ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ಆತ್ಮತೃಪ್ತಿ ನನಗಿದೆ
ಮೈಸೂರು

ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ಆತ್ಮತೃಪ್ತಿ ನನಗಿದೆ

January 1, 2020

ಮೈಸೂರು,ಡಿ.31(ಆರ್‍ಕೆಬಿ)- ಮೈಸೂ ರಿನ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಹಾಗೂ ಜೆ.ಎಸ್.ಎಸ್ ಕಾನೂನು ಕಾಲೇಜು ವತಿಯಿಂದ ಮಂಗಳವಾರ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಭಿಯೋಜಕ ಮಹಾಂತಪ್ಪ ಅವರಿಗೆ ಮಾಜಿ ಸಚಿವ ಎ.ಮಂಜು ಆತ್ಮೀಯವಾಗಿ ಸನ್ಮಾನಿಸಿದರು.

ಗೌರವ ಸ್ವೀಕರಿಸಿದ ಬಳಿಕ ಮಾತ ನಾಡಿದ ಮಹಾಂತಪ್ಪ, ಮೈಸೂರಿನಲ್ಲಿ 13 ವರ್ಷಗಳ ಕಾಲ ಅಭಿಯೋಜನರಾಗಿ ಸೇವೆ ಸಲ್ಲಿಸಿದ್ದು, ಸಾಧನೆ ಮಾಡದಿ ದ್ದರೂ, ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿ, ನೊಂದವರ ಪರ ನಿಂತು ನ್ಯಾಯ ದೊರಕಿಸಿ ಕೊಟ್ಟಿದ್ದೆನೆಂಬ ಆತ್ಮ ತೃಪ್ತಿ ನನ್ನಲ್ಲಿದೆ. ಇಂತಹ ಕೆಲಸಗಳು ಕೊನೆಯವರೆಗೂ ಒಳ್ಳೆಯ ಕಾರ್ಯ ಮಾಡಿದ ಸಂತೋಷ ನನಗೆ ಕೊಡುತ್ತದೆ. ಇದಕ್ಕಿಂತ ಬೇರೇನೂ ಬಯ ಸುವುದಿಲ್ಲ. ಮುಂದೆಯೂ ವಕೀಲ ವೃತ್ತಿ ಆರಂಭಿಸಿದರೆ ಬಡವರ, ನೊಂದವರ ಪರವಾಗಿ ನನ್ನ ಸೇವೆ ಸದಾ ಇರಲಿದೆ ಎಂದರು.

ಮಾಜಿ ಸಚಿವ ಎ.ಮಂಜು ಮಾತ ನಾಡಿ, ಅಭಿಯೋಜಕರು ಹಾಗೂ ವಕೀ ಲರು ಬೆರೆಯುವುದು ತುಂಬಾ ಕಷ್ಟ. ಆದರೆ ವಕೀಲರೇ ಸೇರಿ ಅಭಿಯೋಜ ಕರಿಗೆ ಗೌರವ ಸಮರ್ಪಿಸುತ್ತಿರುವುದು ಮಹಾಂ ತಪ್ಪ ಎಂತಹ ಸ್ನೇಹಜೀವಿ ಎಂಬುದಕ್ಕೆ ನಿದರ್ಶನವಾಗಿದೆ. ನಾಗರಿಕ ಸಮಾಜ ದಲ್ಲಿ ಯಾವುದೇ ವೃತ್ತಿಯಾದರೂ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತಿ ಯಾದರೆ ಸಮಾಜ ಅವರನ್ನು ಎಂದಿಗೂ ಮರೆಯುವುದಿಲ್ಲ ಎಂಬುದು ಇದರಿಂದ ತಿಳಿಯಲಿದೆ. ಅವರಂತಹ ಉತ್ತಮ ಸೇವಾನಿರತ ಅಧಿಕಾರಿಗಳು ಸಮಾಜಕ್ಕೆ ಅಗತ್ಯವಿದೆ. ನಿವೃತ್ತಿಯಾಗಿದ್ದರೂ ಅವರು ವಕೀಲರಾಗಿ ಮುಂದಿನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.

ಹಿರಿಯ ವಕೀಲ ಹರೀಶ್‍ಕುಮಾರ್ ಹೆಗಡೆ ಮಾತನಾಡಿ, ಮಹಾಂತಪ್ಪ ನಮಗೆ ಮಾದರಿಯಾಗಿದ್ದಾರೆ. ಅವರು ಸೇವೆಯಿಂದ ನಿವೃತ್ತರಾಗಿದ್ದಾರೆಯೇ ಹೊರತು ವೃತ್ತಿ ಯಲ್ಲಿ ನಿವೃತ್ತಿಯಿಲ್ಲ. ಮುಂದೆ ಅವರು ವಕೀಲ ವೃತ್ತಿಯಲ್ಲಿ ಮುಂದುವರಿ ಯಬೇಕು. ಇನ್ನಷ್ಟು ನೊಂದವರಿಗೆ ದಾರಿಯಾಗಬೇಕು ಎಂದು ಆಶಿಸಿದರು.

ಜೆ.ಎಸ್.ಎಸ್ ಕಾನೂನು ಕಾಲೇಜು ಮುಖ್ಯ ನಿರ್ವಾಹಕ ಕೆ.ಎಸ್.ಸುರೇಶ್, ಲಾ ಗೈಡ್ ಕನ್ನಡ ಕಾನೂನು ಪತ್ರಿಕೆ ಸಂಪಾದಕ ಹಾಗೂ ವಕೀಲ ಹೆಚ್.ಎನ್.ವೆಂಕಟೇಶ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಬಸಪ್ಪ, ಆನಂದಕುಮಾರ್, ಎಸ್.ಜೆ.ಲಕ್ಷ್ಮೇಗೌಡ, ಜಿ.ವಿ.ರಾಮ ಮೂರ್ತಿ ಇತರರು ಉಪಸ್ಥಿತರಿದ್ದರು.

Translate »