ಮೈಸೂರು, ಮಾ.4(ಆರ್‍ಕೆ)- ಕೊರೊನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.
ಮೈಸೂರಿನಿಂದ ಗೋವಾ, ಹೈದರಾ ಬಾದ್, ಬೆಂಗಳೂರು, ಚೆನ್ನೈ, ಬೆಳಗಾವಿ ನಗರಗಳಿಗೆ ಹೋಗಿ ಬರುತ್ತಿರುವ ವಿಮಾನ ಗಳ ಪ್ರಯಾಣಿಕರಿಂದ ಕೊರೊನಾ ವೈರಸ್ ಹರಡಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲೇ ಆರೋಗ್ಯ ತಪಾ ಸಣೆ ಮಾಡಲಾಗುತ್ತಿದೆ. ಒಂದು ವೇಳೆ ಜ್ವರ, ಶೀತ, ಕೆಮ್ಮಿನ ಲಕ್ಷಣ ಕಂಡು ಬಂದಲ್ಲಿ ಅಂತಹವರನ್ನು ಕೆ.ಆರ್.ಆಸ್ಪತ್ರೆಗಳಲ್ಲಿ ತಪಾ ಸಣೆಗೊಳಪಡಿಸಿ ಅಗತ್ಯ ಬಿದ್ದರೆ ಒಳರೋಗಿ ಗಳಾಗಿ ದಾಖಲಿಸಿ ಚಿಕಿತ್ಸೆ ನೀಡುವ ಜತೆಗೆ ರಕ್ತದ ಸ್ಯಾಂಪಲ್ ತೆಗೆದು ಪ್ರಯೋಗಾ ಲಯಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ವೆಂಕಟೇಶ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವ ಹಿಸುವ ಸಿಬ್ಬಂದಿ, ಪೊಲೀಸ್ ಸಿಬ್ಬಂ ದಿಗೂ ಮಾಸ್ಕ್‍ಗಳನ್ನು ವಿತರಿಸಲಾಗಿದ್ದು, ಸ್ಥಳದಲ್ಲಿ ಕೊರೊನಾ ವೈರಸ್ ನಿಯಂ ತ್ರಣ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಫಲಕಗಳನ್ನು ಹಾಕಲಾಗಿದೆ. ಅದೇ ರೀತಿ ಸಬರ್ಬನ್ ಬಸ್ ಸ್ಟ್ಯಾಂಡ್, ರೈಲು ನಿಲ್ದಾಣ ಗಳಲ್ಲೂ ಕೊರೊನಾ ವೈರಸ್ ಭೀತಿ ಹಿನ್ನೆಲೆ ಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅರಿವು ಮೂಡಿಸಲಾಗು ತ್ತಿದೆ. ಮೈಸೂರು ಅರಮನೆ, ಮೃಗಾಲಯ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿಗೆ ಮಾಸ್ಕ್ ವಿತರಿಸಿ ಮುಂಜಾ ಗ್ರತಾ ಕ್ರಮ ವಹಿಸಿ ಅಲ್ಲಿಗೆ ಬರುವ ಪ್ರವಾಸಿ ಗರಿಗೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಗಡಿ ಭಾಗದ ಗ್ರಾಮಗಳು, ಹಾಡಿ ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಂಡವು ಆರೋಗ್ಯ ತಪಾಸಣೆ ಮಾಡಿಸುತ್ತಿದೆ.