ನಾಳೆಯಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ‘ಮೈ ಬಿಲ್ಡ್-2019’
ಮೈಸೂರು

ನಾಳೆಯಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ‘ಮೈ ಬಿಲ್ಡ್-2019’

December 10, 2019

ಮೈಸೂರು,ಡಿ.9(ಎಂಟಿವೈ)- ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಡಿ.11ರಿಂದ 16ರವರೆಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ಮೈಬಿಲ್ಡ್-2019’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಆಯೋ ಜಿಸಲಾಗಿದೆ ಎಂದು ಮೈ ಬಿಲ್ಡ್-2019 ಅಧ್ಯಕ್ಷ ಎಸ್.ವಾಸುದೇವನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 19 ವರ್ಷದಿಂದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಮೈ ಬಿಲ್ಡ್ ವಸ್ತುಪ್ರದರ್ಶನ ಆಯೋಜಿಸಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆವಿಷ್ಕಾರಗೊಂಡಿರುವ ನೂತನ ತಂತ್ರಜ್ಞಾನ ಬಳಸಿ ತಯಾರಿಸಿರುವ ಕಟ್ಟಡ ಸಾಮಗ್ರಿಗಳು, ನವೀನ ಜೀವನ ಶೈಲಿಯ ವಸ್ತುಗಳ ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಈ ಬಾರಿಯೂ ಆರು ದಿನಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ 150 ಮಳಿಗೆಗಳಲ್ಲಿ ದೇಶ ವಿದೇಶಗಳ ಕಟ್ಟಡ ಸಾಮಗ್ರಿಗಳು, ಸೌರಶಕ್ತಿ ಯೋಜನೆ, ವಿದ್ಯುತ್ ಉಪಕರಣ, ಕಟ್ಟಡ ನಿರ್ಮಾಣದ ಯಂತ್ರಗಳು, ಜಲಸಂರಕ್ಷಣಾ ವಿಧಾನಗಳು, ನವೀನ ಮಾದರಿಯ ನೆಲಹಾಸುಗಳು, ಹೊರಾಂಗಣ ನೆಲಹಾಸುಗಳು, ನವೀನ ರೀತಿಯ ಬಣ್ಣ ಮತ್ತು ಸಾಮಗ್ರಿಗಳು, ಉತ್ಪಾದನೆಗೊಂಡ ಮರಳು ಇನ್ನಿತರÀ ಸಾಮಗ್ರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಬಿಎಐನ ಮಹಿಳಾ ಘಟಕ ಸ್ಪೂರ್ತಿ ಸಂಸ್ಥೆ ಪ್ರದರ್ಶನಕ್ಕೆ ಸಹಕಾರ ನೀಡುತ್ತಿದ್ದು, ಪ್ರತಿದಿನ ಸಂಜೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಯುವ ಗಾಯಕ ರಿಗೆ ಪ್ರೋತ್ಸಾಹ ನೀಡಲು ‘ವಾಯ್ಸ್ ಆಫ್ ಮೈ ಬಿಲ್ಡ್-19’ ಸಂಗೀತಗೋಷ್ಠಿ ಆಯೋಜಿ ಸಲಾಗಿದೆ. ಅಂತಿಮ ಸುತ್ತಿನಲ್ಲಿ ವಿಜೇತರಾದ ಗಾಯಕರಿಂದ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿ 15ರಂದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಡಿ.11ರಂದು ಸಂಜೆ 5ಕ್ಕೆ ಮೈಬಿಲ್ಡ್ ಪ್ರದರ್ಶನ ಉದ್ಘಾಟನೆಯಾಗಲಿದೆ. ಮುಖ್ಯ ಅತಿಥಿಗಳಾಗಿ ಮೇಯರ್ ಪುಷ್ಪಲತಾ ಜಗನ್ನಾಥ್, ಬಿಐಎ ಮೈಸೂರು ಅಧ್ಯಕ್ಷ ಬಿ.ಎಸ್.ದಿನೇಶ್, ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಆರ್.ಸ್ವಾಮಿ ಇತರರು ಪಾಲ್ಗೊಳ್ಳ ಲಿದ್ದಾರೆ. ಡಿ.16ರಂದು ಸಂಜೆ 5ಕ್ಕೆ ಮೈಬಿಲ್ಡ್ ವಸ್ತುಪ್ರದರ್ಶನ ಸಮಾರೋಪ ಸಮಾರಂಭ ನಡೆಯಲಿದೆ. ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ, ಬಿಎಐ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಶ್ರೀರಾಮ್ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಐಎ ಮೈಸೂರು ಘಟಕದ ಅಧ್ಯಕ್ಷ ಬಿ.ಎಸ್.ದಿನೇಶ್, ಕೇಂದ್ರದ ಕಾರ್ಯದರ್ಶಿ ಆರ್.ರಘುನಾಥ್, ಮೈ ಬಿಲ್ಡ್ ಕಾರ್ಯದರ್ಶಿ ಸತೀಶ್ ಮೋಹನ್ ಉಪಸ್ಥಿತರಿದ್ದರು.

Translate »