ಬೃಂದಾವನ ಗಾರ್ಡನ್‍ನಲ್ಲಿ ಬ್ಯಾಟರಿ ಚಾಲಿತ ವಾಹನ ಸೌಲಭ್ಯ
ಮೈಸೂರು

ಬೃಂದಾವನ ಗಾರ್ಡನ್‍ನಲ್ಲಿ ಬ್ಯಾಟರಿ ಚಾಲಿತ ವಾಹನ ಸೌಲಭ್ಯ

December 3, 2019

ಮೈಸೂರು,ಡಿ.2(ಆರ್‍ಕೆ)-ಇದೇ ಮೊದಲ ಬಾರಿ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಕೆಆರ್‍ಎಸ್‍ನ ಬೃಂದಾವನ ಗಾರ್ಡನ್‍ನಲ್ಲಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡ ಲಾಗಿದೆ. ದೂರದ ಊರುಗಳಿಂದ ಬೃಂದಾ ವನ ನೋಡಲು ಬರುವ ಪ್ರವಾಸಿಗರಲ್ಲಿ ಹಿರಿಯ ನಾಗರಿಕರು, ನಡೆಯಲು ಸಾಧ್ಯ ವಾಗದವರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನವನ್ನು ಒದಗಿಸಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಾವೇರಿ ನೀರಾ ವರಿ ನಿಗಮ ನಿಯಮಿತದ ಅಧಿಕಾರಿಗಳು ಆ ಬೇಡಿಕೆಯನ್ನು ಈಡೇರಿಸಿದ್ದಾರೆ.

ಬೃಂದಾವನದ ಪ್ರವೇಶ, ಪಾರ್ಕಿಂಗ್ ಲಾಟ್ ಮತ್ತು ಟೋಲ್ ಸಂಗ್ರಹದ ಗುತ್ತಿಗೆ ಪಡೆದಿರುವ ಸಂಸ್ಥೆಯು 10 ಆಸನ ಸಾಮ ಥ್ರ್ಯದ ಬ್ಯಾಟರಿ ಚಾಲಿತ ವಾಹನವೊಂದನ್ನು ಖರೀದಿ ಮಾಡಿ ಕಳೆದ 4 ದಿನಗಳಿಂದ ಆಪ ರೇಟ್ ಮಾಡುತ್ತಿದೆ. ವಾಹನ ಬಳಸುವ ಪ್ರತೀ ಪ್ರವಾಸಿಗರಿಂದ ತಲಾ 100 ರೂ. ಶುಲ್ಕ ವನ್ನು ಸಂಗ್ರಹಿಸುತ್ತಿದೆ. ಪ್ರತೀ ದಿನ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಹಾಗೂ ಶನಿ ವಾರ, ಭಾನುವಾರ ಹಾಗೂ ರಜಾ ದಿನ ಗಳಂದು ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆ ವರೆಗೆ ಬೃಂದಾವನಕ್ಕೆ ಪ್ರವೇಶಾವಕಾಶ ವಿರುವ ವೇಳೆ ಈ ವಾಹನ ಪ್ರವಾಸಿಗರ ಉಪಯೋಗಕ್ಕೆ ಲಭ್ಯವಿರುತ್ತದೆ. ಒಂದು ವೇಳೆ ಬೇಡಿಕೆ ಹೆಚ್ಚಾದಲ್ಲಿ ಗುತ್ತಿಗೆದಾರ ಸಂಸ್ಥೆಯು ಮತ್ತೊಂದು ವಾಹನವನ್ನು ಒದಗಿಸಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ನಿಗಮದಿಂದ 5 ವ್ಹೀಲ್ ಚೇರ್‍ಗಳನ್ನೂ ಒದಗಿಸಲಾಗಿದ್ದು, ನಡೆಯ ಲಾಗದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇಷ್ಟರಲ್ಲೇ ಇನ್ನೂ 5 ವ್ಹೀಲ್‍ಚೇರ್‍ಗಳನ್ನು ಖರೀದಿಸ ಲಾಗುವುದು ಎಂದೂ ತಿಳಿಸಿದರು

Translate »