್, ಒಳ ಚರಂಡಿ ವಿಭಾಗದ ಅಧಿಕಾರಿಗಳು, ಶಾಸ ಕರ ಪಾದಯಾತ್ರೆ ವೇಳೆ ಹಾಜರಿದ್ದರು.