ಮೈಸೂರಿಗೆ ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಪ್ರಶಸ್ತಿ
ಮೈಸೂರು

ಮೈಸೂರಿಗೆ ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಪ್ರಶಸ್ತಿ

September 8, 2019

ಮೈಸೂರು,ಸೆ.7(ಆರ್‍ಕೆ)- ‘ಬೆಸ್ಟ್ ಡೆಕೊರೇಟೆಡ್’ ಹೆಗ್ಗಳಿಕೆಗೆ ಮೈಸೂರು ವಿಮಾನ ನಿಲ್ದಾಣ ಪಾತ್ರವಾಗಿದೆ.ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಟರ್ಮಿನಲ್ ಕಟ್ಟಡಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರ, ವರ್ಣರಂಜಿತ ರಂಗೋಲಿ ಚಿತ್ತಾರಗಳಿಗಾಗಿ ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರವು ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಸ್ಪರ್ಧೆ ಯಲ್ಲಿ ಮೈಸೂರಿಗೆ ಮೂರನೇ ಸ್ಥಾನ ನೀಡಿದೆ.

ಈ ಬಗ್ಗೆ ಪ್ರಾಧಿಕಾರದ ಛೇರ್ಮನ್ ಅನೂಜ್ ಅಗರ್‍ವಾಲ್ ಅವರು ಸೆಪ್ಟಂಬರ್ 3ರಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜು ನಾಥ್ ಅವರಿಗೆ ಪ್ರಶಂಸಾ ಪತ್ರ ಕಳು ಹಿಸಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನ ದಂದು ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ವೈ.ಸಿ.ರೇವಣ್ಣ ಅವರನ್ನು ಕರೆಸಿ ಗೌರ ವಿಸಿರುವುದು, ಆಯ್ಕೆ ಮಾಡಿದ ಥೀಮ್ ಹಾಗೂ ಏರ್ ಪೋರ್ಟ್‍ನಲ್ಲಿ ಮಾಡಿದ್ದ ಶೃಂಗಾರ ಇತ್ಯಾದಿಗಳು ಗಮನ ಸೆಳೆದಿವೆ ಎಂದು ಪ್ರಾಧಿಕಾರದ ಛೇರ್ಮನ್ ಅನೂಜ್ ಅಗರ್‍ವಾಲ್ ಅವರು ತಮ್ಮ ಪ್ರಶಂಸಾ ಪತ್ರದಲ್ಲಿ ಶ್ಲಾಘನೆ ಮಾಡಿದ್ದಾರೆ.

Translate »