ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ
ಮೈಸೂರು

ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ

October 26, 2019

ಮೈಸೂರು,ಅ.25-ಅರಿವು ಸಂಸ್ಥೆ ವತಿ ಯಿಂದ ಜಯನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಆಯುಷ್ಯ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ಆಯುರ್ವೇದ ಗಿಡಗಳನ್ನು ನೆಡುವ ಮೂಲಕ ಮಕ್ಕಳಿಗೆ ಆಯುರ್ವೇದದಿಂದ ಆಗುವ ಉಪ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತ ನಾಡಿದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷÀ ವೈ.ಡಿ.ರಾಜಣ್ಣ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿ ಯಾಗಿದ್ದು ಇಂದು ವಿಶ್ವದ ಗಮನ ಸೆಳೆ ದಿದೆ. ಸಹಜ ಬದುಕಿನ ಆಹಾರ ಶೈಲಿ ಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ ಅಂಶಗಳಿದ್ದು ಇಂಥವುಗಳಿಗೆ ಹೆಚ್ಚು ಒತ್ತು ಕೊಡಬೇಕಿದೆ. ಈ ಹಿಂದೆ ತಾವು ತಿನ್ನುವ ಆಹಾರದಲ್ಲೇ ಔಷಧೀಯ ಗುಣವಿತ್ತು. ಇಂದು ಔಷಧಿಗಳೇ ಆಹಾರ ಕ್ರಮವಾಗಿರು ವುದು ವಿಪರ್ಯಾಸದ ಸಂಗತಿ. ಆಯು ರ್ವೇದದ ಸಸಿ ಗಿಡಗಳ ಪೆÇೀಷಣೆ ಮೂಲಕ ಮಕ್ಕಳಿಗೆ ಚಿಕ್ಕಂದಿನಲ್ಲೇ ಸೊಪ್ಪು ತರಕಾರಿ ಸೇವನೆಯ ಅಂಶಗಳ ಹಾಗೂ ಆಯುರ್ವೇದದ ಕುರಿತು ಅರಿವು ಮೂಡಿಸ ಬೇಕಾಗಿದೆ. ಎಲ್ಲದಕ್ಕೂ ಅಲೋಪತಿ ಔಷಧಿ ಮಾತ್ರೆಗಳೇ ಪರಿಹಾರವಲ್ಲ. ಸಹಜ ಬದು ಕಿನ ಕ್ರಮವಾಗಿ ಸೊಪ್ಪು, ತರಕಾರಿ ಸೇವನೆ, ಸಿರಿಧಾನ್ಯ, ಯೋಗ ಅಂತಹ ಜೀವನ ಕ್ರಮ ಗಳ ಬಗ್ಗೆ ಪ್ರತಿ ಶಾಲೆಗಳಲ್ಲೂ ಅಭಿಯಾನ ಹಮ್ಮಿಕೊಂಡಿದ್ದು, ಈ ದಿಸೆಯಲ್ಲಿ ಅರಿವು ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸು ತ್ತಿರುವ ಕ್ರಮ ಶ್ಲಾಘನೀಯವೆಂದು ಹೇಳಿದರು.

ನಗರಪಾಲಿಕೆ ಸದಸ್ಯೆ ಶೋಭಾ ಮಾತ ನಾಡಿ, ದಕ್ಷಿಣ ಆಫ್ರಿಕಾ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ದೇಶಗಳಲ್ಲಿ ಪಾರಂಪರಿಕ ವೈದ್ಯ ಪದ್ಧತಿಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ, ಭಾರತದಲ್ಲಿ ಈ ಪದ್ಧತಿಗೆ ಪೆÇ್ರೀತ್ಸಾಹ ನೀಡುವ ಕೆಲಸವನ್ನು ಯಾವ ಸರ್ಕಾ ರವೂ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ನಗರಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಮಾತನಾಡಿ, `ಮಧುಮೇಹದಿಂದ ದೇಶ ದಲ್ಲಿ ಪ್ರತಿ ವರ್ಷ 40 ಲಕ್ಷ ಜನ ದೃಷ್ಟಿ ಕಳೆದು ಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಅಲೋ ಪಥಿ ವೈದ್ಯ ಪದ್ಧತಿಯಲ್ಲಿ ಶಾಶ್ವತ ಪರಿ ಹಾರವಿಲ್ಲ. ಆಯುರ್ವೇದದಲ್ಲೂ ಪ್ರತಿ ರೋಗಕ್ಕೂ ಔಷಧವಿದೆ. ಜೊತೆಗೆ ದುಷ್ಪ ರಿಣಾಮದಿಂದ ಇನ್ನೊಂದು ರೋಗವೂ ಬರುತ್ತದೆ; ಶರೀರವೂ ಹಾಳಾಗುತ್ತದೆ. ಕೊನೆಯ ಮಾರ್ಗವಾಗಿಯಷ್ಟೇ ಪಾರಂಪರಿಕ ವೈದ್ಯರ ಬಳಿ ರೋಗಿಗಳು ಹೋಗುತ್ತಿರು ವುದು ಬೇಸರದ ಸಂಗತಿ’ ಎಂದರು.

ಮಾಜಿ ನಗರಪಾಲಿಕೆ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಉದ್ಯಮಿ ಅಪೂರ್ವ ಸುರೇಶ್, ಬಿಜೆಪಿ ಯುವ ಮುಖಂಡರಾದ ಕುಮಾರ್‍ಗೌಡ, ಮಂಜು ನಾಥ್, ಶ್ರೀನಿವಾಸ್ ರಾಕೇಶ್ ಹಾಗೂ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »