ಹನುಮ ಜಯಂತಿ: ರಂಜಿಸಿದ ಪೊಲೀಸ್ ವಾದ್ಯಗೋಷ್ಠಿ
ಮೈಸೂರು

ಹನುಮ ಜಯಂತಿ: ರಂಜಿಸಿದ ಪೊಲೀಸ್ ವಾದ್ಯಗೋಷ್ಠಿ

December 10, 2019

ಮೈಸೂರು, ಡಿ.9(ಎಸ್‍ಪಿಎನ್)- `ಹನುಮ ಜಯಂತಿ’ ಅಂಗವಾಗಿ ಕರ್ನಾ ಟಕ ಪೊಲೀಸ್ ವಾದ್ಯ ವೃಂದದ ಕಲಾ ವಿದರು ಸೋಮವಾರ ನಡೆಸಿಕೊಟ್ಟ `ವಾದ್ಯಗೋಷಿ’್ಠ ಮೈಸೂರಿನ ಹನುಮ ಭಕ್ತರ ಮನರಂಜಿಸಿತು.

ಮೈಸೂರು ಅರಮನೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಹನುಮ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿರುವ (ಡಿ.9ರಿಂದಡಿ.23ರವರೆಗೆ) ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಈ ವಾದ್ಯ ಗೋಷ್ಠಿ ನಡೆಸಿಕೊಟ್ಟರು.

ಈ ವಾದ್ಯಗೋಷ್ಠಿಯಲ್ಲಿ ಹನುಮನ ಕುರಿತು ಭಕ್ತಿ ಗೀತೆಗಳನ್ನು ಹಿಂದೂಸ್ಥಾನಿ ಶೈಲಿಯಲ್ಲಿ ನುಡಿಸಿ ಭಕ್ತರ ಮನ ರಂಜಿ ಸಿದರು. ನಂತರ ಕಲಾವಿದ ಸಾಗರ್ ಮತ್ತು ರಮ್ಯಶ್ರೀ ತಂಡದವರು ನಡೆಸಿ ಕೊಟ್ಟ ಸ್ಯಾಕ್ಸೋಫೋನ್ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು.

Translate »