ಇಲವಾಲ, ಹೂಟಗಳ್ಳಿಯಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರ
ಮೈಸೂರು

ಇಲವಾಲ, ಹೂಟಗಳ್ಳಿಯಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರ

April 4, 2019

ಮೈಸೂರು: ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯಕರ್ತರು ಇಂದು ಮೈಸೂರು ತಾಲೂಕು ಇಲವಾಲ ಮತ್ತು ಹೂಟಗಳ್ಳಿಯಲ್ಲಿ ಅಭ್ಯರ್ಥಿ ಪ್ರತಾಪ್‍ಸಿಂಹ ಪರ ಚುನಾವಣಾ ಪ್ರಚಾರ ನಡೆಸಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ಹೂಟಗಳ್ಳಿಯ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಕಾರ್ಯಕರ್ತರು, 5 ವರ್ಷಗಳ ಅವಧಿಯಲ್ಲಿ ಸಂಸದರಾಗಿ ಪ್ರತಾಪ್ ಸಿಂಹ ಮೈಸೂರು ಕ್ಷೇತ್ರಕ್ಕೆ ಮಾಡಿ ರುವ ಅಭಿವೃದ್ಧಿ ಕೆಲಸಗಳ ಕಿರು ಪುಸ್ತಿಕೆ ಯನ್ನು ಬೂತ್ ಲೆವೆಲ್, ಬ್ಲಾಕ್ ಲೆವೆಲ್ ಗಳಲ್ಲಿ ಹಂಚುವ ಮೂಲಕ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.

ಅದೇ ರೀತಿ ಇಲವಾಲದ ಮುಖ್ಯ ರಸ್ತೆ, ಗ್ರಾಮದ ಇತರೆ ರಸ್ತೆಗಳಲ್ಲಿ ಮನೆ -ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿ ಕಲ್ ಸ್ಟ್ರೈಕ್ ಮೂಲಕ ರಾಷ್ಟ್ರದ ಭದ್ರತೆ ಸಬಲಗೊಳಿಸಿರುವುದನ್ನು ಜನರಿಗೆ ತಿಳಿಸಿ, ಮತ್ತೊಮ್ಮೆ ಅವರು ಪ್ರಧಾನಿ ಯಾಗಲು ಪ್ರತಾಪ್ ಸಿಂಹ ಅವರಿಗೆ ಮತ ಹಾಕುವಂತೆ ಮನವಿ ಮಾಡಿ ದರು. ಚಾಮುಂಡೇಶ್ವರಿ ಬ್ಲಾಕ್ ಬಿಜೆಪಿ ಅಧ್ಯಕ್ಷ ಅರುಣ್‍ಕುಮಾರ್ ಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ನೇತೃತ್ವದಲ್ಲಿ ನಡೆದ ಪ್ರಚಾರದಲ್ಲಿ ಗೋಪಾಲರಾವ್, ಗೋಪಾಲ ಗೌಡ, ಗೋವಿಂದಸ್ವಾಮಿ, ಚಿದಂ ಬರ, ಬಾಲಕೃಷ್ಣ, ಲೋಕೇಶ್, ನಟ ರಾಜು, ಮಹೇಶ, ವೀರಭದ್ರ ಸೇರಿ ದಂತೆ ಹಲವರು ಪಾಲ್ಗೊಂಡಿದ್ದರು

Translate »