ಸಂಬಂಧಗಳ ಬೆಸೆಯುವಲ್ಲಿ ಮಠಗಳ ಪಾತ್ರ ಹಿರಿದು
ಕೊಡಗು

ಸಂಬಂಧಗಳ ಬೆಸೆಯುವಲ್ಲಿ ಮಠಗಳ ಪಾತ್ರ ಹಿರಿದು

May 31, 2018

ವಿರಾಜಪೇಟೆ:  ಇತ್ತೀಚಿನ ದಿನಗಳಲ್ಲಿ ರಾಜಕಾರಣ ಗಳು ನಿರ್ಧಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿ ಯಿಂದ ನೋಡುತ್ತಿರುವುದು ವಿಷಾದ ನೀಯ ಎಂದು ಗಾವಡಗೆರೆಯ ಗುರು ಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು.

ವಿರಾಜಪೇಟೆ ಸಮೀಪದ ಅರಮೇರಿಯ ಕಳಂಚೇರಿ ಮಠದ ಸಭಂಗಣದಲ್ಲಿ ಆಯೋ ಜಿಸಲಾಗಿದ್ದ ಅಖಿಲಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದ ವಾರ್ಷಿಕ ಮಹಾ ಸಭೆಯ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಟರಾಜ ಸ್ವಾಮಿಜಿ ಮಾತನಾಡಿ, ಸಮುದಾಯದ ಮಠಗಳು ಸಮಾಜಮುಖಿಯಾಗಬೇಕು. ಜನರ ಸರ್ವ ತೋಮುಖ ಕಲ್ಯಾಣಗಳು ಮಠದ ಮೂಲಕ ನಡೆಯುವಂತಾಗಬೇಕು. ಸರ್ವ ಜನರ ಆರೋಗ್ಯ, ಶಿಕ್ಷಣ ಹಾಗೂ ರಾಜಕೀಯ ಸಮಸ್ಯೆಗಳ ಪರಿಹಾರ ಮಠಗಳ ಮೂಲಕ ನೆರವೇರ ಬೇಕಾಗಿದೆ. ಮಠಗಳು ಸಂಬಂಧಗಳ ಸರ ಮಾಲೆ ಹೆಣೆದು ಸಂತೋಷ ಮತ್ತು ಸಮೃದ್ಧಿ ಯನ್ನು ಬೆಳೆಸುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಸಂಬಂಧ ಗಳನ್ನು ಬೆಸೆಯುವಲ್ಲಿ ಮಠಗಳು ಮಹತ್ತರ ಪಾತ್ರವನ್ನು ವಹಿಸಿವೆ ಎಂದರು.

ಅರಮೇರಿ ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಎನ್.ಸಂದೀಪ್ ಅಧ್ಯಕ್ಷತೆ ವಹಿಸಿ ದ್ದರು. ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ಎಸ್.ಎಸ್. ಸುರೇಶ್, ಮಹಾ ಸಭಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್ ಮಾತನಾಡಿದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಸುರಭಿ ಪ್ರಸಾದ್ ನಿರೂಪಿಸಿದರೆ. ಜಗದೀಶ್ ವಂದಿಸಿದರು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

Translate »