ಯುವ ಜನತೆಗೆ ತಂಬಾಕು ದುಷ್ಪರಿಣಾಮದ ಅರಿವು
ಮೈಸೂರು

ಯುವ ಜನತೆಗೆ ತಂಬಾಕು ದುಷ್ಪರಿಣಾಮದ ಅರಿವು

December 10, 2019

ಮೈಸೂರು, ಡಿ.9(ಪಿಎಂ)- ಮೈಸೂ ರಿನ ಎಸ್‍ಬಿಆರ್‍ಆರ್ ಮಹಾಜನ ಪಿಯು ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಗಳನ್ನು ಸಂಪನ್ಮೂಲ ವ್ಯಕ್ತಿಗಳು ಅನಾವರಣಗೊಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಕೋಶ, ಪದವಿ ಪೂರ್ವ ಶಿಕ್ಷಣ ಇಲಾಖೆ, ನವ ದೆಹಲಿಯ ಸಂಬಂಧ್ ಹೆಲ್ತ್ ಫೌಂಡೇ ಶನ್ ಸಂಯುಕ್ತಾಶ್ರಯದಲ್ಲಿ `ಜೀವನಕ್ಕಾಗಿ ಸಂಕಲ್ಪ: ತಂಬಾಕು ಮುಕ್ತ ಯುವ ಜನತೆ ನಿರ್ಮಾಣದ ಅಭಿಯಾನ’ ಶೀರ್ಷಿಕೆಯಡಿ ನಡೆದ ಒಂದು ದಿನದ ಕಾರ್ಯಾಗಾರ ದಲ್ಲಿ ಹಲವು ಸಂಪನ್ಮೂಲ ವ್ಯಕ್ತಿಗಳು ತಂಬಾಕಿನ ಕರಾಳತೆಯನ್ನು ವಿವರಿಸಿದರು.

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ 38 ಪಿಯು ಕಾಲೇಜುಗಳಿಂದ ಎನ್‍ಎಸ್‍ಎಸ್ ಸಂಚಾ ಲಕರು ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ನಾರಾಯಣ ಹೃದಯಾಲಯದ ಸರ್ಜಿ ಕಲ್ ಆಂಕೋಲಾಜಿಸ್ಟ್ ಡಾ.ಕೆ.ಆರ್.ಸುಹಾಸ್ ಕಾರ್ಯಾಗಾರ ಉದ್ಘಾಟಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಎನ್‍ಎಸ್‍ಎಸ್ ರಾಜ್ಯ ಸಂಚಾಲಕ ಡಾ.ಸಿ.ಜಿ.ಗುಬ್ಬಿಗೂಡು ರಮೇಶ್ ತಂಬಾಕು ಮುಕ್ತ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಪ್ರಭಾರ) ಡಾ.ಬಿ.ಎನ್.ನಾಗ ರತ್ನ, ಸಂಬಂಧ್ ಹೆಲ್ತ್ ಫೌಂಡೇಶನ್‍ನ ಹಿರಿಯ ಯೋಜನಾ ವ್ಯವಸ್ಥಾಪಕಿ ಸೋಮಿಲ್ ರಸ್ತಗಿ, ಕಾರ್ಯಕ್ರಮ ಸಂಯೋ ಜಕಿ ಪಿ.ಆರ್.ಗಾಯತ್ರಿ ರೆಡ್ಡಿ, ಮಹಾಜನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಉಮಾರಾಣಿ, ಎನ್‍ಎಸ್‍ಎಸ್ ಮೈಸೂರು ವಿಭಾಗೀಯ ಅಧಿಕಾರಿ ಡಾ.ಟಿ.ಕೆ.ರವಿ, ಮಹಾಜನ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಬಸವರಾಜಪ್ಪ ಮತ್ತಿತರರು ಹಾಜರಿದ್ದರು.

Translate »