ಬೈಕ್‍ಗಳ ಮುಖಾಮುಖಿ ಡಿಕ್ಕಿ; ಯುವಕ ಸಾವು
ಕೊಡಗು

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಯುವಕ ಸಾವು

May 31, 2018

ಕುಶಾಲನಗರ: ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುಮ್ಮನಕೊಲ್ಲಿ ಬಳಿಯ ವೀರಭೂಮಿ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತೊರೆನೂರು ಗ್ರಾಮದ ಮೀನಾಕ್ಷಿ ಎಂಬುವರ ಪುತ್ರ ರಕ್ಷಿತ್ (23) ಮೃತಪಟ್ಟ ಯುವಕ. ರಕ್ಷಿತ್ ತನ್ನ ಬೈಕ್‍ನಲ್ಲಿ ಸ್ನೇಹಿತ ಗಿರೀಶ್ ನೊಂದಿಗೆ ಕುಶಾಲನಗರದಿಂದ ತಮ್ಮ ಗ್ರಾಮ ತೊರೆನೂರಿಗೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ವೀರಭೂಮಿ ಸರ್ಕಲ್ ಬಳಿ ಎದುರಿನಿಂದ ಬಂದ ಬೈಕ್‍ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ರಸ್ತೆ ಮೇಲೆ ಬಿದ್ದ ರಕ್ಷಿತ್‍ಗೆ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಗಿರೀಶ್ ಎಂಬಾ ತನಿಗೂ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂ ತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

Translate »