ಮೈಸೂರು,ಡಿ.31(ಎಸ್‍ಪಿಎನ್)- ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಮೈಸೂರು ಜಿಲ್ಲೆಯ ಕಲಾವಿದರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಅನುದಾನವನ್ನು ಬಳಸಿಕೊಳ್ಳು ವವರಲ್ಲಿ ಬೆರಳೆಣಿಕೆ ಮಂದಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇ ಶಕ ಹನೂರು ಚನ್ನಪ್ಪ ಅಭಿಪ್ರಾಯಪಟ್ಟರು.
ಜೆಎಲ್‍ಬಿ ರಸ್ತೆಯ ರೋಟರಿ ಐಡಿ ಯಲ್ ಜಾವಾ ಸಭಾಂಗಣದಲ್ಲಿ ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಅಕಾ ಡೆಮಿಯ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರು ಜಿಲ್ಲೆಯ ಕಲಾವಿದರು ದಸರಾ ಮಹೋತ್ಸವಕ್ಕೆ ಮಾತ್ರ ಸೀಮಿತ ರಾಗಿದ್ದಾರೆ. ಆದರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವರ್ಷ ಪೂರ್ತಿ ಸಾಂಸ್ಕø ತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧವಿದೆ. ಇದನ್ನು ಇಲ್ಲಿನ ಕಲಾವಿದರು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಮೈಸೂರಿನ ಬೆಳವಣಿಗೆಗೆ ಮಹಾರಾಜರ ಕೊಡುಗೆ ಸಾಕಷ್ಟಿದೆ. ಅವರ ಆಳ್ವಿಕೆಯ ಲ್ಲಾದ ಅಭಿವೃದ್ಧಿ ಕಾರ್ಯಗಳು, ಪ್ರಜಾ ಪ್ರಭುತ್ವ ಬಂದರೂ ಇಂದಿನ ಪೀಳಿಗೆ ಯವರು ನೆನಪಿಸಿಕೊಳ್ಳುತ್ತಿದ್ದಾರೆ. ಅದ ರಲ್ಲೂ ಕಲೆ-ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಬೇರೆ ಯಾವ ರಾಜರು ನೀಡಿಲ್ಲ. ಆದ್ದರಿಂದ ಇಲ್ಲಿನ ಸಂಘ-ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗ ದೊಂದಿಗೆ ವರ್ಷ ಪೂರ್ತಿ ಕಲೆ-ಸಾಹಿತ್ಯ, ಚಿತ್ರಕಲೆಗೆ ಸಂಬಂಧಿಸಿದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ವೇಳೆ ಬೇಡಿ ಬಂದವಳು’ ಚಿತ್ರದ
ನೀರಿನಲ್ಲಿ ಅಲೆಯ ಉಂಗುರ’ ಹಾಡಿಗೆ ಶ್ರೀಕಂಠ ರಾವ್, ಕವಿತಾಕಾಮತ್ ಜೋಡಿ ಧ್ವನಿ ಗೂಡಿಸಿದರು.ಬೆಸುಗೆ’ ಚಿತ್ರದ
ಯಾವ ಹೂವು ಯಾರ ಮುಡಿಗೋ’ ಹಾಡಿಗೆ ಡಾ.ಶ್ರೀನಿ ವಾಸ್ ಮೂರ್ತಿ, ಹೃದಯ ಹಾಡಿತು’ ಚಿತ್ರದ
ನಲಿಯುತ ಹೃದಯ ಹಾಡನು ಹಾಡಿದೆ’ ಹಾಡನ್ನು ಗಾಯಕ ನಾಗೇಂದ್ರ, ನಾ ನಿನ್ನ ಮರೆಯಲಾರೆ’ ಚಿತ್ರದ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’