ರಂಗಾಯಣ ನಿರ್ದೇಶಕರಿಲ್ಲದಿದ್ದರೂ `ಬಹುರೂಪಿ’ಗೆ ಭರ್ಜರಿ ತಯಾರಿ
ಮೈಸೂರು

ರಂಗಾಯಣ ನಿರ್ದೇಶಕರಿಲ್ಲದಿದ್ದರೂ `ಬಹುರೂಪಿ’ಗೆ ಭರ್ಜರಿ ತಯಾರಿ

December 13, 2019
  • ನಾಟಕ ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿರುವ 60 ತಂಡಗಳು
  • 2 ಕನ್ನಡ ಸಿನಿಮಾ ಸೇರಿದಂತೆ 16 ಚಲನಚಿತ್ರಗಳ ಪ್ರದರ್ಶನ

ಮೈಸೂರು: ರಂಗಾಯಣದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ `ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ರಂಗಾ ಯಣ ನಿರ್ದೇಶಕರ ಅನುಪಸ್ಥಿತಿ ನಡುವೆಯೂ ಭರ್ಜರಿ ತಯಾರಿ ಮಾಡಿ ಕೊಳ್ಳಲಾಗು ತ್ತಿದೆ. ನಿರ್ದೇಶಕರು ನೇಮಕಗೊಂಡ ನಂತರ ವಷ್ಟೇ ಪ್ರದರ್ಶನಗೊಳ್ಳಲಿರುವ ನಾಟಕ ಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಬಿಜೆಪಿ ಸರ್ಕಾರ ಆರಂಭದಲ್ಲೇ ಮೈಸೂರು, ಧಾರವಾಡ, ಕಲಬುರಗಿ, ಶಿವಮೊಗ್ಗ ರಂಗಾ ಯಣದ ನಿರ್ದೇಶಕರನ್ನು ವಜಾಗೊಳಿ ಸಿತ್ತು. ಇದಕ್ಕೆ ಕೆಲವು ಹಿರಿಯ ರಂಗಕರ್ಮಿ ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತೆರ ವಾಗಿರುವ ನಿರ್ದೇಶಕರ ಸ್ಥಾನಕ್ಕೆ ಮೂರು ತಿಂಗಳಾದರೂ ಯಾರನ್ನೂ ನೇಮಿಸದೇ ಇರುವುದರಿಂದ ಈ ಬಾರಿ ಬಹುರೂಪಿ ಮಹತ್ವ ಕಳೆದುಕೊಳ್ಳಬಹುದು ಎಂಬ ಆತಂಕ ರಂಗಾಸಕ್ತರಲ್ಲಿ ಮೂಡಿತ್ತು. ಆದರೆ ರಂಗಾಯಣದ ಬಹುರೂಪಿಗೆ ಕಳಂಕ ಬರ ಬಾರದೆಂಬ ಉದ್ದೇಶದಿಂದ ರಂಗಾಯಣದ ಹಿರಿಯ ಕಲಾವಿದರು, ಸಹಾಯಕ ನಿರ್ದೇಶಕ ರೊಂದಿಗೆ ಕೈಜೋಡಿಸಿ, `ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಿದ್ಧತೆ ಮಾಡಿ ಕೊಳ್ಳಲು ಮುಂದೆ ಬಂದಿದ್ದಾರೆ. ಬಹು ರೂಪಿ ಕಾರ್ಯಕ್ರಮದ ರೂಪು-ರೇಷೆ ಸಿದ್ಧಪಡಿಸಿದ್ದಾರೆ. ಕನ್ನಡದ  25 ನಾಟಕ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ 60 ರಂಗತಂಡಗಳು ಬಹುರೂಪಿಯಲ್ಲಿ ನಾಟಕ ಪ್ರದರ್ಶಿಸಲು ಮುಂದೆ ಬಂದಿವೆ. ಎಲ್ಲಾ ನಾಟಕಗಳು ಈ ನಾಟಕೋತ್ಸವ ದಲ್ಲಿ ಪ್ರದರ್ಶನಗೊಳ್ಳುವ ಅರ್ಹತೆ ಹೊಂದಿವೆ. ಈ ಬಾರಿ ಬಹುರೂಪಿ 7 ದಿನ ನಡೆದರೆ 21 ನಾಟಕ, 8 ದಿನ ನಡೆದರೆ 24 ನಾಟಕ ಆಯ್ಕೆ ಮಾಡಬೇಕಾಗುತ್ತದೆ. ಅದರಲ್ಲಿ ಪ್ರತಿದಿನ ಒಂದು ಕನ್ನಡದ ನಾಟಕ ಪ್ರದರ್ಶನ ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ.

ಮೂರು ವೇದಿಕೆ: ಕಲಾಮಂದಿರದ ಮುಖ್ಯ ವೇದಿಕೆಯನ್ನು ಈ ಬಾರಿ ಬಹು ರೂಪಿ ನಾಟಕೋತ್ಸವಕ್ಕೆ ಬಳಸಿಕೊಳ್ಳುತ್ತಿಲ್ಲ. ವೀಕ್ಷಕರ ಕೊರತೆ ಹಿನ್ನೆಲೆಯಲ್ಲಿ ಕಲಾ ಮಂದಿರದಿಂದ ಕಿರುರಂಗಮಂದಿರಕ್ಕೆ ನಾಟಕ ಸ್ಥಳಾಂತರಗೊಂಡಿದೆ. ಭೂಮಿಗೀತ ಮುಖ್ಯ ವೇದಿಕೆಯಾದರೆ, ವನರಂಗ ಹಾಗೂ ಕಿರು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿವೆ. ಸಂಜೆ.6.30ಕ್ಕೆ ಭೂಮಿಗೀತ ಸಭಾಂಗಣದಲ್ಲಿ ನಾಟಕ ಪ್ರದರ್ಶನಗೊಂಡರೆ, ವನರಂಗ ಹಾಗೂ ಕಿರುರಂಗಮಂದಿರದಲ್ಲಿ 7 ಗಂಟೆಗೆ ಪ್ರದ ರ್ಶನ ಆರಂಭಿಸಲು ನಿರ್ಧರಿಸಲಾಗಿದೆ.

ಕಿಂದರಜೋಗಿ ಮುಂದೆ ಕಲೋತ್ಸವ: ಕಲಾಮಂದಿರದ ಕಿಂದರಜೋಗಿ ಆವರಣ ದಲ್ಲಿ ಈ ಬಾರಿಯೂ ಸಾಂಸ್ಕøತಿಕ ಕಾರ್ಯ ಕ್ರಮ ಜರುಗಲಿವೆ. ಯಕ್ಷಗಾನ, ಕಲರಿಪ ಯಟ್, ಕಂಸಾಳೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಪ್ರಕಾರಗಳ ಪ್ರದರ್ಶನ ಕಾರ್ಯ ಕ್ರಮ ರಂಗಾಸಕ್ತರನ್ನು ರಂಜಿಸಲಿವೆ.

ಆಹಾರ, ಪುಸ್ತಕ, ಕರಕುಶಲ ಮೇಳ: ಬಹುರೂಪಿಯಲ್ಲಿ ಹಸಿದವರ ನಾಲಿಗೆಗೆ ರುಚಿ ಉಣಿಸಲು ಈ ಬಾರಿಯೂ ಪುಸ್ತಕ ಹಾಗೂ ಆಹಾರ ಮೇಳ ಆಯೋಜಿಸಲಾಗು ತ್ತಿದೆ. ಉತ್ತರ ಕರ್ನಾಟಕ ಶೈಲಿ ಆಹಾರ, ವಿವಿಧ ತಿನಿಸುಗಳ ಮಳಿಗೆ, ವಿವಿಧ ಪ್ರಕಾಶನ ಸಂಸ್ಥೆಗಳ ವತಿಯಿಂದ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆ ತಲೆ ಎತ್ತಲಿವೆ. ಅಲ್ಲದೆ ಹೊರ ರಾಜ್ಯ ಸೇರಿದಂತೆ ವಿವಿಧೆಡೆಗ ಳಿಂದ ಬರುವ ಕರಕುಶಲ ಕರ್ಮಿಗಳು ತಾವು ತಯಾರಿಸಿದ ವಸ್ತುಗಳ ಮಾರಾಟಕ್ಕಾಗಿ ಮಳಿಗೆ ಬುಕ್ ಮಾಡಿದ್ದಾರೆ.

ಅಂತಿಮ ಮುದ್ರೆಯೊಂದೇ ಬಾಕಿ: ಬಹು ರೂಪಿ ಯಶಸ್ಸಿಗಾಗಿ ಸಿದ್ಧತೆಯನ್ನು ತೆರೆಮರೆ ಯಲ್ಲಿ ಮಾಡಿಕೊಳ್ಳಲಾಗಿದೆ. ವಿವಿಧ ಜವಾಬ್ದಾರಿಯನ್ನು ಹಿರಿಯ ಕಲಾವಿದರು ನಿರ್ವಹಿಸಲು ಹಂಚಿಕೆ ಮಾಡಲಾಗಿದೆ. ಸರ್ಕಾರ ಈ ವಾರದಲ್ಲಿ ರಂಗಾಯಣಕ್ಕೆ ನಿರ್ದೇಶಕರನ್ನು ನಿಯೋಜಿಸುವ ಸಾಧ್ಯತೆ ಯಿದ್ದು, ಆನಂತರ 60 ನಾಟಕಗಳಲ್ಲಿ 21 ಅಥವಾ 24 ನಾಟಕಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ಹೊರಗಿ ನಿಂದ ಬರುವ ಕಲಾವಿದರು ಹಾಗೂ ಗಣ್ಯರಿಗೆ ಪ್ರಯಾಣದ ವ್ಯವಸ್ಥೆ ಮಾಡುವುದು (ಟಿಕೆಟ್ ಅಥವಾ ವಾಹನ ಬುಕ್ ಮಾಡಲು), ಬಹುರೂಪಿ ನಾಟಕೋತ್ಸವಕ್ಕೆ ಥೀಮ್ ಅಂತಿಮಗೊಳಿಸಲಿದ್ದಾರೆ. ಪ್ರಸ್ತುತ ವಿಷಯಕ್ಕೆ ಅನುಗುಣವಾಗಿ ಥೀಮ್ ನೀಡಲು ಎರಡು ವಿಷಯ ಆಯ್ಕೆ ಮಾಡಲಾಗಿದೆ. ಅದರಲ್ಲಿ ಒಂದನ್ನು ನಿರ್ದೇಶಕರು ಅಂತಿಮ ಗೊಳಿಸಬೇಕಾಗಿದೆ. ವಿಚಾರ ಸಂಕಿರಣದ ವಿಷಯವನ್ನು ನಿರ್ಧರಿಸಬೇಕಿದೆ.

 

ಎಂ.ಟಿ.ಯೋಗೇಶ್ ಕುಮಾರ್

Translate »