ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಡಿಹೆಚ್‍ಓ ಆರ್.ವೆಂಕಟೇಶ್ ಚಾಲನೆ
ಮೈಸೂರು

ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಡಿಹೆಚ್‍ಓ ಆರ್.ವೆಂಕಟೇಶ್ ಚಾಲನೆ

December 3, 2019

ಮೈಸೂರು, ಡಿ.2(ಆರ್‍ಕೆಬಿ)- ಮೈಸೂರು ಜಿಲ್ಲೆ ಯಲ್ಲಿ ಗುರುತಿಸಲಾಗಿರುವ ಎರಡು ವರ್ಷದೊಳಗಿನ 1694 ಮಕ್ಕಳು ಹಾಗೂ 466 ಗರ್ಭಿಣಿಯರಿಗೆ ಲಸಿಕೆ ನೀಡುವ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಸೋಮ ವಾರ ಆರೋಗ್ಯ ಮತ್ತು ಕುಟುಂಬ ಸೇವೆಗಳ ವಿಭಾ ಗೀಯ ಜಂಟಿ ನಿರ್ದೇಶಕಿ ಡಾ.ಪುಷ್ಪಲತಾ, ಡಿಹೆಚ್‍ಓ ಡಾ.ಆರ್.ವೆಂಕಟೇಶ್ ಬನ್ನಿಮಂಟಪದ ಅಬ್ದುಲ್ ಕಲಾಂ ನಗರದ ಕಾಲೋನಿಯ ಟೆಂಟ್ ಶಾಲೆಯಲ್ಲಿ 7 ಮಕ್ಕಳಿಗೆ ಲಸಿಕೆ ನೀಡುವ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಕ್ಷಣಾ ಚುಚ್ಚು ಮದ್ದು ನೀಡಿಕೆ ಕಾರ್ಯಕ್ರಮದಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯ ರಿಗೆ ಮತ್ತು 0-2 ವರ್ಷದ ಮಕ್ಕಳನ್ನು ಗುರ್ತಿಸಲಾ ಗಿದ್ದು, ಅವರಿಗೆ ಡಿಸೆಂಬರ್‍ನಿಂದ ಮಾರ್ಚ್‍ವರೆಗೆ ನಾಲ್ಕು ಹಂತದಲ್ಲಿ ಲಸಿಕೆ ನೀಡುವ ಮಿಷನ್ ಇಂದ್ರ ಧನುಷ್ ಅಭಿಯಾನ ಆರಂಭಿಸಲಾಗಿದೆ. ಡಿ.2ರಿಂದ 10ರವರೆಗೆ ಮೊದಲ ಹಂತ, ಜ.6ರಿಂದ ಎರಡನೇ ಹಂತ, ಫೆ.3ರಿಂದ ಮೂರನೇ ಹಂತ ಮತ್ತು ಮಾ.2 ರಿಂದ ನಾಲ್ಕನೇ ಹಂತದಲ್ಲಿ ಗುರುತಿಸಲಾದ ಮಕ್ಕಳು ಮತ್ತು ಗರ್ಭಿಣಿಯರಿಗೆ ಜಿಲ್ಲೆಯಲ್ಲಿ 354 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು.
ಪ್ರಾಥಮಿಕ ಆರೊಗ್ಯದ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಸಮುದಾಯದ ಮುಖಂಡರು, ಸಾರ್ವಜನಿಕರು, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರು, ಸರ್ಕಾರಿ ನೌಕರರು ಈ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ದ್ದಾರೆ. ಪೋಷಕರು ಇದರ ಪ್ರಯೋಜನ ಪಡೆದು ಕೊಳ್ಳಬೇಕು. ಮಕ್ಕಳು ಮತ್ತು ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಹೆಚ್. ರಾಮಚಂದ್ರ, ಸಹ ನಿರ್ದೇಶಕಿ ಡಾ.ಪುಷ್ಪಲತಾ, ಐಎಂಎ ಮೈಸೂರು ಅಧ್ಯಕ್ಷ ಡಾ. ಸುರೇಶ್ ರುದ್ರಪ್ಪ, ನಗರಪಾಲಿಕೆ ಆರೋಗ್ಯ ಅಧಿಕಾರಿ ಡಾ.ಎಂ.ಎಸ್. ಜಯಂತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಲ್.ರವಿ, ತಾಲೂಕು ವೈದ್ಯಾಧಿಕಾರಿ ಡಾ.ಮಹದೇವಪ್ರಸಾದ್, ಐಎಂಎ ಸದಸ್ಯ ಡಾ.ಚಂದ್ರಭಾನುಸಿಂಗ್, ಡಬ್ಲುಹೆಚ್‍ಓ ಸದಸ್ಯ ಡಾ.ಸುಧೀರ್‍ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

Translate »