ಹೊಸದಿಲ್ಲಿ: ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್‍ಗಳನ್ನು 4 ಬೃಹತ್ ಬ್ಯಾಂಕ್ ಗಳಾಗಿ ರೂಪಿಸುವ ವಿಲೀನ ಪ್ರಕ್ರಿಯೆಗೆ ಸಂಪುಟ ಸಭೆ ಬುಧವಾರ ಅಸ್ತು ಎಂದಿದೆ. ಏ.1ರಿಂದ ವಿಲೀನವು ಜಾರಿಗೆ ಬರ ಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‍ಗಳ ಜೊತೆ ಸರಕಾರವು ಸಂಪರ್ಕದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿಲೀನ ಪ್ರಕ್ರಿಯೆ ಸಂಬಂಧ ಯಾವುದೇ ತೊಡಕುಗಳಿಲ್ಲ ಎಂದೂ ಸಚಿವೆ ಹೇಳಿ ದ್ದಾರೆ. ಏ.1ರಿಂದ ಗ್ರಾಹಕರಿಗೆ ಬ್ಯಾಂಕ್ ವಿಲೀನವು ಅನುಭವಕ್ಕೆ ಬರಲಿದೆ. ಜಾಗತಿಕ ಬ್ಯಾಂಕ್‍ಗಳ ಗಾತ್ರಕ್ಕೆ ಹೊಂದು ವಂಥ ಬೃಹತ್ ಬ್ಯಾಂಕ್‍ಗಳನ್ನು ದೇಶ ದಲ್ಲಿ ರೂಪಿಸುವುದು ವಿಲೀನದ ಉದ್ದೇಶ. ಬ್ಯಾಂಕ್ ವಿಲೀನದ ತೀರ್ಮಾನವನ್ನು ಕೇಂದ್ರ ಸರಕಾರವು 2019ರ ಏಪ್ರಿಲ್ ನಲ್ಲಿ ಪ್ರಕಟಿಸಿತ್ತು. ಕಳೆದ ವರ್ಷ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್‍ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿತ್ತು. ಎಸ್‍ಬಿಐನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಐದು ಸಹವರ್ತಿ ಬ್ಯಾಂಕ್‍ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗಿತ್ತು.
ಈ ಮೂಲಕ ಕರ್ನಾಟಕ ಮೂಲದ ಒಟ್ಟು ನಾಲ್ಕು ಬ್ಯಾಂಕ್‍ಗಳು ಇತಿಹಾಸದ ಪುಟ ಸೇರಲಿವೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್ ಕಣ್ಮರೆಯಾಗಿದ್ದು, ಇದೀಗ ಈ ಸಾಲಿಗೆ ಸಿಂಡಿಕೇಟ್ ಬ್ಯಾಂಕ್ ಮತ್ತು ಕಾಪೆರ್Çರೇಷನ್ ಬ್ಯಾಂಕ್ ಸೇರಲಿದೆ. ಸದ್ಯ ಉಳಿದುಕೊಂಡಿರುವುದು ಕೆನರಾ ಬ್ಯಾಂಕ್ ಮಾತ್ರ.
ವಿಲೀನಗೊಳ್ಳಲಿರುವ ಬ್ಯಾಂಕ್‍ಗಳು: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕೆನರಾ ಬ್ಯಾಂಕ್‍ನಲ್ಲಿ ಸಿಂಡಿಕೇಟ್ ಬ್ಯಾಂಕ್ ಇಂಡಿಯನ್ ಬ್ಯಾಂಕ್ ನಲ್ಲಿ ಅಲಹಾಬಾದ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾಪೆರ್Çರೇಷನ್ ಬ್ಯಾಂಕ್ ಮತ್ತು ಆಂಧ್ರಾ ಬ್ಯಾಂಕ್