ಕ್ಯಾನ್ಸರ್‍ಗೆ ಬದಲಾದ ಜೀವನ ಶೈಲಿಯೂ ಕಾರಣ
ಮೈಸೂರು

ಕ್ಯಾನ್ಸರ್‍ಗೆ ಬದಲಾದ ಜೀವನ ಶೈಲಿಯೂ ಕಾರಣ

December 13, 2019

ಮೈಸೂರು, ಡಿ.12(ಪಿಎಂ)- ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ಮಾರಕ ಕಾಯಿಲೆಗಳ ಹೆಚ್ಚಳಕ್ಕೆ ಬದಲಾಗುತ್ತಿರುವ ಜೀವನ ಶೈಲಿಯೂ ಪ್ರಮುಖ ಕಾರಣ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸ ಗಂಗೋ ತ್ರಿಯ ವಿಜ್ಞಾನ ಭವನದಲ್ಲಿ ವಿವಿಯ ಎನ್‍ಎಸ್‍ಎಸ್ ಘಟಕ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂ ರಿನ ಯೆನೆಪೋಯ ವಿವಿ ಸಂಯುಕ್ತಾಶ್ರಯ ದಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳ ಎನ್‍ಎಸ್‍ಎಸ್ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂ ಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಬಡತನದೊಂದಿಗೆ ಅಪೌಷ್ಟಿಕತೆ ಹಾಗೂ ಸಾಂಕ್ರಾಮಿಕ ಕಾಯಿಲೆಗಳು ದೊಡ್ಡ ಸವಾ ಲಾಗಿ ಪರಿಣಮಿಸಿವೆ. ಇದರೊಂದಿಗೆ ಬದ ಲಾಗುತ್ತಿರುವ ಜೀವನ ಶೈಲಿ, ಕೈಗಾರೀಕರಣ, ನಗರಿಕರಣದ ಅಭಿವೃದ್ಧಿ ಭರಾಟೆಯಲ್ಲಿ ಕ್ಯಾನ್ಸರ್, ಮಧುಮೇಹ, ಪಾಶ್ರ್ವವಾಯು ಹಾಗೂ ಶ್ವಾಸಕೋಶದ ಸಮಸ್ಯೆಯ ಸಾಂಕ್ರಾ ಮಿಕವಲ್ಲದ ಕಾಯಿಲೆಗಳು ಈ ದೇಶಗಳಿಗೆ ಮತ್ತೂ ಸಮಸ್ಯೆಯಾಗಿ ಕಾಡತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿ ಸಿದರೆ ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಕಡಿಮೆ ಇದೆ. ದೇಶದ ಪುರುಷರಲ್ಲಿ ಶ್ವಾಸ ಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬಂದರೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿವೆ. ಕಳೆದ ಮೂರು ದಶಕಗಳಿಂದ ಮುಂದುವರೆದ ರಾಷ್ಟ್ರಗಳಲ್ಲಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಪರಿ ಣಾಮಕಾರಿ ಆಗಿದೆ. ಶೀಘ್ರ ಪತ್ತೆಯಿಂದಾಗಿ ಅಲ್ಲಿ ಮರಣ ಪ್ರಮಾಣ ಇಳಿಮುಖವಾ ಗಿದೆ. ಇದೇ ರೀತಿಯ ಪ್ರಯತ್ನಗಳು ಭಾರತ ದಲ್ಲೂ ಮುಂದುವರೆದಿದೆ ಎಂದರು.

ಇಂದಿನ ಕಾರ್ಯಾಗಾರ ಕ್ಯಾನ್ಸರ್ ಎಂಬ ಗಂಭೀರ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿದೆ. ಭಾರತದಂತಹ ದೇಶದಲ್ಲಿ ಅನಾರೋಗ್ಯದ ಕುರಿತು ಜಾಗೃತಿಯನ್ನು ಕೇವಲ ವೈದ್ಯರು ಮಾಡುವುದು ಕಷ್ಟ ಸಾಧ್ಯ. ಹೀಗಾಗಿ ಇಂದಿನ ಕಾರ್ಯಾಗಾರದಲ್ಲಿ ಕ್ಯಾನ್ಸರ್ ಬಗೆಗೆ ಹೆಚ್ಚು ವಿಚಾರ ಗ್ರಹಿಸಿ ವಿದ್ಯಾರ್ಥಿ ಸಮೂಹ ಹಾಗೂ ಸಮಾಜದಲ್ಲಿ ಈ ಮಾರಕ ಕಾಯಿಲೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿ ಕಾರಿ ಡಾ.ಬಿ.ಚಂದ್ರಶೇಖರ್, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರೆ ತನ್ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಉಂಟು ಮಾಡ ಬಹುದು ಎಂಬ ಉದ್ದೇಶದಿಂದ ಈ ಕಾರ್ಯಾ ಗಾರ ಆಯೋಜಿಸಲಾಗಿದೆ ಎಂದರು.

ಮೈಸೂರು ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ 50ಕ್ಕೂ ಹೆಚ್ಚು ಮಂದಿ ಎನ್‍ಎಸ್‍ಎಸ್ ಅಧಿಕಾರಿಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು. ಯೆನೆಪೋಯ ವಿವಿ ಸರ್ಜಿಕಲ್ ಆಕೋಲಾಜಿ ವಿಭಾಗದ ಡಾ.ಹೆಚ್.ಟಿ.ಅಮರ್‍ರಾವ್, ದಂತ ವೈದ್ಯ ಕೀಯ ವಿಭಾಗದ ಡಾ.ಇಮ್ರಾನ್ ಪಾಷ, ಎನ್‍ಎಸ್‍ಎಸ್ ಕಾರ್ಯಕ್ರಮ ಸಂಚಾಲಕಿ ಡಾ.ಅಶ್ವಿನಿಶೆಟ್ಟಿ ಮತ್ತಿತರರು ಹಾಜರಿದ್ದರು.

Translate »