ಔಷಧಗಳ ಅಡ್ಡ ಪರಿಣಾಮ ನಿವಾರಣೆಗೆ ಹೆಚ್ಚು ಸಂಶೋಧನೆ ಅಗತ್ಯ
ಮೈಸೂರು

ಔಷಧಗಳ ಅಡ್ಡ ಪರಿಣಾಮ ನಿವಾರಣೆಗೆ ಹೆಚ್ಚು ಸಂಶೋಧನೆ ಅಗತ್ಯ

December 13, 2019

ಮೈಸೂರು, ಡಿ.12(ಪಿಎಂ)- ಔಷಧ ಗಳ ಅಡ್ಡ ಪರಿಣಾಮ ನಿವಾರಣೆ ಕುರಿತಂತೆ ಹೆಚ್ಚು ಸಂಶೋಧನೆಗಳು ಅಗತ್ಯ ಎಂದು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ.ಸುರೀಂದರ್ ಸಿಂಗ್ ಹೇಳಿದರು.

ಮೈಸೂರಿನ ಬನ್ನಿಮಂಟಪದ ಜೆಎಸ್‍ಎಸ್ ಔಷಧ ವಿಜ್ಞಾನ ಮಹಾ ವಿದ್ಯಾಲಯದ ಶ್ರೀರಾಜೇಂದ್ರ ಸಭಾಂಗಣ ದಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ಮೈಸೂರು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 58ನೇ ರಾಷ್ಟ್ರೀಯ ಔಷಧ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಒಂದು ಅನಾರೋಗ್ಯ ಸಮಸ್ಯೆ ನಿವಾರಿ ಸಲು ಬಳಸುವ ಔಷಧ ಅಡ್ಡ ಪರಿಣಾಮದ ಮೂಲಕ ರೋಗಿಗಳಿಗೆ ಮತ್ತೊಂದು ನೋವು ಅನುಭವಿಸುವಂತೆ ಮಾಡುತ್ತದೆ. ಹೀಗಾಗಿ ಅಡ್ಡ ಪರಿಣಾಮ ಇಲ್ಲದ ಔಷಧಗಳ ಸಂಬಂಧ ಹೆಚ್ಚು ಸಂಶೋಧನೆಗಳು ಆಗ ಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಕೇವಲ ಎರಡು ಆಸ್ಪತ್ರೆಗಳಲ್ಲಿ ಮಾತ್ರವೇ ಔಷಧ ಅಡ್ಡ ಪರಿಣಾಮಗಳನ್ನು ವರದಿ ಮಾಡುವ ವ್ಯವಸ್ಥೆ ಇದೆ. ಅಹಮ ದಾಬಾದ್‍ನ ಬಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಔಷಧಗಳ ಅಡ್ಡ ಪರಿಣಾಮ ಕುರಿತು ವರದಿ ಮಾಡುವ ವ್ಯವಸ್ಥೆ ಇದೆ. ಔಷಧ ತಜ್ಞರು ಔಷಧಗಳ ಅಡ್ಡ ಪರಿಣಾಮಗಳ ನಿವಾರಣೆಗೆ ಹೆಚ್ಚು ಸಂಶೋಧನೆ ಮಾಡ ಬೇಕೆಂದು ಸಲಹೆ ನೀಡಿದರು. ಇದೇ ವೇಳೆ ಔಷಧ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಾಗಿ ಡಾ.ಎಸ್.ಎನ್.ಮಂಜುಳಾ ಹಾಗೂ ಡಾ.ಶರಣಬಾಬು ಅವರನ್ನು ಸನ್ಮಾನಿಸ ಲಾಯಿತು. ಅಲ್ಲದೆ, ಸಪ್ತಾಹದ ಅಂಗವಾಗಿ ನಡೆದ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಎಸ್3ವಿ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ಬದ್ರಿ ನಾರಾಯಣ್, ಇಂಡಿ ಯನ್ ಫಾರ್ಮಸ್ಯೂಟಿಕಲ್ ಅಸೋಸಿ ಯೇಷನ್ ಮೈಸೂರು ಘಟಕದ ಅಧ್ಯಕ್ಷ ಡಾ.ಟಿ.ಎಂ.ಪ್ರಮೋದ್ ಕುಮಾರ್, ಖಜಾಂಚಿ ಡಾ.ಬಿ.ಎಂ.ಗುರುಪಾದಯ್ಯ, ಕಾವೇರಿ ಫಾರ್ಮಸಿ ಕಾಲೇಜು ಪ್ರಾಂಶು ಪಾಲ ಡಾ.ಎಂ.ಮಂಜುನಾಥ್, ಫಾರು ಖಿಯಾ ಫಾರ್ಮಸಿ ಕಾಲೇಜು ಪ್ರಾಂಶು ಪಾಲ ಡಾ.ಮಹಮ್ಮದ್ ಸಲಾವುದ್ದೀನ್, ಶಾರದಾವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಹನುಮಂತಾಚಾರ್ ಜೋಶಿ ಮತ್ತಿತರರು ಹಾಜರಿದ್ದರು.

Translate »