ಮೈಸೂರು,ನ.೨(ಪಿಎಂ)- ಶ್ರೀಚಾಮುಂಡೇಶ್ವರಿ ಮೆಟ್ಟಿಲು ಹತ್ತುವ ಬಳಗದ ವತಿಯಿಂದ ನ.೪ರಂದು ಚಾಮುಂಡಿ ಬೆಟ್ಟದ ನಂದಿಗೆ ೯ನೇ ವರ್ಷದ ಮಹಾರುದ್ರಾ ಭಿಷೇಕ ಏರ್ಪಡಿಸಲಾಗಿದೆ ಎಂದು ಬಳಗದ ಮಹದೇವ್ ತಿಳಿಸಿ ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದ ಮೊದಲ ಸೋಮವಾರವಾದ ಅಂದು ಚಾಮುಂಡಿಬೆಟ್ಟದ ದೊಡ್ಡ ಬಸವೇಶ್ವರ ದೇವರಿಗೆ (ನಂದಿ) ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ೪೭ ರೀತಿಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ ಎಂದರು. ಬಳಗದ ಸುಬ್ಬರಾಜ ಅರಸ್, ಪ್ರವೀಣ್ ಗೋಷ್ಠಿಯಲ್ಲಿದ್ದರು.