ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ
ಮೈಸೂರು

ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ

October 26, 2019

ಮೈಸೂರು,ಅ.25-ಸಮಸಮಾಜದ ಪರಿ ಕಲ್ಪನೆಯಲ್ಲಿ ಮಾನವಕುಲದ ಉದ್ಧಾರ ಕ್ಕಾಗಿ 12ನೇ ಶತಮಾನದಲ್ಲಿ ಮಹಾ ಮಾನ ವತಾವಾದಿ ಬಸವಣ್ಣ ನಡೆಸಿದ ವಚನ ಚಳ ವಳಿ ಮತ್ತೆ ಮರುಕಳಿಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆಯಲ್ಲಿ ಮೈಸೂರು ಆರ್ಟ್ ಗ್ಯಾಲರಿ ಸಂಸ್ಥೆಯು ಬಸವಣ್ಣನ ರೇಖಾಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಬಹುಮಾನ ವಿತ ರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಅಂದಿಗಿಂತಲೂ ಹೆಚ್ಚಾಗಿ ಇಂದು ಜಗತ್ತಿಗೆ ಬಸವಣ್ಣ ಬೇಕಾಗಿದ್ದಾನೆ. ವಚನ ಚಳವಳಿಯ ಅರಿವು ಮರೆಯಾಗ ದಂತೆ ಪ್ರತಿಯೊಬ್ಬರ ತಿಳಿವು ಆಗಿ ಬಸವ ಬೆಳಕು ಎಲ್ಲೆಡೆ ವ್ಯಾಪಿಸಬೇಕಾಗಿದೆ. ಈ ದಿಸೆಯಲ್ಲಿ ಖ್ಯಾತ ಚಿತ್ರಕಲಾವಿದ ಎಲ್. ಶಿವಲಿಂಗಪ್ಪ ಚಿತ್ರಕಲೆಯ ಮೂಲಕ ಬಸ ವಣ್ಣನನ್ನು ಮತ್ತು ಬಸವತತ್ವವನ್ನು ಎಲ್ಲ ರಿಗೂ ತಲುಪಿಸುವ ಸಾರ್ಥಕವಾದ ಕೆಲಸ ವನ್ನು ಮಾಡುತ್ತಿದ್ದಾರೆ. ಇದರ ಜೊತೆ ಜೊತೆ ಯಲ್ಲಿ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆಸುವ ಕಾರ್ಯವನ್ನೂ ಮಾಡುತ್ತಿದ್ದು, ವಿದ್ಯಾರ್ಥಿ ಗಳು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಚೆಲ್ಲಬೇಕೆಂದರು.

ಬಸವಣ್ಣನ ರೇಖಾಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸಯ್ಯದ್‍ಪಾಷ (ಪ್ರ), ಎಸ್.ಎಲ್. ಜೋಸೆಫ್ ಜಾನ್ (ದ್ವಿ), ಎಂ.ವಿನೋದ್ (ತೃ), ಎಂ.ಡಿ. ಮೊಹಿಶಿನ್‍ಖಾನ್ ಮತ್ತು ಮಹಮದ್ ಪೀರ್ (ಸ) ಅವರುಗಳಿಗೆ ಮೈಸೂರು ಆರ್ಟ್ ಗ್ಯಾಲರಿಯ ಖ್ಯಾತ ಚಿತ್ರಕಲಾವಿದ ಎಲ್.ಶಿವಲಿಂಗಪ್ಪ ಬಹುಮಾನ ವಿತರಿಸಿ ಗೌರವಿಸಿದರು. ಹಿರಿಯ ಶಿಕ್ಷಕ ಲಿಂಗ ರಾಜು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಾಂಸ್ಕøತಿಕ ಕಾರ್ಯದರ್ಶಿ ಸೋಮೇ ಗೌಡ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ನಟರಾಜ ಬಿಎಡ್ ಕಾಲೇ ಜಿನ ಚಿತ್ರಕಲಾ ಶಿಕ್ಷಕ ಮನೋಹರ್ ಮತ್ತು ಶಿಕ್ಷಕಿಯರಾದ ಗೀತಾ, ಸೌಮ್ಯ, ರಶ್ಮಿ ಮುಂತಾದವರು ಉಪಸ್ಥಿತರಿದ್ದರು.

Translate »