ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಬಿಜೆಪಿ ಬೈಕ್ ಜಾಥಾ
ಕೊಡಗು

ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಬಿಜೆಪಿ ಬೈಕ್ ಜಾಥಾ

February 12, 2019

ಕುಶಾಲನಗರ: ಎಲ್ಲ ಅರ್ಹತೆ ಯನ್ನು ಹೊಂದಿರುವ ಆರ್ಥಿಕ ಹೊರೆಯಿ ಲ್ಲದೆ ತಾಲೂಕು ಆಗಿ ರಚನೆ ಮಾಡಬಹುದಾದ ಕಾವೇರಿ ತಾಲೂಕು ರಚಿಸಿ ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ಬೈಕ್‍ಗಳೊಂದಿಗೆ ಪಕ್ಷದ ಬಾವುಟ ಹಾಗೂ ಶಾಲು ಹಾಕಿ ಕೊಂಡು ಜಾಥಾದಲ್ಲಿ ಭಾಗವಹಿಸಿದ್ದರು. ಗುಡ್ಡೆಹೊಸೂರು ಗ್ರಾಮದಿಂದ ಆರಂಭ ಗೊಂಡ ಈ ಜಾಥಾಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಚಾಲನೆ ನೀಡಿ ದರು.

ಗುಡ್ಡೆಹೊಸೂರಿನಿಂದ ರಾಜ್ಯ ಹೆದ್ದಾರಿ ಬಿಎಂ ರಸ್ತೆ ಮೂಲಕ ಬಳ್ಳೂರು, ನಿಸರ್ಗ ಧಾಮ, ಮಾದಾಪಟ್ಟಣ, ಬೈಚನಹಳ್ಳಿ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಬೈಕ್ ಜಾಥಾದ ಸಂದರ್ಭ ಬೇಕೇ ಬೇಕು ಕಾವೇರಿ ತಾಲೂಕು ಬೇಕು, ಜಿಂದಾಬಾದ್, ಜಿಂದಾಬಾದ್, ಕಾವೇರಿ ತಾಲೂಕು ಜಿಂದಾಬಾದ್, ಜೈ, ಜೈ ಕಾವೇರಿ ತಾಲೂಕಿಗೆ, ಜೈ, ಜೈ ಬಿಜೆಪಿ, ಮಲತಾಯಿ ಧೋರಣೆ ಅನುಸರಿಸುತ್ತಿ ರುವ ಸಮ್ಮಿಶ್ರ ಸರ್ಕಾರಕ್ಕೆ ಧಿಕ್ಕಾರ ಎಂಬಿ ತ್ಯಾದಿ ಘೋಷಣೆಗಳನ್ನು ಕೂಗುತ್ತ ಜನರ ಗಮನ ಸೆಳೆದರು. ನಂತರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಥಬೀದಿ ಮೂಲಕ ನಾಡು ಕಚೇರಿಗೆ ಆಗಮಿಸಿ ಬೈಕ್ ಜಾಥಾ ಅಂತ್ಯಗೊಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಮೂಲಭೂತ ಸೌಲಭ್ಯವಿ ಲ್ಲದ ಊರುಗಳನ್ನು ತಾಲೂಕುಗಳಾಗಿ ಘೋಷಣೆ ಮಾಡಿರುವ ಸರ್ಕಾರ ಎಲ್ಲ ಅರ್ಹತೆಯನ್ನು ಹೊಂದಿರುವ ಕುಶಾಲ ನಗರ ಕಾವೇರಿ ತಾಲೂಕು ಅನ್ನು ಕೈಬಿಟ್ಟಿ ರುವುದು ತುಂಬ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಫಿ ಮಂಡಳಿ ಸದಸ್ಯ ಜಿ.ಎಲ್.ನಾಗ ರಾಜು ಮಾತನಾಡಿ, ಕಾವೇರಿ ತಾಲೂಕು ಹೋರಾಟ ಸಮಿತಿ ತಾರ್ಕಿಕ ಅಂತ್ಯ ಕಾಣು ವಲ್ಲಿ ವಿಫಲವಾಗಿದೆ ಎಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ದಿನೇಶ್ ಗೂಂಡೂರಾವ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ತಾಲೂಕು ಹೋರಾಟ ಸಮಿತಿ ವಿಫಲವಾಗಿರುವುದೇ ನೂತನ ತಾಲೂಕು ಪಟ್ಟಿಯಿಂದ ವಂಚನೆಯಾ ಗಲು ಕಾರಣವಾಗಿದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಪಂ ಸದಸ್ಯೆ ಪುಷ್ಪಾ ಜರ್ನಾಧನ್, ಪಟ್ಟಣ ಪಂಚಾಯಿತಿ ಸದಸ್ಯ ರಾದ ಡಿ.ಕೆ.ತಿಮ್ಮಪ್ಪ, ರೇಣುಕಾ ಜಗದೀಶ್, ಬಿ.ಜಯವರ್ಧನ್(ಕೇಶವ), ರೂಪ ಉಮಾ ಶಂಕರ್, ಮಾಜಿ ಸದಸ್ಯೆ ಲಲಿತಾ, ಮುಳ್ಳು ಸೋಗೆ ಗ್ರಾಪಂ ಸದಸ್ಯರಾದ ರುದ್ರಾಂಬಿಕೆ, ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್, ಪ್ರಮೀಳಾಜ್ಯೋತಿ, ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಗಣಿ ಪ್ರಸಾದ್, ತಾಲೂಕು ಅಧ್ಯಕ್ಷ ಎಂ.ಎನ್. ಕುಮಾರಪ್ಪ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸಾರ್ ಅಹಮ್ಮದ್, ಯುವ ಘಟಕದ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯ ದರ್ಶಿ ಎಚ್.ಡಿ.ಶಿವಾಜಿರಾವ್, ಸಹ ಕಾರ್ಯ ದರ್ಶಿ ನಿಡ್ಯಮಲೆ ದಿನೇಶ್, ಮುಖಂಡ ರಾದ ಎಚ್.ಎನ್.ರಾಮಚಂದ್ರ, ಬಿ.ಕೆ.ಚಲುವ ರಾಜು, ಉಮಾಶಂಕರ್, ಚಂದ್ರು, ಅನಿಷ್ ಇದ್ದರು. ನಂತರ ನಾಡು ಕಚೇರಿಯ ಕಂದಾಯ ಅಧೀಕ್ಷಕ ಮಧು ಅವರ ಮೂಲಕ ರಾಜ್ಯಪಾ ಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Translate »