ಕನ್ನಡ ನಾಮಫಲಕಕ್ಕೆ ಆಗ್ರಹ; ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ
ಮೈಸೂರು

ಕನ್ನಡ ನಾಮಫಲಕಕ್ಕೆ ಆಗ್ರಹ; ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ

November 3, 2019

ಮೈಸೂರು,ನ.೨- ಮೈಸೂರಿನಲ್ಲಿರುವ ಅಂಗಡಿ ಮಳಿಗೆ, ಕಂಪನಿಗಳ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳನ್ನು ಶೇ.೬೦ ಭಾಗ ಕನ್ನಡದಲ್ಲಿ ಕಡ್ಡಾಯವಾಗಿ ಹಾಕುವಂತೆ ಸುತ್ತೋಲೆ ಹೊರಡಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿತು. ಮಳಿಗೆ ಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂಬ ಸರ್ಕಾರದ ನಿಯಮವನ್ನು ಜಿಲ್ಲಾಡ ಳಿತ ಹಾಗೂ ಮೈಸೂರು ಪಾಲಿಕೆ ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಬಿಎಂಪಿ ಮಾದರಿಯಲ್ಲಿ ಮೈಸೂರು ನಗರ ಪಾಲಿಕೆ ವಾಣಿಜ್ಯ ಪರವಾನಗಿ ನೀಡುವಾಗ, ಅಂಗಡಿ ಮಳಿಗೆ, ಕಂಪನಿಗಳ ಹಾಗೂ ಖಾಸಗಿ ಶಾಲೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಶೇ.೬೦ ರಷ್ಟು ಇದೆಯೇ ಎಂಬುದನ್ನು ಸ್ಥಳ ಪರಿಶೀಲನೆ ಮಾಡಿ ನೋಡಿದ ನಂತರವಷ್ಟೇ, ಉದ್ದಿಮೆ ಪರ ವಾನಗಿ ನೀಡಬೇಕು ಅಥವಾ ನವೀಕರಣ ಮಾಡಿ ಕೊಡಬೇಕು. ಕನ್ನಡ ನಾಮ ಫಲಕ ಪ್ರಧಾನವಾಗಿ ದೊಡ್ಡಕ್ಷರಗಳಲ್ಲಿ ಅಗ್ರಸ್ಥಾನದಲ್ಲಿ ಇಲ್ಲದಿದ್ದರೆ ಉದ್ದಿಮೆ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ದರು. ಪ್ರತಿಭಟನೆಯಲ್ಲಿ ಕಸೇ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಶಾಂತಮೂರ್ತಿ, ವಿಜ ಯೇಂದ್ರ, ಪ್ರಭುಶಂಕರ್, ಶಾಂತ ರಾಜೇ ಅರಸ್, ಗುರೂಶಂಕರ್, ಅಕ್ಷಯ್, ಕುಮಾರ್‌ಗೌಡ, ಸ್ವಾಮಿ, ನಂದಕುಮಾರ್, ಪರಿಸರ ಚಂದ್ರು, ಮಿನಿ ಬಂಗಾ ರಪ್ಪ, ವಂದನಾ, ಮೊಗಣ್ಣಾಚಾರ್, ವಿನೋದ್, ಗುರುಮಲ್ಲಪ್ಪ ಕೆಸಿ, ಆನಂದ್, ದರ್ಶನ್ ಗೌಡ, ರಾಧಾಕೃಷ್ಣ, ಕಲೀಂ, ಹರ್ಷ, ನಂಜುAಡಸ್ವಾಮಿ, ದೀಪಕ್, ಪ್ರದೀಪ್, ಚೆಲುವರಾಜ್, ದೂರ ಸುರೇಶ್ ಮುಂತಾದವರು ಭಾಗವಹಿಸಿದ್ದರು.

Translate »