ಮೈಸೂರು ನೈರುತ್ಯ ರೈಲ್ವೆಯಲ್ಲಿ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ
ಮೈಸೂರು

ಮೈಸೂರು ನೈರುತ್ಯ ರೈಲ್ವೆಯಲ್ಲಿ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ

October 29, 2019

ಮೈಸೂರು, ಅ.28(ಪಿಎಂ)- ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ನಿರ್ದೇ ಶನದಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಇಂದಿನಿಂದ ನ.2ರವರೆಗೆ `ಜಾಗೃತಿ ಅರಿವು ಸಪ್ತಾಹ-2019’ ಆಚರಿ ಸಲಾಗುತ್ತಿದೆ. ಆಯೋಗವು `ಪ್ರಾಮಾಣಿ ಕತೆ: ಜೀವನದ ಒಂದು ಮಾರ್ಗ’ ವಿಷಯ ಕುರಿತಂತೆ ಅ.28ರಿಂದ ನ.2ರವರೆಗೆ ಜಾಗೃತಿ ಸಪ್ತಾಹ ಆಚರಿಸುತ್ತಿದೆ. ಇದನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ (ಅ.31) ಬರುವ ವಾರದಲ್ಲಿ ಪ್ರತಿ ವರ್ಷ ಆಚರಿಸಲಾಗುವುದು ವಿಶೇಷ.

ಮೈಸೂರಿನ ಇರ್ವಿನ್ ರಸ್ತೆಯ ರೈಲ್ವೆ ವಿಭಾಗೀಯ ಕಚೇರಿ ಹೊರಾಂಗಣದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ವಿಭಾಗೀಯ ಕಚೇರಿಯ ಸಿಬ್ಬಂದಿಗೆ ಪ್ರಾಮಾಣಿಕತೆಯ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಈ ಸಪ್ತಾಹಕ್ಕೆ ಚಾಲನೆ ನೀಡಿದರು.

ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಆರ್.ಪ್ರಸಾದ್ ಎಸ್.ಇಚಂಗಿಮಠ್ ಮಾತ ನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಕೇವಲ ಕಾನೂನು ಹಾಗೂ ಸಂಸ್ಥೆಗಳನ್ನು ರೂಪಿಸಿ ದರಷ್ಟೇ ಸಾಲದು. ಇದರ ಜೊತೆಗೆ ಸಾರ್ವ ಜನಿಕರ ಸಹಭಾಗಿತ್ವ ಅಗತ್ಯ. ಹೀಗಾಗಿ ಭ್ರಷ್ಟಾ ಚಾರದ ವಿರುದ್ಧ ಹೋರಾಡುವಲ್ಲಿ ಸಾರ್ವ ಜನಿಕರು ಮಹತ್ವದ ಪಾತ್ರ ವಹಿಸಬೇಕಿದೆ. ನವಭಾರತ ನಿರ್ಮಾಣಕ್ಕೆ ನೈತಿಕ ಮೌಲ್ಯ ಗಳನ್ನು ಬೆಳೆಸಿಕೊಳ್ಳುವುದು ಅವಶ್ಯ ಎಂದರು.

ಬಳಿಕ `ಪ್ರಾಮಾಣಿಕತೆ: ಜೀವನದ ಒಂದು ವಿಧಾನ’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳು ಮತ್ತು ವಿಭಾಗೀಯ ಕಚೇರಿಯ ಸಿಬ್ಬಂದಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಸಪ್ತಾಹದ ಅಂಗವಾಗಿ ಈ ವಾರದಲ್ಲಿ ರಸಪ್ರಶ್ನೆ ಸ್ಪರ್ಧೆ, ಉಪನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Translate »