ಕ್ರಿಸ್ತನ ಜನನದ ಸಂದೇಶ ಸಾರುವ ಕೆರೋಲ್ ಗಾಯನ ಸ್ಪರ್ಧೆ
ಮೈಸೂರು

ಕ್ರಿಸ್ತನ ಜನನದ ಸಂದೇಶ ಸಾರುವ ಕೆರೋಲ್ ಗಾಯನ ಸ್ಪರ್ಧೆ

December 10, 2019

ಮೈಸೂರು, ಡಿ.9(ಆರ್‍ಕೆಬಿ)- ಶಾಂತಿದೂತ ಕ್ರಿಸ್ತನ ಪ್ರೀತಿ ಮತ್ತು ಸಹನೆಯ ಸಂಕೇತವಾಗಿ ಜಾತಿ, ಮತ, ಭಾಷೆ ಭೇದವಿಲ್ಲದೆ ಕ್ರಿಸ್ತನ ಜನನದ ಸಂದೇಶವನ್ನು ಎಲ್ಲೆಡೆ ಸಾರುವ ಕೆರೋಲ್ ಗಾಯನ ಸ್ಪರ್ಧೆ ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ನಡೆಯಿತು.

ಕಾರ್ಮೆಲ್ ಕ್ಯಾಥೊಲಿಕ್ ಅಸೋಸಿಯೇಷನ್ ವತಿ ಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್, ಕೊಂಕಣಿ, ಮಲಯಾಳಂ, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಕೆರೋಲ್ ಗೀತೆಗಳನ್ನು ನೂರಾರು ಮಕ್ಕಳು ಹಾಡಿ ರಂಜಿಸಿದರು. ಶಿಶುವಿಹಾರ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಧಾರ್ಮಿಕ ತಂಡ ಸೇರಿದಂತೆ 12 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. ಪ್ರತಿ ತಂಡ ದಲ್ಲಿ 30ರಿಂದ 50 ಮಂದಿಯಂತೆ ಒಟ್ಟು 90 ತಂಡಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದರು. ಬೆಳಿಗ್ಗೆ ರೆ.ಥಾಮಸ್ ತೆನ್ನಟ್ಟಿಲ್ ಕೆರೋಲ್ ಗಾಯನ ಸ್ಪರ್ಧೆಗೆ ಚಾಲನೆ ನೀಡಿದರು. ಕಾರ್ಮಲ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜೋಸಫ್ ಚಾಕೋ ಅಧ್ಯಕ್ಷತೆ ವಹಿಸಿದ್ದರು. ರೆ.ಫಾ.ರೆನಿಶ್ ವರ್ಗೀಸ್ ಪುದುಸ್ಸೇರಿ ಅತಿಥಿಯಾಗಿ ಉಪಸ್ಥಿತರಿ ದ್ದರು. ಸ್ಪರ್ಧೆಗಳು ಸಂಜೆಯವರೆಗೂ ನಡೆದ ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Translate »