ಧಾರ್ಮಿಕ ಭಾವನೆಗೆ ಧಕ್ಕೆ:   ಭಗವಾನ್ ವಿರುದ್ಧ ಎಫ್‍ಐಆರ್
ಮೈಸೂರು

ಧಾರ್ಮಿಕ ಭಾವನೆಗೆ ಧಕ್ಕೆ: ಭಗವಾನ್ ವಿರುದ್ಧ ಎಫ್‍ಐಆರ್

January 1, 2019

ಮೈಸೂರು: ‘ರಾಮಮಂದಿರ ಏಕೆ ಬೇಡ?’ ಪುಸ್ತಕದ ಮೂಲಕ ಮತ್ತೆ ವಿವಾದ ಸೃಷ್ಟಿಸಿರುವ ವಿವಾದಿತ ಲೇಖಕ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಭಗವಾನ್ ಬರೆದಿರುವ ಪುಸ್ತಕದಲ್ಲಿ, `ರಾಮ ಮದ್ಯಪಾನ ಮಾಡುತ್ತಿದ್ದ, ಮಾಂಸ ತಿನ್ನುತ್ತಿದ್ದ’ ಎಂದು ದಾಖಲಿಸುವ ಮೂಲಕ ಹಿಂದೂಗಳ ಧಾಮಿಕ ಭಾವನೆಗಳಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಗದೀಶ್ ಹೆಬ್ಬಾಳ್ ಅವರು ಕುವೆಂಪುನಗರ ಠಾಣೆಗೆ ದೂರು ನೀಡಿದ್ದರು.

ಬಂಧನ ಸಾಧ್ಯತೆ?:ದೂರು ಸ್ವೀಕರಿಸಿರುವ ಪೆÇಲೀಸರು ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಗವಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 295(ಎ) ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಧಕ್ಕೆ ತರುವುದು ಅಪರಾಧ ಎನ್ನುತ್ತದೆ. ಈ ಸೆಕ್ಷನ್ ಅನ್ವಯ ಅಪರಾಧ ದೃಢಪಟ್ಟರೆ, 3 ವರ್ಷಗಳವರೆಗೆ ಜೈಲುವಾಸ ಮತ್ತು ದಂಡ ವಿಧಿಸಲು ಅವಕಾಶವಿರುತ್ತದೆ.

Translate »