ಬಸವಣ್ಣರ ತತ್ವ-ಚಿಂತನೆ ಕುರಿತು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಅವಶ್ಯ
ಮೈಸೂರು

ಬಸವಣ್ಣರ ತತ್ವ-ಚಿಂತನೆ ಕುರಿತು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಅವಶ್ಯ

May 8, 2019

ಮೈಸೂರು: ಬಸವಣ್ಣ ನವರ ವಚನ, ಸಮಾಜ ಸುಧಾರಣೆ ಹಾಗೂ ತತ್ವ-ಚಿಂತನೆಗಳ ಬಗ್ಗೆ ಈ ಹಿಂದೆ ಎಷ್ಟೇ ಸಂಶೋಧನೆಗಳು ನಡೆದಿದ್ದರೂ ಇಂದಿನ ಪೀಳಿಗೆ ಸಂಶೋಧಕರು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ ಎಂದು ಇತಿಹಾಸ ತಜ್ಞ ಹಾಗೂ ರಾಷ್ಟ್ರೀಯ ಉನ್ನತ ವ್ಯಾಸಂಗ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಡಾ.ಷ.ಶೆಟ್ಟರ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆ ಗಳು ಹಾಗೂ ಬಸವ ಬಳಗಗಳ ಒಕ್ಕೂ ಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿ ರುವ ಎರಡು ದಿನಗಳ ಬಸವ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾ ರಂಭದಲ್ಲಿ ಮಂಗಳವಾರ ಅವರು ಆಶಯ ನುಡಿಗಳನ್ನಾಡಿದರು.

ಬಸವಣ್ಣರ ಚಿಂತನೆಗಳಿಗೆ ಅವರ ಅನುಯಾಯಿಗಳಿಂದ ಮಾತ್ರವಲ್ಲದೆ, ಸಂಶೋಧಕರಿಂದಲೂ ಅನ್ಯಾಯವಾಗಿದೆ. ತತ್ವಾದರ್ಶಗಳನ್ನು ಸಂಶೋಧಿಸಿ ಅರ್ಥೈಸುವ ವೇಳೆ ಅನೇಕ ಸಂದರ್ಭದಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡಲಾಗಿದೆ. ಹೀಗಾಗಿ ಈ ಹಿಂದಿನ ಸಂಶೋಧನೆಗಳು ಎಷ್ಟೇ ಇದ್ದರೂ ಇಂದಿನ ಪೀಳಿಗೆ ಸಂಶೋಧಕರು ಅವುಗಳನ್ನು ಅರಗಿಸಿ ಅರ್ಥೈಸಿಕೊಳ್ಳುವ ಜೊತೆ ಜೊತೆಗೆ ಮೂಲದಿಂದ ಅಧ್ಯಯನ ನಡೆಸಲು ಮುಂದಾ ಗಬೇಕು. ಆ ಮೂಲಕ ಹಿಂದೆ ಆಗಿರುವ ಸಂಶೋಧನೆಗಳಲ್ಲಿನ ಕಸವನ್ನು ತೆಗೆದು ಶುಚಿಗೊಳಿಸುವ ಮಹತ್ವದ ಕಾರ್ಯ ವಾಗಬೇಕು ಎಂದು ಪ್ರತಿಪಾದಿಸಿದರು.

ಬಸವಣ್ಣರ ಬಗ್ಗೆ ಎಷ್ಟೇ ಸಂಶೋಧನೆ ಗಳು ನಡೆದರೂ ಅವರ ಚಿಂತನೆ-ತತ್ವಾ ದರ್ಶ ಪರಿಪೂರ್ಣವಾಗಿ ಅರ್ಥೈಸಿಕೊಳ್ಳು ವಲ್ಲಿ ಸಮಾಜಕ್ಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದಲ್ಲಿ ಅನೇಕ ಜಟಿಲ ಸಮಸ್ಯೆಗಳು ಜೀವಂತ ವಾಗಿ ಉಳಿದಿವೆ. ಯಾವುದೇ ಧರ್ಮದ ಇತಿಹಾಸ ಅಧ್ಯಯನ ಮಾಡಿದಾಗ ಧರ್ಮದ ಹಿಂಬಾಲಕರಿಂದ ಆ ಧರ್ಮಕ್ಕೆ ಆಗಿರುವಷ್ಟು ಅನ್ಯಾಯ ಬೇರೆಯವರಿಂದ ಆಗಿರುವುದಿಲ್ಲ ಎಂಬುದು ಅರಿವಿಗೆ ಬರುತ್ತದೆ. ಧರ್ಮ ಪ್ರಸಾರ ಮಾಡಿದವರು ಆದರ್ಶರಾಗಿಯೇ ಇರುತ್ತಾರೆ. ಆದರೆ ಅವರ ಅನುಯಾಯಿಗಳು ಅನೇಕ ವೇಳೆ ಚಿಂತನೆಗಳನ್ನು ತಿರುಚುತ್ತಾರೆ. ಇದನ್ನು ಎಲ್ಲಾ ಧರ್ಮಗಳಲ್ಲೂ ಕಾಣಬಹುದು. ಇಂತಹ ಸಂದರ್ಭದಿಂದಾಗಿ ಅನೇಕ ಮುಖ್ಯವಾದವು ಗೌಣವಾಗುತ್ತವೆ ಎಂದು ತಿಳಿಸಿದರು.

19ನೇ ಶತಮಾನಕ್ಕೂ ಮುನ್ನ ನಮ್ಮ ಪರಂಪರೆ, ವೀರಶೈವ ಧರ್ಮ, ಲಿಂಗಾ ಯತ ಧರ್ಮ ಸೇರಿದಂತೆ ಬಹುತೇಕ ವಿಷಯಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆಯೇ ಇರಲಿಲ್ಲ. ಆದರೆ ಈ ಶತಮಾನದ ಅರ್ಧ ಭಾಗದಲ್ಲಿ ಸಂಶೋಧನೆಗಳು ಚಾಲನೆ ಪಡೆದು ನಮ್ಮ ದೇಶ, ನಾಡು ಹಾಗೂ ಸಂಸ್ಕøತಿಯ ಪುನರುತ್ಥಾನ ಸಾಧ್ಯವಾ ಯಿತು. ಹೀಗೆ ಆರಂಭಗೊಂಡ ಸಂಶೋ ಧನಾ ಪ್ರವೃತ್ತಿ ಇಂದಿಗೂ ಮುಂದು ವರೆದಿದೆ ಎಂದರು.

ಭಿನ್ನಾಭಿಪ್ರಾಯ ಬಗೆಹರಿಸಲು ಸಂಕಲ್ಪ: ಒಂದು ಧರ್ಮ ಒಡೆದು ಎರಡು ಧರ್ಮ ಗಳಾಗಿ ಪರಿವರ್ತನೆಯಾಗಿರುವ ಉದಾ ಹರಣೆಗಳಿದ್ದು, ಎಲ್ಲಾ ಧರ್ಮಗಳಲ್ಲೂ ಉದ್ಭವವಾಗುವ ಭಿನ್ನಾಭಿಪ್ರಾಯಗಳು ನಮ್ಮ ಧರ್ಮದಲ್ಲೂ ಆಗಿದೆ. ಅದನ್ನು ಪ್ರಜ್ಞಾಪೂರ್ವಕ ಹಾಗೂ ಶಾಂತಿಯುತ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ಇಂದಿನ ಜಯಂತಿ ವೇಳೆಯಲ್ಲಿ ಸಂಕಲ್ಪ ಆಗಬೇಕಿದೆ ಎಂದು ಡಾ.ಶೆಟ್ಟರ್ ನುಡಿದರು.

ಮುಕ್ತ ಮನಸ್ಸಿನ ಅಧ್ಯಯನ ಮಾಡು ವುದು ಮುಖ್ಯವಾಗಿದ್ದು, ಅರ್ಥಪೂರ್ಣ ಭಿನ್ನಾಭಿಪ್ರಾಯಕ್ಕೆ ಗೌರವ ಇರುತ್ತದೆ. ಅಲ್ಲದೆ, ಅದು ಸಮಾಜದ ಸ್ವಾಸ್ಥ್ಯಕ್ಕೆ ನೆರ ವಾಗುತ್ತದೆ. ಆದರೆ ಹಠಮಾರಿತನದ ಭಿನ್ನಾಭಿಪ್ರಾಯ ಸಮಾಜದಲ್ಲಿ ಮತ್ತಷ್ಟು ಸಮಸ್ಯೆಗೆ ನಾಂದಿ ಹಾಡಲಿದೆ. ಯಾವ ಧರ್ಮದ ಬೋಧನೆಯಲ್ಲಿ ಪ್ರಚೋದನೆ ಇದೆಯೋ ಅಲ್ಲಿ ಒಳ್ಳೆಯದೇ ಆಗಿದ್ದು, ಆರಾಧನೆಗೆ ಸೀಮಿತವಾದಾಗ ಅದರಿಂದ ಸಮಾಜಕ್ಕೆ ಹಾನಿಯೇ ಆಗಿದೆ ಎಂದು ವಿಶ್ಲೇಷಿಸಿದರು.

ಸ್ತ್ರೀ ಮುಕ್ತಿಗೆ ಚಿಂತಿಸಿದ ಪ್ರಥಮರು: ಬುದ್ಧ ಹಾಗೂ ಬಸವಣ್ಣರ ತೌಲನಿಕ ಅಧ್ಯಯನ ಮಾಡಿದ್ದೇನೆ. ಬುದ್ಧನೂ ಸೇರಿ ದಂತೆ ಯಾರೂ ಪ್ರತಿಪಾದನೆ ಮಾಡ ದಂತೆ ಮಹತ್ವದ ವಿಚಾರಗಳನ್ನು ಬಸವಣ್ಣ ಪ್ರತಿಪಾದಿಸಿದ್ದಾರೆ. ಬುದ್ಧನಿಗೆ ಸ್ತ್ರೀಯರ ಬಗ್ಗೆ ಮುಕ್ತ ಮನಸ್ಸು ಇರಲಿಲ್ಲ. ಹೀಗಾಗಿ ಕೆಲ ಅಡೆತಡೆಗಳನ್ನು ನಿರ್ಮಾಣ ಮಾಡಿದ್ದ. ಆದರೆ ಸ್ತ್ರೀ ಸ್ವಾತಂತ್ರ್ಯ ಹಾಗೂ ಸಮಾನತೆಗೆ ನಾಂದಿ ಹಾಡಿದ ಪ್ರಪ್ರಥಮ ವ್ಯಕ್ತಿ ಬಸವಣ್ಣ. ದಾಸೋಹದಂತಹ ಉದಾತ್ತ ಚಿಂತನೆ ನೀಡಿದ್ದು ಬಸವಣ್ಣ. ದಾನ ಎಂದರೆ ಪಡೆದು ಅಲ್ಲೇ ಕುಳಿತುಕೊಳ್ಳುವುದು. ಆದರೆ ದಾಸೋಹ ಪಡೆದು ಮುಂದೆ ಸಾಗುವುದು. ಇದು ಸಬಲೀಕರಣದ ಸಂಕೇತವಾಗುತ್ತದೆ ಎಂದು ಹೇಳಿದರು.

ಜಯಂತಿ ಅಂಗವಾಗಿ ವಿಚಾರ ಗೋಷ್ಠಿಗಳು, ಶರಣರ ಜೀವನ ಮೌಲ್ಯ ಗಳ ಕುರಿತ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೇ 8ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್. ವೆಂಕಟಾಚಲಯ್ಯ ಗಿಡಕ್ಕೆ ನೀರೆರೆದು, ಬಸವಣ್ಣನ ಪುತ್ಥಳಿಗೆ ಪುಷ್ಪ ನಮನ ಸಲ್ಲಿ ಸುವ ಮೂಲಕ ಜಯಂತಿ ಉದ್ಘಾಟಿಸಿ ದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಿವಗಂಗಾ ಕ್ಷೇತ್ರದ ಶ್ರೀ ಮೇಲಣ ಗವಿಮಠದ ಶ್ರೀ ಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಅಖಿಲ ಭಾರತ ವೀರ ಶೈವ ಮಹಾಸಭಾ ಮೈಸೂರು ಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ ಕಾನ್ಯ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷೆ ಜಯಾ ಗೌಡ ಮತ್ತಿತರರು ಹಾಜರಿದ್ದರು.

Translate »