ಮಂಡ್ಯ: ಹೋಬಳಿ ಕೇಂದ್ರ ಬಸ ರಾಳಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿರುವ 108 ಆಂಬ್ಯುಲೆನ್ಸ್ ವಾಹನವು 108 ಸಮಸ್ಯೆಗಳಿಂದ ಬಳಲುತ್ತಿದೆ ಎನ್ನಲಾಗಿದೆ.
ಬಸರಾಳು ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲ 50 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಈ ಆಂಬ್ಯು ಲೆನ್ಸ್ ನಂಬಿಕೊಂಡು ರೋಗಿಗಳು ಹೈರಾಣಾಗಿದ್ದಾರೆ.
ಏನೇನ್ ಸಮಸ್ಯೆ: ಈ ಆಂಬ್ಯುಲೆನ್ಸ್ ವಾಹನದ 4 ಚಕ್ರ ಮತ್ತು ಸ್ಟೆಪ್ನಿ ಸಂಪೂರ್ಣ ಸವೆದು ಹೋಗಿವೆ. ವಾಹನ ಸಂಪೂರ್ಣ ವಾಗಿ ಹಳೆಯದಾಗಿದ್ದು, ಪ್ರತಿನಿತ್ಯ ಈ ವಾಹನವನ್ನು ತಳ್ಳಿಕೊಂಡು ಸ್ಟಾರ್ಟ್ ಮಾಡಬೇಕಾಗಿದೆ. ಕಾರಣ ಬ್ಯಾಟರಿ ಇರುವುದಿಲ್ಲ. ಇನ್ನು ಪಂಕ್ಚರ್ ಆದರೆ ಇರುವ ಟೈರನ್ನು ಬದಲಾಯಿಸಲು ವಾಹನ ದಲ್ಲಿ ಉಪಕರಣವೇ ಇಲ್ಲ. ಪ್ರತಿನಿತ್ಯ ವಾಹನದಲ್ಲಿ ರೋಗಿಗಳನ್ನು ಸಾಗಿಸುವಾಗ ಅಲ್ಲಲ್ಲೇ ರಸ್ತೆ ಮಧ್ಯೆ ಹಲವು ಬಾರಿ ಕೆಟ್ಟುನಿಂತ ನಿದರ್ಶನಗಳು ಸಾಕಷ್ಠಿವೆ ಎನ್ನಲಾಗಿದೆ.
ಈ ಕೂಡಲೇ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಬಸರಾಳು ಕೇಂದ್ರಕ್ಕೆ ನೂತನ ಆಂಬ್ಯು ಲೆನ್ಸ್ ಒದಗಿಸುವ ಬಗ್ಗೆ ಗಮನಹರಿಸ ಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.