ಸಂಚಾರ ನಿಯಮ ಪಾಲಿಸಿದವರಿಗೆ   ಲಡ್ಡು, ಗ್ರೀಟಿಂಗ್ ಕಾರ್ಡ್
ಮೈಸೂರು

ಸಂಚಾರ ನಿಯಮ ಪಾಲಿಸಿದವರಿಗೆ ಲಡ್ಡು, ಗ್ರೀಟಿಂಗ್ ಕಾರ್ಡ್

January 1, 2019

ಮೈಸೂರು: ಹೊಸ ವರ್ಷವನ್ನು ವಿನೂತನವಾಗಿ ಆಚರಿಸಲು ಮುಂದಾಗಿರುವ ಮೈಸೂರು ಸಂಚಾರ ಪೊಲೀಸರು, ಸಂಚಾರ ನಿಯಮವನ್ನು ಸಂಪೂರ್ಣವಾಗಿ ಪಾಲಿಸಿದವರಿಗೆ ಲಡ್ಡು, ಗ್ರೀಟಿಂಗ್ ಕಾರ್ಡ್ ನೀಡಿ ಶುಭ ಕೋರುವರು.

ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರ ಹ್ಮಣ್ಯೇಶ್ವರರಾವ್ ಅವರು ಹೆಲ್ಮೆಟ್ ಧರಿಸಿ, ಡಿಎಲ್, ವಾಹನದ ಆರ್‍ಸಿ, ಇನ್ಶೂರೆನ್ಸ್ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಹೊಂದಿದ್ದು, ವಾಹನವನ್ನೂ ಸುಸ್ಥಿತಿಯಲ್ಲಿರಿ ಸಿಕೊಂಡವರಿಗೆ ಸಿಹಿ, ಗ್ರೀಟಿಂಗ್ಸ್ ಕಾರ್ಡ್ ನೀಡಿ ನಾಳೆ (2019ರ ಜನವರಿ 1) ಬೆಳಿಗ್ಗೆ 11 ಗಂಟೆಗೆ ಹೊಸ ವರ್ಷಕ್ಕೆ ಶುಭ ಕೋರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಂತರ ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ನೇತೃತ್ವದಲ್ಲಿ ಎಲ್ಲಾ ಸಂಚಾರ ಠಾಣೆ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ತಮ್ಮ ವ್ಯಾಪ್ತಿಗಳಲ್ಲಿ ಸಂಚಾರ ನಿಯಮವನ್ನು ಚಾಚೂ ತಪ್ಪದೆ ಪಾಲಿಸುವವರಿಗೆ ಸಿಹಿ ಮತ್ತು ಗ್ರೀಟಿಂಗ್ ಕಾರ್ಡ್ ಕೊಟ್ಟು ಹೊಸ ವರ್ಷದ ಶುಭಾಶಯ ಕೋರುವರು. ಸಂಚಾರ ನಿಯಮ ವನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಸುಗಮ ಹಾಗೂ ಸುರಕ್ಷಾ ಸಂಚಾರ ವ್ಯವಸ್ಥೆ ಒದಗಿಸಲು ಮೈಸೂರಿನ ಸಂಚಾರ ಪೊಲೀಸರು ಜನಸ್ನೇಹಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹಾಗೆಯೇ ಟ್ರಾಫಿಕ್ ಎನ್‍ಫೋರ್ಸ್‍ಮೆಂಟ್‍ಗೂ ಒತ್ತು ನೀಡಿರುವ ಪೊಲೀಸರು, ಮೈಸೂರು ನಗರದಾದ್ಯಂತ ರಸ್ತೆ, ಜಂಕ್ಷನ್, ವೃತ್ತಗಳಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆಯನ್ನೂ ಮುಂದುವರೆಸಲಿದ್ದಾರೆ.

Translate »