ಮೈಸೂರು ರಂಗಾಯಣದ ನಿರ್ದೇಶಕರಾಗಿ ಅಡ್ಡಂಡ ಸಿ.ಕಾರ್ಯಪ್ಪ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ರಂಗಾಯಣದ ನಿರ್ದೇಶಕರಾಗಿ ಅಡ್ಡಂಡ ಸಿ.ಕಾರ್ಯಪ್ಪ ಅಧಿಕಾರ ಸ್ವೀಕಾರ

January 1, 2020

ಮೈಸೂರು, ಡಿ.31(ಪಿಎಂ)- ಪ್ರತಿಷ್ಠಿತ ಮೈಸೂರು ರಂಗಾಯಣದ ನಿರ್ದೇಶಕ ರಾಗಿ ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ರಂಗಾಯಣದ ನಿರ್ದೇಶಕರ ಕಚೇರಿ ಯಲ್ಲಿ ರಂಗಾಯಣದ ಸಂಸ್ಥಾಪಕ ನಿರ್ದೇಶಕ ರಂಗಭೀಷ್ಮ ಬಿ.ವಿ.ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡುವ ಮೂಲಕ ಅಡ್ಡಂಡ ಸಿ.ಕಾರ್ಯಪ್ಪ ಮೈಸೂರು ರಂಗಾಯಣದ 18ನೇ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ರಂಗಕರ್ಮಿ, ರಂಗಭೀಷ್ಮ ಬಿ.ವಿ.ಕಾರಂತರು ಕಟ್ಟಿದ ಈ ಅದ್ಭುತವಾದ ರಂಗಾಯಣದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಜೊತೆಗೆ ನನ್ನ ತಂದೆ-ತಾಯಿ ಆಶೀರ್ವದ ಎಂದು ಭಾವಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಕಳೆದ 40 ವರ್ಷಗಳಿಂದ ನನ್ನ ಪತ್ನಿ ಅನಿತಾ ಅವರೊಂದಿಗೆ ರಂಗಭೂಮಿಯಲ್ಲಿ ದುಡಿಯುತ್ತಿದ್ದೇನೆ. ಈ ವೇಳೆ ಹಲವು ರಂಗ ಕರ್ಮಿಗಳು ನನಗೆ ಸಹಕಾರ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಾನಿಂದು ಈ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದರು.

ನಿರ್ದೇಶಕರಾಗುವುದನ್ನು ನಿರೀಕ್ಷೆ ಮಾಡಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೂತನ ನಿರ್ದೇಶಕರು, ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಅಪೇಕ್ಷೆ ಇತ್ತು. ಈ ವಿಚಾರದಲ್ಲಿ ನಾನು ಸುಳ್ಳು ಹೇಳಲಾರೆ. ಕೊಡಗಿನಂತಹ ಪ್ರದೇಶದಲ್ಲಿ ರಂಗಭೂಮಿ ಕಟ್ಟುವುದು ಸಾಮಾನ್ಯ ಸಂಗತಿಯಲ್ಲ. ಆದರೆ ನಾನು 40 ವರ್ಷಗಳಿಂದ ಕೊಡಗಿನಲ್ಲಿ ರಂಗಭೂಮಿ ಚಟುವಟಿಕೆ ನಡೆಸುತ್ತಿದ್ದೇನೆ. ಅಲ್ಲಿ ಪ್ರೇಕ್ಷಕರು ಹಾಗೂ ನಟರನ್ನು ಸೃಷ್ಟಿಸಿದ್ದು ತಮಾಷೆಯ ಮಾತಲ್ಲ. ನನ್ನ ಬದುಕನ್ನು ರಂಗಭೂಮಿಗೆ ಮೀಸಲಿರಿಸಿದ್ದು, ಹುಟ್ಟಿದ್ದು ಅನುಕೂಲಸ್ಥ ಕುಟುಂಬದಲ್ಲೇ ಆದರೂ ತೋಟ-ಗದ್ದೆ ಬಿಟ್ಟು ರಂಗಭೂಮಿ ಯಲ್ಲಿ ತೊಡಗಿಸಿಕೊಂಡೆ. ಪತ್ನಿಯೊಂದಿಗೆ ರಂಗಭೂಮಿಯಲ್ಲಿ ದುಡಿದಿದ್ದೇನೆ. ಅದರಲ್ಲೇ ತೃಪ್ತಿ ಕಂಡಿದ್ದೇನೆ ಎಂದು ನುಡಿದರು.

ಸಾಕಷ್ಟು ಕನಸು ಹೊತ್ತು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸರ್ಕಾರ ಬದಲಾದರೆ ಅನೇಕ ವೇಳೆ ಅವಧಿಗೂ ಮುನ್ನವೇ ಸ್ಥಾನ ತ್ಯಜಿಸುವ ಅನಿವಾರ್ಯ ಎದುರಾಗುತ್ತದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಅನುಭವ ಈಗಾಗಲೇ ನನಗಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ್ದು ಕೇವಲ 8 ತಿಂಗಳು ಮಾತ್ರವೇ ಎಂದರು.

ರಾಜಕಾರಣಕ್ಕಲ್ಲ, ರಂಗ ಸೇವೆಗೆ ಸಿಕ್ಕ ಪದವಿ: ಸರ್ಕಾರವೇ ಹೋದ ಮೇಲೆ ನಿರ್ದೇ ಶಕರು, ಅಧ್ಯಕ್ಷರ ಸ್ಥಾನ ಹೋಗುವುದು ದೊಡ್ಡ ವಿಷಯವಲ್ಲ. ನನ್ನ ದೃಷ್ಟಿಯಲ್ಲಿ ಇದು ಬೇಸರ ಪಟ್ಟುಕೊಳ್ಳುವ ಸಂಗತಿ ಅಲ್ಲ. ಅದಾಗ್ಯೂ ಸಾಂಸ್ಕøತಿಕ ಪ್ರಾಧಿಕಾರಗಳ ವಿಷಯದಲ್ಲಿ ಯಾವುದೇ ಸರ್ಕಾರ ಬಂದರೂ ನಿರ್ದೇಶಕರನ್ನು ಬದಲಿಸಬಾರದು. ಇದನ್ನು ಈ ಹಿಂದೆಯೇ ಬರಗೂರು ರಾಮಚಂದ್ರಪ್ಪ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ಏಕೆಂದರೆ 3 ವರ್ಷಗಳ ಅಧಿಕಾರಾವಧಿ ಯಲ್ಲಿ ಹಾಕಿಕೊಂಡ ಯೋಜನೆಗಳು ಪರಿ ಣಾಮಕಾರಿಯಾಗಿ ಕಾರ್ಯಗತಗೊಳಿಸಲು ಬದಲಾವಣೆ ಮಾಡದಿರುವುದು ಅನಿವಾರ್ಯ. ರಾಜಕಾರಣಕ್ಕಾಗಿ ಇಂತಹ ಪದವಿ ಅಲಂ ಕರಿಸಿರುವುದಿಲ್ಲ ಎಂದು ಪ್ರತಿಪಾದಿಸಿದರು.

ಈಗ ನಾನು ರಾಜಕಾರಣಿ ಅಥವಾ ಬಿಜೆಪಿ ವಕ್ತಾರನಾಗಿ ಈ ಪದವಿಗೆ ಬಂದಿದ್ದಲ್ಲ. ರಂಗಭೂಮಿ ಸೇವೆ ಗುರುತಿಸಿ ನೀಡಿದ ಪದವಿ ಇದು. ನಾನು ಒಬ್ಬ ವ್ಯಕ್ತಿಯಾಗಿ ಸಾಮಾ ಜಿಕ ಸೇವೆ, ರಾಜಕೀಯ ಚಟುವಟಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಉತ್ತಮ ಜನಪ್ರತಿನಿಧಿಗಳ ಆಯ್ಕೆಗಾಗಿ ನಾನು ರಾಜಕಾರಣದಲ್ಲಿ ಕೆಲಸ ಮಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Translate »