ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅನಿಕೇತನ ಸೇವಾ ಟ್ರಸ್ಟ್‍ನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ
ಮೈಸೂರು

ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅನಿಕೇತನ ಸೇವಾ ಟ್ರಸ್ಟ್‍ನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

January 1, 2020

ಮೈಸೂರು,ಡಿ.31(ಆರ್‍ಕೆಬಿ)- ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಅನಿಕೇತನ ಸೇವಾ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ, ರಂಗಕರ್ಮಿ ಡಾ.ಹೆಚ್.ಕೆ.ರಾಮ ನಾಥ, ಕಾವಾ ನಿವೃತ್ತ ಡೀನ್ ಪ್ರೊ.ವಿ.ಕೆ. ದೇಶಪಾಂಡೆ, ಯೋಗಪಟು ಖುಷಿ ಅವರನ್ನು ಅಭಿನಂದಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಮೂವರಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮಹಾರಾಜ ಕಾಲೇಜು ನಿವೃತ್ತ ಪ್ರಾಂಶು ಪಾಲ ಪ್ರೊ.ಎಂ.ಕೃಷ್ಣೇಗೌಡ ಸನ್ಮಾನಿಸಿದರು.

ಬಳಿಕ ಮಾತನಾಡಿದ ಪ್ರೊ.ಎಂ.ಕೃಷ್ಣೇ ಗೌಡ, ನಮ್ಮ ಆಲೋಚನೆಗಳಂತೆಯೇ ಆದರೆ ನಾವು ಶುದ್ಧವಾದ ಬದುಕನ್ನೇ ಕಾಣುತ್ತೇವೆ. ಆದರೆ ಹಣ, ಅಧಿಕಾರ ಇದ್ದರೆ ಸಾಕು ಮನುಷ್ಯ ದೊಡ್ಡವನು ಎಂಬಂತೆ ಸಮಾಜ ಭಾವಿಸುತ್ತದೆ. ಜ್ಞಾನ ಮತ್ತು ಶೀಲ ಮನುಷ್ಯನನ್ನು ದೊಡ್ಡವ ನ್ನಾಗಿ ಮಾಡುತ್ತವೆಯೇ ಹೊರತು ಹಣ, ಅಧಿಕಾರದಿಂದ ಅಲ್ಲ ಎಂದು ಅಭಿಪ್ರಾಯಪಟ್ಟರು.

ಕುವೆಂಪು, ಬೇಂದ್ರೆ ಮೊದಲಾದ ಕವಿ ಗಳು ಶೇಕ್ಸ್‍ಪಿಯರ್ ಒಳಗೊಂಡಂತೆ ಜಗ ತ್ತಿನ ಯಾವುದೇ ಕವಿಗಳಿಗಿಂತಲೂ ದೊಡ್ಡ ವರಾಗಿದ್ದಾರೆ. ಕುವೆಂಪು ಮತ್ತು ಡಾ.ರಾಜ್ ಕುಮಾರ್ ಕನ್ನಡದ ಮೇರು ವ್ಯಕ್ತಿಗಳು. ಕುವೆಂಪು ಅವರಿಗೆ ಪಡೆದಷ್ಟು ಸಾಹಿತ್ಯಕ ಪ್ರಶಸ್ತಿ ಪಡೆದ ಇನ್ನೊಬ್ಬ ಲೇಖಕ ದೇಶ ದಲ್ಲಿ ಇಲ್ಲ. ಕುವೆಂಪು ಅವರ ಬದುಕೇ ಒಂದು ಮಹಾ ಕಾವ್ಯ ಎಂದು ಅಭಿಪ್ರಾಯ ಪಟ್ಟರು. ನಾವು ಇಂಗ್ಲಿಷ್ ಇಲ್ಲದೆ ಬದು ಕಲು ಸಾಧ್ಯವೇ ಇಲ್ಲವೇನೋ ಎಂಬಂಥ ಪರಿಸ್ಥಿತಿಯಲ್ಲಿದ್ದೇವೆ. ಇಂಥ ಪರಿಸ್ಥಿತಿ ಯಲ್ಲಿ ಕುವೆಂಪು ಬದುಕಿದ್ದರು. ಕನ್ನಡ ವನ್ನು ಉನ್ನತಕ್ಕೆ ತೆಗೆದುಕೊಂಡು ಹೋದರು. ಕುವೆಂಪು ಅವರ ಬದುಕೇ ಒಂದು ಮಹಾ ಕಾವ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಮೈಸೂರ್ ಟಾರ್ಪಾಲಿನ್ಸ್ ಮಾಲೀಕ ವೀರಭದ್ರ, ಅನಿಕೇತನ ಟ್ರಸ್ಟ್ ಅಧ್ಯಕ್ಷ ಕೆ.ವಿ.ಮಲ್ಲೇಶ್, ಪ್ರೊ.ಕೃ.ಪ.ಗಣೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »