ನವದೆಹಲಿ: 2021ರಲ್ಲಿ ಮೊದಲ 6 ತಿಂಗಳಲ್ಲಿಯೇ ಇಸ್ರೋ ಚಂದ್ರ ಯಾನ-3 ಉಡಾ ವಣೆ ಆಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸುಳಿವು ನೀಡಿದ್ದಾರೆ. ಚಂದ್ರಯಾನ-2 ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದ ರಿಂದ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ ನಡೆಸಿಕೊಂಡಿದೆ. ಚಂದ್ರಯಾನ-2ರಿಂದ ಕಲಿತ ಪಾಠದಿಂದ ಚಂದ್ರಯಾನ-3ನ್ನು ಸಿದ್ಧಗೊಳಿಸಲಾಗುತ್ತಿದೆ. 2021ರ ಮೊದಲ 6 ತಿಂಗಳಲ್ಲಿ ಚಂದ್ರಯಾನ-3 ನಭಕ್ಕೆ ಚಿಮ್ಮುವ ಸಾಧ್ಯತೆಗಳಿವೆ. ಚಂದ್ರಯಾನ-2 ಅಸಫ ಲತೆಯಲ್ಲಿ ಕಲಿತ ಹಲವು ಪಾಠಗಳಿಂದ ಚಂದ್ರಯಾನ-3ಡಿಸೈನ್ ಮಾಡಲಾಗುತ್ತಿದೆ. ಕ್ಷಮತೆ, ತಂತ್ರಜ್ಞಾನ, ಸಂಪರ್ಕ ಸಾಧಕ ಸೇರಿದಂತೆ ಸುಧಾ ರಿತ ತಂತ್ರಜ್ಞಾನ ವನ್ನು ಚಂದ್ರಯಾನ-3 ಹೊಂದಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.