ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ ಅಗತ್ಯ
ಮೈಸೂರು

ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ ಅಗತ್ಯ

December 10, 2019

ಮೈಸೂರು,ಡಿ.9(ಪಿಎಂ)-ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗುವ ಜನಪ್ರತಿನಿಧಿ ಗಳು ಹಾಗೂ ಪ್ರಭಾವಿಗಳ ವಿರುದ್ಧ ಕಠಿಣ ಕ್ರಮವಾಗ ಬೇಕು… ಪ್ರಕೃತಿ ವಿಕೋಪದಂತೆಯೇ ಮಾನಸಿಕ ವಿಕೃತಿಯೂ ವಿಕೋಪಕ್ಕೆ ಹೋಗುತ್ತಿದೆ… ಕಾನೂನು ಬಲವಾಗಿದ್ದರೂ ಅನುಷ್ಠಾನದ ಹಂತದಲ್ಲಿ ವಿಫಲವಾಗಿ ರುವುದು ಅಪರಾಧಿಗಳ ರಕ್ಷಣೆಗೆ ಕಾರಣವಾಗಿದೆ…

ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಆಲದ ಮರದ ಆವರಣದಲ್ಲಿ `ಸ್ತ್ರೀ ಶೋಷಣೆ ಮುಕ್ತ ಸಮಾಜ ನಿರ್ಮಾಣ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ `ಅತ್ಯಾಚಾರ ತಡೆಗೆ ಪರಿಹಾರ ಏನು? ದೇಶದ ವಿದ್ಯಮಾನ ಕುರಿತು ಮುಕ್ತ ಚರ್ಚೆ’ ಕಾರ್ಯಕ್ರಮದಲ್ಲಿ ಹೀಗೆ ಹತ್ತು ಹಲವು ಅಭಿಪ್ರಾಯಗಳು ವ್ಯಕ್ತವಾದವು.

ಚಿಂತಕಿ ಪ್ರೊ.ಚ.ಸರ್ವಮಂಗಳಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸ್ತ್ರೀಯನ್ನು ರಕ್ಷಿಸಬೇಕಾದ ಸಮಾಜ ಹಾಗೂ ಸರ್ಕಾರ ಕೈಕಟ್ಟಿ ಕುಳಿತಿವೆ. ಇಂತಹ ಪ್ರಕರಣಗಳನ್ನು ತಡೆ ಗಟ್ಟಲು ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಕಾನೂನು ಕ್ರಮಗಳ ಅಗತ್ಯವಿದೆ ಎಂದು ತಿಳಿಸಿದರು.

ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ ರಣದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳು, ಪಕ್ಷಗಳ ಮುಖಂಡರು, ಪ್ರಭಾವಿಗಳು ಹಣ-ಅಧಿಕಾರ ಬಳಸಿ ಕೊಂಡು ಜಾಮೀನು ಮೇಲೆ ಹೊರಬರುತ್ತಾರೆ. ಇಂಥ ಪ್ರಭಾವಿ ಆರೋಪಿಗಳಿಗೆ ಜಾಮೀನಿಗೆ ಅವಕಾಶ ವಿಲ್ಲ ದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಬೀದಿ ನಾಟಕಗಳು, ಜಾಗೃತಿ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ದೌರ್ಜನ್ಯ -ರಕ್ಷಣೆ ಕುರಿತು ಅರಿವು ಮೂಡಿಸಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ.ಹೆಚ್.ಎಂ.ವಸಂತಮ್ಮ ಮಾತನಾಡಿ, ಹೆಣ್ಣಿನ ಮೇಲಿನ ಶೋಷಣೆ ನಿರಂತರ ವಾಗಿ ನಡೆಯುವಂತಾಗಿದೆ. ದೇಶದಲ್ಲಿ 20 ನಿಮಿಷ ಕ್ಕೊಂದು ಸ್ತ್ರೀ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ, ಸಮಾಜ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ತ್ರೀ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸ ಬೇಕು ಎಂದು ಒತ್ತಾಯಿಸಿದರು.

ಲೇಖಕಿ, ಚಿಂತಕಿ ಪ್ರೊ.ಕೆ.ಸುಮಿತ್ರಾಬಾಯಿ ಮಾತ ನಾಡಿ, ಇತ್ತೀಚೆಗೆ ಪ್ರಕೃತಿ ವಿಕೋಪದಂತೆಯೇ ಮಾನಸಿಕ ವಿಕೃತಿಯೂ ವಿಕೋಪಕ್ಕೆ ಹೋಗುತ್ತಿದೆ. ಯುವಜನರ ನಡವಳಿಕೆ ವಿಕೃತಗೊಳ್ಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಕೆಲ ದೃಶ್ಯ ಮಾಧ್ಯಮಗಳು, ರಿಯಾಲಿಟಿ ಶೋಗಳಲ್ಲಿ ಬಿತ್ತರವಾಗುವ ಧಾರಾವಾಹಿ, ಹಾಸ್ಯ ಕಾರ್ಯಕ್ರಮಗಳು ಮೌಲ್ಯ, ನೈಜ ಹಾಸ್ಯ ಬಿತ್ತುತ್ತಿಲ್ಲ. ಇಲ್ಲಿ ನಾವು ಕೇಳುವ ಸಂಗೀತ, ನೋಡುವ ನೃತ್ಯ ವಿಕೃತಗೊಂಡಿವೆ. ಇದರಿಂದ ಸಮಾಜದ ವಾತಾವರಣ ಕಲುಷಿತಗೊಳ್ಳು ತ್ತಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳ ಮೇಲೆ ಸರ್ಕಾರ ನಿರ್ಬಂಧ ಹೇರಬೇಕು. ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಾಲ ಯದ ವಿಳಂಬ ನೀತಿ ಸಲ್ಲದು. ಸರ್ಕಾರಗಳು ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಬಂಧ ತ್ವರಿತ ನ್ಯಾಯಾ ಲಯಗಳ ಮೂಲಕ ಆರೋಪಿಗಳಿಗೆ ಶೀಘ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ ನಾಥ್ ಮಾತನಾಡಿ, ಚರ್ಚಾ ಕಾರ್ಯಕ್ರಮದ ಬಳಿಕ ನಿರ್ಣಯಗಳನ್ನು ಕೈಗೊಂಡು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ, ಮೈಸೂರು ವಿವಿ ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮರಿದೇವಯ್ಯ, ಕ್ರೆಡಿಟ್-ಐ ಸಂಸ್ಥೆಯ ಎಂ.ಪಿ.ಹರ್ಷ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Translate »