ಇಂದು ಭೀಮಾ ಕೋರೆಗಾಂವ್ ಯುದ್ಧದ   ವಿಜಯ ಸ್ತಂಭದ ಪ್ರಥಮ ವಾರ್ಷಿಕೋತ್ಸವ
ಮೈಸೂರು

ಇಂದು ಭೀಮಾ ಕೋರೆಗಾಂವ್ ಯುದ್ಧದ ವಿಜಯ ಸ್ತಂಭದ ಪ್ರಥಮ ವಾರ್ಷಿಕೋತ್ಸವ

January 1, 2019

ಮೈಸೂರು, ಡಿ.31(ಪಿಎಂ)- ಜೈ ಭೀಮ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಭೀಮಾ ಕೋರೆಗಾಂವ್ ಯುದ್ಧದ 201ನೇ ಸಂಭ್ರಮಾಚರಣೆ ಹಾಗೂ ಮೈಸೂರಿನಲ್ಲಿ ಸ್ಥಾಪಿ ಸಿರುವ ಭೀಮಾ ಕೋರೆಗಾಂವ್ ಯುದ್ಧದ ವಿಜಯ ಸ್ತಂಭದ ಮಾದರಿಯ ಪ್ರಥಮ ವಾರ್ಷಿಕೋತ್ಸವವನ್ನು 2019ರ ಜನವರಿ 1ರಂದು ಏರ್ಪಡಿಸಲಾಗಿದೆ ಎಂದು ಕ್ಲಬ್‍ನ ಅಧ್ಯಕ್ಷ ಜಯರಾಜ್ ಹೆಗ್ಡೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1818ರ ಜನವರಿ 1ರಂದು ಪುಣೆ ಸಮೀಪದ ಭೀಮಾ ಕೋರೆಗಾಂವ್‍ನಲ್ಲಿ ನಡೆದ ಯುದ್ಧ ದೇಶದ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತ. ಅಂದು ಬ್ರಿಟಿಷ್ ಮಹಾರ್ ಸೈನ್ಯವು ಬಲಿಷ್ಠ ಪೇಶ್ವೆ ಸೈನ್ಯವನ್ನು ಮಣಿಸಿ ದಿಗ್ವಿಜಯ ಸಾಧಿಸುತ್ತದೆ. ಇದರ ಸ್ಮರಣಾರ್ಥ ಕೋರೆಗಾಂವ್‍ನಲ್ಲಿ ವಿಜಯ ಸ್ತಂಭ ಸ್ಥಾಪಿಸಲಾಗಿದೆ. ಇದೇ ಸ್ತಂಭದ ಮಾದರಿಯನ್ನು ಮೈಸೂರಿನ ಜಯನಗರ ರೈಲ್ವೆ ಗೇಟ್ ಬಳಿ ಸ್ಥಾಪಿಸಿ 2018ರ ಜನವರಿ 1ರಂದು ಅನಾವರಣಗೊಳಿಸಲಾಯಿತು ಎಂದರು.
ಪೇಶ್ವೆ ರಾಜನ ನಿಂದನೆ ಸಹಿಸದ ಮಹಾರ್ ಸೈನ್ಯವು ಯುದ್ಧಕ್ಕಿಳಿದು ಕೊನೆಗೆ ಜಯವನ್ನೂ ಸಾಧಿಸುತ್ತದೆ. ಇದೀಗ ಭೀಮಾ ಕೋರೆಗಾಂವ್ ಯುದ್ಧ ನಡೆದು 200 ವರ್ಷಗಳು ಪೂರ್ಣಗೊಂಡಿದೆ. ಇದರ 201ನೇ ವರ್ಷದ ಸಂಭ್ರಮಾಚರಣೆಯನ್ನು ಮೈಸೂರಿನ ಜಯ ನಗರ ರೈಲ್ವೆ ಗೇಟ್ ಬಳಿ ಸ್ಥಾಪಿಸಿರುವ ವಿಜಯಸ್ತಂಭದ ಮಾದರಿ ಬಳಿ ಸಂಘಟನೆ ವತಿಯಿಂದ ಆಚರಿಸ ಲಾಗುತ್ತಿದೆ. ಜ.1ರಂದು ಸಂಜೆ 6.30ಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್‍ದಾಸ್ ಸಂಭ್ರಮಾಚರಣೆಗೆ ಚಾಲನೆ ನೀಡಲಿದ್ದಾರೆ ಎಂದರು.

ಮೈಸೂರು ಗಾಂಧಿನಗರದ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ತಿ.ನರಸೀ ಪುರ ತಾಲೂಕಿನ ಮೇದಿನಿಯ ಮಹಾಬೋಧಿ ಮಿಷನ್‍ನ ಪ್ರಧಾನ ಬಿಕ್ಕು ಶ್ರೀಬುದ್ಧ ಪ್ರಕಾಶ ಬಂತೇಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಆಗಮಿಸಲಿದ್ದಾರೆ. ಅತಿಥಿಗಳಾಗಿ ಹಿರಿಯ ರಂಗಕರ್ಮಿ ಹೆಚ್.ಜನಾರ್ಧನ್ (ಜನ್ನಿ), ಚಾಮರಾಜ ನಗರದ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಸ್.ಉಮೇಶ್ ಪಾಲ್ಗೊಳ್ಳಲಿದ್ದಾರೆ. ಮಾಜಿ ಮೇಯರ್ ಪುರುಷೋತ್ತಮ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಲೇಖಕ ಸಿದ್ದಸ್ವಾಮಿ, ವಿಚಾರವಾದಿ ನಾಗ ಸಿದ್ಧಾರ್ಥ ಹೊಲೆಯರ್, ಮೈಸೂರು ಅಶೋಕ ಪುರಂ ಠಾಣೆ ಪಿಐ ಸಿದ್ದರಾಜು, ಬೋಧಿಸತ್ವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿರ್ದೇಶಕ ಈಶ್ವರ್ ಚಕ್ಕಡಿ ಹಾಗೂ ನೆಲೆ ಹಿನ್ನೆಲೆ ಸಂಘಟನೆ ಅಧ್ಯಕ್ಷ ಕೆ.ಆರ್. ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು.
ಇದಕ್ಕೂ ಮುನ್ನ ಅಂದು ಸಂಜೆ 4.30ಕ್ಕೆ ಅಶೋಕ ಪುರಂನ ಡಾ.ಅಂಬೇಡ್ಕರ್ ಪಾರ್ಕ್‍ನಿಂದ ಪುರ ಭವನ ದವರೆಗೆ ಡಾ.ಅಂಬೇಡ್ಕರ್ ಹಾಗೂ ಬುದ್ಧನ ಪ್ರತಿಮೆ ಒಳಗೊಂಡ ಸ್ತಬ್ಧಚಿತ್ರಗಳ ಮೆರವಣಿಗೆ ಹಮ್ಮಿ ಕೊಳ್ಳ ಲಾಗಿದೆ ಎಂದು ಅವರು ತಿಳಿಸಿದರು. ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ದಿಲೀಪ್, ಖಜಾಂಚಿ ರವಿಕುಮಾರ್, ಮುಖಂಡರಾದ ಶಿವಪ್ರಸಾದ್, ಶಿವು ಗೋಷ್ಠಿಯಲ್ಲಿದ್ದರು.

Translate »