ಖೋಟಾ ನೋಟು ಚಲಾವಣೆಗೆ ಯತ್ನ: ಮೂವರ ಸೆರೆ
ಮೈಸೂರು

ಖೋಟಾ ನೋಟು ಚಲಾವಣೆಗೆ ಯತ್ನ: ಮೂವರ ಸೆರೆ

November 3, 2019

ಮೈಸೂರು, ನ. ೨(ಆರ್‌ಕೆ)- ಖೋಟಾ ನೋಟುಗಳ ಚಲಾವಣೆ ಮಾಡಲೆತ್ನಿಸಿದ ಮೂವರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕು, ಕುರುಬಗೇರಿ ನಿವಾಸಿ ಎಸ್.ಗುರುಸ್ವಾಮಿ, ರವಿಶಂಕರ್ ಅಲಿಯಾಸ್ ಶಂಕರ್ ಹಾಗೂ ಪಾಂಡವಪುರ ತಾಲೂಕು ಚಿನಕುರಳಿ ನಿವಾಸಿ ಮಹೇಶ್ ಬಂಧಿತ ಆರೋಪಿಗಳು.

ನ.೧ರಂದು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯ ಎಸ್.ಬಿ. ವೈನ್ಸ್ ಎದುರು ಖೋಟಾ ನೋಟು ಚಲಾವಣೆ ಮಾಡಲು ಹೊಂಚು ಹಾಕುತ್ತಿದ್ದ ಅವರನ್ನು ಬಂಧಿ ಸಿದ ಪೊಲೀಸರು, ೨,೦೦೦ ರೂ. ಮುಖಬೆಲೆಯ ೧೬ ಹಾಗೂ ೫೦೦ ರೂ. ಮುಖ ಬೆಲೆಯ ೧೭ ಖೋಟಾ ನೋಟುಗಳನ್ನು ವಶಪಡಿಸಿಕೊಂಡರು. ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಡಿಸಿಪಿ ಎಂ.ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ, ಎನ್‌ಆರ್ ಉಪವಿಭಾಗದ ಎಸಿಪಿ ಸಿ.ಗೋಪಾಲ್ ನೇತೃತ್ವ ದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಮಂಡಿ ಠಾಣೆ ಇನ್ಸ್ಪೆಕ್ಟರ್ ಎಲ್. ಅರುಣ್, ಸಿಬ್ಬಂದಿಗಳಾದ ಚಂದ್ರಶೇಖರ್, ಕೆ.ಬಿ.ಹರೀಶ್, ರವೀಗೌಡ ಇತರರು ಪಾಲ್ಗೊಂಡಿದ್ದರು.

Translate »