ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ
ಮೈಸೂರು

ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ

May 8, 2019

ಮೈಸೂರು: ಇತ್ತೀಚೆಗೆ ಅಕ್ಷಯ ತೃತೀಯ (ಬಸವ ಜಯಂತಿ)ದಿನದಂದು ಬಂಗಾರ ಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದರೆ ಬಸವಣ್ಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷಿಣಿಸುತ್ತಿರುವುದು ಬೇಸರ ಸಂಗತಿ ಎಂದು ಲೇಖಕ ಡಾ.ಪ್ರದೀಪ್ ಕುಮಾರ ಹೆಬ್ರಿ ತಿಳಿಸಿದರು.

ಮೈಸೂರು ದೇವಯ್ಯನಹುಂಡಿಯಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ (ವಿಜಯ ಕಾಲೇಜು) ಆವರಣದಲ್ಲಿ `ಪ್ರತಿಭೆ’ ವೇದಿಕೆ ಉದ್ಘಾಟನೆ ಹಾಗೂ `ಬಸವ ಗೀತೆ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟಿ ಹಾಕಿದ ವೈಚಾರಿಕ ಕ್ರಾಂತಿ ಇಂದಿಗೂ ಪ್ರಸ್ತುತ. ಎಲ್ಲಾ ಸಮುದಾಯ ಗಳಿಗೂ ಸಮಾನತೆ, ಭ್ರಾತೃತ್ವ ಸಂದೇಶದೊಂದಿಗೆ ವಚನ ಚಳವಳಿಯನ್ನು ಹುಟ್ಟಿ ಹಾಕಿ, ಅಸ್ಪøಶ್ಯತೆ ತೊಡೆದು ಹಾಕಲು ಸಾಕಷ್ಟು ಶ್ರಮಿಸಿದರು.

ಈ ವೇಳೆ ಲೇಖಕಿ ಎಸ್.ಶಿವರಂಜನಿ ಡಾ.ಪ್ರದೀಪಕುಮಾರ್ ಹೆಬ್ರಿ ರಚಿತ `ಬಸವಗೀತೆ’ ಕವನ ಸಂಕಲನ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಪ್ರತಿಭೆ ವೇದಿಕೆ ಅಧ್ಯಕ್ಷ ಎಸ್.ರಾಜರತ್ನಂ, ಮೈಸೂರಿನ ಭಾಸಂಗೆ ಬಳಗದ ಅಧ್ಯಕ್ಷ ಸಿ.ಕೆ.ಸಂಜಯ್‍ಕುಮಾರ್, ಅರಸು ಮಂಡಳಿ ಸಂಘದ ಕಾರ್ಯದರ್ಶಿ ಕಿರಣ್ ಜಿ.ಎಸ್.ಅರಸ್ ಉಪಸ್ಥಿತರಿದ್ದರು.

Translate »