ನವದಹಲಿ, ಸೆ.8- ಖ್ಯಾತ ವಕೀಲ, ಕೇಂದ್ರದ ಮಾಜಿ ಕಾನೂನು ಸಚಿವ ರಾಂ ಜೇಠ್ಮಲಾನಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ದಿಂದ ಬಳಲುತ್ತಿದ್ದ ರಾಂ ಜೇಠ್ಮಲಾನಿ ಅವರಿಗೆ ಕಳೆದೆರಡು ವಾರಗಳಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದು, ಪುತ್ರ ಮಹೇಶ್ ಜೇಠ್ಮಲಾನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಿಂಧ್ ಪ್ರಾಂತ್ಯದ ಸಿಖಾರ್‍ಪುರದಲ್ಲಿ ಸೆಪ್ಟೆಂ ಬರ್ 14, 1923ರಲ್ಲಿ ಜನಿಸಿದ ರಾಂ ಜೇಠ್ಮಲಾನಿ, ವಕೀಲರಾಗಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ವಿಚಾ ರಣಾಧೀನ ನ್ಯಾಯಾಲಯಗಳಲ್ಲಿ ಹಲವು ಹೈ ಪೆÇ್ರೀಫೈಲ್ ಕೇಸ್‍ಗಳಲ್ಲಿ ವಾದ ಮಂಡಿಸಿದ್ದರು. 1959ರಲ್ಲಿ ಕೆ.ಎಂ. ನಾನಾ ವತಿ ವರ್ಸಸ್ ಮಹಾರಾಷ್ಟ್ರ ಸರ್ಕಾರ, 2011ರಲ್ಲಿ ಬಹುಕೋಟಿ 2-ಜಿ ಹಗ ರಣ, ಅಡ್ವಾಣಿ ಮೇಲಿನ ಹವಾಲಾ ಹಗ ರಣ, ಅರವಿಂದ್ ಕೇಜ್ರಿವಾಲ್ ಮೇಲೆ ಅರುಣ್ ಜೇಟ್ಲಿ
ಹಾಕಿದ್ದ ಮಾನನಷ್ಟ ಮೊಕದ್ದಮೆ ಸೇರಿದಂತೆ ಹಲವು ಹೈ ಪೆÇ್ರೀಫೈಲ್ ಕೇಸ್ ಗಳಲ್ಲಿ ರಾಮ್ ಜೇಠ್ಮಲಾನಿ ತಮ್ಮ ಪ್ರಖರ ವಾದ ಮಂಡಿಸಿ ಜನ ಮನ್ನಣೆ ಗಳಿಸಿದ್ದರು. 2010ರಲ್ಲಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ರಾಂ ಜೇಠ್ಮಲಾನಿ, ಮುಂಬೈ ಯಿಂದ ಬಿಜೆಪಿ ಅಭ್ಯರ್ಥಿಯಾಗಿ 6 ಮತ್ತು ಏಳನೇ ಲೋಕ ಸಭೆಗೆ ಪ್ರವೇಶಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಾನೂನು ಹಾಗೂ ನಗರಾಭಿವೃದ್ದಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ವಾಜಪೇಯಿ ವಿರುದ್ಧವಾಗಿ ಸ್ಪರ್ಧಿಸಿದ್ದರು. ಖ್ಯಾತ ವಕೀಲ ರಾಂ ಜೇಠ್ಮಲಾನಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, ಜೇಠ್ಮಲಾನಿ ಅವರ ನಿಧನ ನಿಜಕ್ಕೂ ನೋವು ತಂದಿದೆ. ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದ ಅವರ ಗುಣ ಅಪರೂಪವಾದದ್ದು. ಅವರ ನಿಧನದಿಂದಾಗಿ ದೇಶ ಶ್ರೇಷ್ಠ ನ್ಯಾಯಶಾಸ್ತ್ರಜ್ಞನನ್ನು ಕಳೆದುಕೊಂಡಿದೆ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಮ್ಮ ಬುದ್ಧಿಯಿಂದಲೇ ಮಾತನಾಡುತ್ತಿದ್ದ ಪಂಡಿತನನ್ನು ದೇಶ ಕಳೆದುಕೊಂಡಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರವನ್ನು ಖಂಡಿಸುತ್ತಿದ್ದ ಅವರ ಕಾರ್ಯ ವೈಖರಿ ಹಲವರಿಗೆ ಆದರ್ಶವಾಗಿತ್ತು. ಸಾಕಷ್ಚು ಜನರಿಗೆ ರಾಂ ಜೇಠ್ಮಲಾನಿ ಸಹಾಯ ಮಾಡಿದ್ದು, ಇದು ಅವರ ಜೀವನದ ಅಂಗವೇ ಆಗಿತ್ತು. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.