ಮೈಸೂರು ಟೆನ್ನಿಸ್ ಕ್ಲಬ್ ಸುವರ್ಣ ಮಹೋತ್ಸವ
ಮೈಸೂರು

ಮೈಸೂರು ಟೆನ್ನಿಸ್ ಕ್ಲಬ್ ಸುವರ್ಣ ಮಹೋತ್ಸವ

December 10, 2019

ಮೈಸೂರು,ಡಿ.9-ಮೈಸೂರು ಟೆನ್ನಿಸ್ ಕ್ಲಬ್ (ಎಂಟಿಸಿ), ಟೆನ್ನಿಸ್ ಆಟವನ್ನು ಪ್ರೋತ್ಸಾಹಿಸುವ ಹಾಗೂ ಉತ್ತೇ ಜಿಸುವ ದೇಶದ ಪ್ರಾಥಮಿಕ ಟೆನ್ನಿಸ್ ಕ್ಲಬ್‍ಗಳಲ್ಲಿ ಒಂದಾಗಿದ್ದು, 1969 ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವವನ್ನು ಮೈಸೂರು ಟೆನ್ನಿಸ್ ಕ್ಲಬ್ ಆವರಣದಲ್ಲಿ ಭಾನುವಾರ ಸಂಜೆ ಆಚರಿಸಿಕೊಂಡಿತು.

ಮೈಸೂರು ಟೆನ್ನಿಸ್ ಕ್ಲಬ್ ಹಲವಾರು ಪ್ರತಿಭಾನ್ವಿತ ಟೆನ್ನಿಸ್ ಆಟಗಾರರನ್ನು ರೂಪಿಸಿದ್ದು, ಅವರು ದೇಶ ವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದಾರೆ.

ಮೈಸೂರು ಟೆನ್ನಿಸ್ ಕ್ಲಬ್ ಅನ್ನು ಟೆನ್ನಿಸ್ ಪ್ರಿಯ ರಾದ ಎಂ.ಹೆಚ್.ರಾಜಾರಾವ್, ಪಿ. ಪಟ್ಟಾಭಿ ರಾಮಯ್ಯ, ಬಿ.ಎಚ್.ಬೆಳ್ಳಿಯಪ್ಪ, ಡಿ.ವಸಂತ ಮಾಧವ್, ದಿವಂಗತ ಎನ್.ಸಿ.ಪೊನ್ನುಸ್ವಾಮಿ, ಶ್ರೀನಿವಾಸನ್ ಮತ್ತು ಕೆ.ಎಸ್.ಚಾರಿ ಅವರು 1969ರಲ್ಲಿ ಸ್ಥಾಪಿಸಿ ದರು. ಮೈಸೂರು ಟೆನ್ನಿಸ್ ಕ್ಲಬ್ ಎರಡು ಕ್ಲೇ ಕೋರ್ಟ್‍ಗಳೊಂದಿಗೆ ಆರಂಭಗೊಂಡಿತು. ಪ್ರಸ್ತುತ ಆರು ಸಿಂಥೆಟಿಕ್ ಕೋಟ್ರ್ಸ್, ಒಂದು ಕ್ಲೇ ಮತ್ತು ಎರಡು ಸಿಮೆಂಟ್ ಕೋಟ್ರ್ಸ್‍ಗಳನ್ನು ಹೊಂದಿದೆ.

ಅಗ್ರ ಶ್ರೇಯಾಂಕದ ಆಟಗಾರರಾದ ಎನ್.ಪಿ. ರಘು ವೀರ್, ರೋಹನ್ ಬೋಪಣ್ಣ, ಪ್ರಹ್ಲಾದ್ ಶ್ರೀನಾಥ್, ಆರ್.ನಾಗರಾಜ್, ನೀತ್ ದೇವಯ್ಯ, ಎಸ್.ಡಿ.ಪ್ರಜ್ವಲ್ ದೇವ್, ಸೂರಜ್ ಆರ್.ಪ್ರಬೋದ್, ಅಭಯ್ ಪ್ರಕಾಶ್, ಎಸ್.ಪ್ರತೀಕ್, ಡಿ.ಆರ್.ಜಯದೇವ, ಪೂಜಾಶ್ರೀ ವೆಂಕಟೇಶ್, ಧೃತಿ ಟಿ.ವೇಣುಗೋಪಾಲ್, ಸಿ.ವಶಿಷ್ಠ, ಜಿ.ಭರತ್‍ರಾಜ್, ಶ್ವೇತಾ ದೇವರಾಜ್ ಮತ್ತು ಲಿಖಿತಾ ದೇವರಾಜ್ ಈ ಕ್ಲಬ್‍ನಿಂದ ಬಂದ ಆಟಗಾರರಾಗಿದ್ದು, ದೇಶವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದಾರೆ.

ಮೈಸೂರು ಟೆನ್ನಿಸ್ ಕ್ಲಬ್‍ನ ವರ್ಣರಂಜಿತ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಕ್ಲಬ್‍ನ ಸ್ಥಾಪಕ ಸದಸ್ಯರಾದ ಪಿ. ಪಟ್ಟಾಭಿರಾಮಯ್ಯ, ಡಾ.ಎನ್.ಎಂ.ಶ್ರೀನಿವಾಸ್, ವಸಂತ ಮಾದವ್, ಸಂಪತ್ ಹೆಚ್.ಎಲ್.ಎನ್.ಅರಸ್, ಸಿ.ಎಸ್. ರಾಜನ್ ಹಾಗೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಕ್ಲಬ್‍ನ ಇತರ ಸದಸ್ಯರನ್ನು ಅಭಿನಂದಿಸಲಾಯಿತು. ಮೈಸೂರು ಟೆನ್ನಿಸ್ ಕ್ಲಬ್ ವತಿಯಿಂದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಕ್ಲಬ್‍ನ ಉದಯೋನ್ಮುಖ ಆಟಗಾರರಾದ ಎಸ್.ಡಿ.ಪ್ರಜ್ವಲ್ ದೇವ್, ಆರ್ಯನ್ ಪತಂಗೆ, ಆರ್ನವ್ ಪತಂಗೆ, ಜಿ. ಮಣಿಶ್, ಆರ್. ನಾಗರಾಜ್ ಮತ್ತು ನಿವೃತ್ತ ಆಟಗಾರರಾದ ಎಂ.ಜೆ. ಚರಣ್, ಸುಜಯ್, ರಾಘವ್ ಪ್ರಸಾದ್, ಜಿ. ಭರತ್‍ರಾಜ್ ಮತ್ತು ಇತರ ಆಟಗಾರರನ್ನು ಸನ್ಮಾನಿಸಲಾಯಿತು.

ಕ್ಲಬ್‍ನಲ್ಲಿ ನಡೆದ ಟೆನ್ನಿಸ್ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ವಿಭಾಗಗಳಲ್ಲಿ ವಿಜೇತರಾದ ಆಟ ಗಾರರಿಗೆ ಬಹುಮಾನ ವಿತರಿಸಲಾಯಿತು.

Translate »