ಸಾಲಿಗ್ರಾಮ ದಲಿತರ ಮೇಲಿನ ದೌರ್ಜನ್ಯಕ್ಕೆ: ಸರ್ಕಾರ, ಜಿಲ್ಲಾಡಳಿತ, ಪೆÇಲೀಸರ ವೈಫಲ್ಯ ಕಾರಣ: ದಸಮಸ ಆರೋಪ
ಮೈಸೂರು

ಸಾಲಿಗ್ರಾಮ ದಲಿತರ ಮೇಲಿನ ದೌರ್ಜನ್ಯಕ್ಕೆ: ಸರ್ಕಾರ, ಜಿಲ್ಲಾಡಳಿತ, ಪೆÇಲೀಸರ ವೈಫಲ್ಯ ಕಾರಣ: ದಸಮಸ ಆರೋಪ

December 22, 2019

ತಿ.ನರಸೀಪುರ ಡಿ.21(ಎಸ್‍ಕೆ)-ಆಡಳಿತಾರೂಢ ಸರ್ಕಾರಗಳು ಮತ್ತು ಅಧಿಕಾರಿಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ಬದ್ಧತೆ, ನಿಯಂತ್ರಿಸುವ ಕಾಳಜಿ ಕಣ್ಮರೆಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಯ ವೈಫಲ್ಯದಿಂದಾಗಿಯೇ ಸಾಲಿಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮದಲ್ಲಿ ಅಲ್ಪಸಂಖ್ಯೆಯಲ್ಲಿರುವ ದಲಿತರ ಮೇಲೆ 2001 ರಿಂದ ಮೂರು ಬಾರಿ ದೌರ್ಜನ್ಯ ನಡೆದಿದೆ. ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿವೆÉ ಎಂದು ದೂರಿದರು.

ಡಿ.11ರಂದು ದಲಿತರ ಮೇಲೆ ನಡೆದ ದೌರ್ಜನ ಸಂಬಂಧ ಕೇವಲ 16 ಮಂದಿ ಮೇಲಷ್ಟೇ ಪ್ರಕರಣ ದಾಖಲಾಗಿದೆ. ಅಲ್ಲದೆ ಪ್ರಕರಣವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಾಲಿಗ್ರಾಮದಲ್ಲಿ 2001ರಲ್ಲಿ ಪ್ರಥಮ ಬಾರಿಗೆ ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ನಂತರ 2011ರಲ್ಲಿ ದೌರ್ಜನ್ಯ ನಡೆದಿದೆ. ಈಗ ಡಿ.11 ರಂದು ಶಾಸಕರ ಸಹೋದರ ನೇತೃತ್ವದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಘಟನೆಯನ್ನು ಪ್ರಥಮ ಹಂತದಲ್ಲೇ ತಡೆಯಲು ಸ್ಥಳೀಯ ಪೆÇಲೀಸರು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ಶಾಂತಿ ಸಭೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಂತೆ ದೌರ್ಜನ್ಯಕ್ಕೀಡಾದ ಸಂತ್ರಸ್ತರಿಗೆ ಹೇಳುವ ಜಿಲ್ಲಾಧಿಕಾರಿಗಳು ಇದೇ ಮಾತು ದೌರ್ಜನ್ಯ ನಡೆಸಿದ ಸಮುದಾಯಕ್ಕೆ ಹೇಳದಿರುವುದು ಖಂಡನೀಯ ಎಂದರು.

ದೌರ್ಜನ್ಯದಿಂದ ನಲುಗಿರುವ ದಲಿತರಿಗೆ ಶೀಘ್ರವೇ ಪರಿಹಾರ ಒದಗಿಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸಿ, ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜು ಶಂಕರಪುರ, ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಸ್.ಲಕ್ಷ್ಮಣ್, ಮುಖಂಡರಾದ ಹಿರಿಯೂರು ಸೋಮಣ್ಣ, ರಜನಿ, ಸಿದ್ದರಾಜು ಹಾಗೂ ಸೋಸಲೆ ಶಿವಣ್ಣ ಉಪಸ್ಥಿತರಿದ್ದರು.

ಎನ್‍ಆರ್‍ಸಿ, ಸಿಎಎ ವಿರುದ್ಧ ನಾಳೆ ಪ್ರತಿಭಟನೆ
ಸಂವಿಧಾನದ ಆಶಯಗಳಿಗೆ ಮಾರಕವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಪಾಯಕಾರಿ ಎನ್‍ಆರ್‍ಸಿ ಹಾಗೂ ಸಿಎಎ ವಿರುದ್ಧ ಡಿ.23ರ ಸೋಮವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಸಂಸ ಪ್ರತಿಭಟನೆ ಹಮ್ಮಿಕೊಂಡಿದ್ದು, ಎರಡೂ ಕಾಯ್ದೆಗಳ ವಿರೋಧಿಸುವ ಪ್ರಗತಿಪರರು ಹಾಗೂ ಜಾತ್ಯತೀತ ಭಾವನೆಯುಳ್ಳ ನಾಗರಿಕರು ಭಾಗವಹಿಸಬೇಕು.
-ಆಲಗೂಡು ಶಿವಕುಮಾರ್,ಜಿಲ್ಲಾ ಸಂಚಾಲಕ, ದಲಿತ ಸಂಘರ್ಷ ಸಮಿತಿ

Translate »