ವಿರಾಜಪೇಟೆಯಲ್ಲಿ ಪ್ರತಾಪ್ ಸಿಂಹ ಪರ ಬಿಜೆಪಿ ಮತಯಾಚನೆ
ಕೊಡಗು

ವಿರಾಜಪೇಟೆಯಲ್ಲಿ ಪ್ರತಾಪ್ ಸಿಂಹ ಪರ ಬಿಜೆಪಿ ಮತಯಾಚನೆ

April 4, 2019

ವಿರಾಜಪೇಟೆ: ಭಾರತಿಯ ಜನತಾ ಪಕ್ಷದ ವತಿಯಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರವಾಗಿ ಸಂತೆ ದಿನವಾದ ಇಂದು ವಿರಾಜಪೇಟೆ ಪಟ್ಟಣ ದಲ್ಲಿ ಬಿಜೆಪಿ ಶಾಸಕರು ಪಕ್ಷದ ಮುಖಂ ಡರುಗಳು ಬಿರುಸಿನ ಪ್ರಚಾರ ನಡೆಸಿದ ರಲ್ಲದೆ, ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಮತಯಾ ಚನೆ ಮಾಡಿದರು.

ಬೆಳಿಗ್ಗೆಯಿಂದಲೇ ಪಟ್ಟಣದ ತೆಲುಗರ ಬೀದಿಯಿಂದ ಪ್ರಾರಂಭಗೊಂಡು ಜೈನರ ಬೀದಿ, ದೊಡ್ಡಟ್ಟಿಚೌಕಿ, ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣದವರೆಗೆ ಮತಯಾಚನೆ ಮಾಡಿ ದರು. ಮತಯಾಚನೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಬಿಜೆಪಿ ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘುನಾ ಣಯ್ಯ, ತಾಲೂಕು ಅಧ್ಯಕ್ಷ ಅರುಣ್ ಭಿಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ತಾಪಂ ಸದಸ್ಯ ಬಿ.ಎಂ. ಗಣೇಶ್, ಪಕ್ಷದ ಮುಖಂಡರಾದ ಶಾಂತೆ ಯಂಡ ರವಿ ಕುಶಾಲಪ್ಪ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಸೈನಿಕ ಪ್ರಕೋ ಷ್ಠದ ಅಧ್ಯಕ್ಷ ರಮೇಶ್ ಕರುಂಬಯ್ಯ, ಎ.ಹೆಚ್.ಅಪ್ಪಣ್ಣ, ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯದರ್ಶಿ ಪಿ.ಎಸ್.ರಿಬೋಲ್ಲೊ, ನಗರ ಅಧ್ಯಕ್ಷ ಅನೀಲ್ ಮಂದಣ್ಣ, ಪಟ್ಟಣ ಪಂಚಾಯಿತಿ ಪಕ್ಷದ ಸದಸ್ಯರುಗಳು, ಸಂಘ ಪರಿವಾರದ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರುಗಳು ಮತ ಯಾಚನೆಯಲ್ಲಿ ಹಾಜರಿದ್ದರು.

Translate »