ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು
ಮೈಸೂರು

ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು

October 26, 2019

ಮೈಸೂರು, ಅ.24(ಎಂಕೆ)- ಸ್ವಾಮಿ ವಿವೇಕಾನಂದರ ತತ್ವಗಳನ್ನು ಅರ್ಥಮಾಡಿ ಕೊಂಡವರು ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮೈಸೂರು ವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು ಅಭಿಪ್ರಾಯಿಸಿದರು.
ಮಾನಸಗಂಗೋತ್ರಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ `ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಧರ್ಮ, ಸಂಸ್ಕøತಿ ಮತ್ತು ದೇಶಭಕ್ತಿಯ ಆಧ್ಯಾತ್ಮಿಕ ಧಾರೆ’ ಕುರಿತ 2 ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಶ್ರೇಷ್ಠ ದಾರ್ಶ ನಿಕರಾಗಿದ್ದು, ಅಖಂಡ ದೇಶಭಕ್ತಯೊಂದಿಗೆ ವೇದಾಂತ ತತ್ವಕ್ಕೆ ಹೊಸ ಹೊಳಪು ನೀಡಿ ದರು. ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದ ಅವರು, ನೀತಿ ಮತ್ತು ಸಂಸ್ಕøತಿಯನ್ನು ಯುವ ಜನತೆ ತಿಳಿಸಲು ಅಪಾರ ಶ್ರಮಿಸಿದರು. ಅವರಲ್ಲಿ ಮಾತೃಭಕ್ತಿ, ಗುರುಭಕ್ತಿ ಅಪಾರವಾಗಿತ್ತು ಎಂದು ಬಣ್ಣಿಸಿದರು. ತಮ್ಮ ಭಾಷಣ ಕೌಶಲ್ಯ ದಿಂದ ಎಲ್ಲರನ್ನು ಗೆದ್ದಿದ್ದ ಅವರು, ದೀನ ದಲಿತರ ಬದುಕನ್ನು ಮಂಗಳಕರ ವನ್ನಾ ಗಿಸಲು ಶ್ರಮಿಸಿದರು. ಸೇವೆ ಮತ್ತು ತ್ಯಾಗ ವಿವೇಕಾನಂದರ ಬದುಕಿನ ಆತ್ಮವಾಗಿತ್ತು ಎಂದರು. ಕಾಮನ ಬಿಲ್ಲಿಗಿರುವ 7 ಬಣ್ಣ ದಂತೆ ವಿವೇಕಾನಂದರ ವ್ಯಕ್ತಿತ್ವ ನೂರೆಂಟು ವೈವಿಧ್ಯಮಯದಿಂದ ಕೂಡಿತ್ತು. ಗಾಂಧೀಜಿ ಸೇರಿದಂತೆ ಹಲವಾರು ನಾಯಕರು ವಿವೇಕಾ ನಂದ ಬರಹ ಮತ್ತು ವಿಚಾರಗಳಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಶಿವಕಾಂತಾನಂದ ಸ್ವಾಮೀಜಿ, ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಯಲ್ಲಂಬಸಳೆ ಅನಂತನಾರಾಯಣ, ಸಂದರ್ಶಕ ಪ್ರಾಧ್ಯಾ ಪಕ ಪ್ರೊ.ವಿ.ಎನ್.ಶೇಷಗಿರಿರಾವ್, ತತ್ವಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಎಸ್.ವೆಂಕ ಟೇಶ್, ಸಹಾಯಕ ಪ್ರಾದ್ಯಾಪಕ ಡಾ.ಎಂ. ಡೇನಿಯಲ್ ಮತ್ತಿತರರು ಉಪಸ್ಥಿತರಿದ್ದರು.

Translate »