ಮೈಸೂರು, ಅ.28(ಆರ್‍ಕೆಬಿ)- ಬೆಳಕಿನ ಹಬ್ಬ ದೀಪಾ ವಳಿ ಅಂಗವಾಗಿ ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ.ಗಳ ನೋಟುಗಳನ್ನು ಬಳಸಲಾಗಿದೆ.
ಪ್ರತಿ ದೀಪಾವಳಿ ಸಂದರ್ಭದಲ್ಲಿ ತ್ರಿಪುರಸುಂದರಿ ಅಮ್ಮ ನವರಿಗೆ ಹಣದಿಂದ ಅಲಂಕಾರ ಮಾಡುವುದು ಹಿಂದಿ ನಿಂದ ಬಂದಿರುವ ಸಂಪ್ರದಾಯ. ಭಕ್ತರು ನೀಡಿದ ಹಣದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ತ್ರಿಪುರಸುಂದರಿ ದೇವಿಯನ್ನು 10 ಲಕ್ಷ ರೂ. ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ.
1, 5, 10, 20, 50, 100, 200, 2000 ರೂ.ಗಳ ನೋಟು ಮತ್ತು ನಾಣ್ಯಗಳಿಂದ ದೇವಿಯನ್ನು ಅಲಂಕರಿಸಲಾಗಿದ್ದು, ಇದಕ್ಕಾಗಿ ಭಕ್ತರು ದಾನವಾಗಿ ನೀಡಿದ ಹಣವನ್ನು ಅಲಂ ಕಾರಕ್ಕಾಗಿ ಬಳಸಲಾಗುತ್ತದೆ. ಹಣದಿಂದ ಅಲಂಕೃತಳಾದ ತ್ರಿಪುರಸುಂದರಿ ದೇವಿಯ ದರ್ಶನ ಪಡೆಯಲು ಭಕ್ತರು ತಂಡೋಪತಂಡವಾಗಿ ಬಂದು ದರ್ಶನ ಪಡೆದು ಪುನೀತ ಭಾವನೆಯಿಂದ ತೆರಳುತ್ತಿದ್ದಾರೆ. ಪೂಜೆಗಳು ಮುಗಿದ ಬಳಿಕ ಅಲಂಕಾರಕ್ಕೆಂದು ಭಕ್ತರು ನೀಡಿದ ಹಣ ವನ್ನು ಅವರಿಗೆ ಹಿಂತಿರುಗಿಸಲಾಗುವುದು. ದೇವಿಗೆ ಅಲಂ ಕಾರಕ್ಕಾಗಿ ನೀಡಿದ ಹಣವನ್ನು ಕೊಂಡು ಹೋಗಿ ತಮ್ಮ ವ್ಯವಹಾರಗಳಿಗೆ ಬಳಸಿಕೊಳ್ಳುವುದರಿಂದ ವ್ಯವಹಾರ ಇಮ್ಮಡಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.