ಮೂಲ ಸೌಲಭ್ಯಕ್ಕಾಗಿ ಮತದಾನ ಬಹಿಷ್ಕಾರ ಎಚ್ಚರಿಕೆ
ಕೊಡಗು

ಮೂಲ ಸೌಲಭ್ಯಕ್ಕಾಗಿ ಮತದಾನ ಬಹಿಷ್ಕಾರ ಎಚ್ಚರಿಕೆ

April 4, 2019

ಗೋಣಿಕೊಪ್ಪಲು: ಮೂಲಭೂತ ಸೌಕರ್ಯ ನೀಡಿದರೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುವುದಾಗಿ ಹೈಸೊಡ್ಲೂರು ಗ್ರಾಮದ ಗುಡಿಸಲು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸುಸುತ್ತಿದ್ದು, ಇದುವರೆಗೂ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಹಕ್ಕುಪತ್ರ ನೀಡದ ಹೊರತು ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳು ತಿಳಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ವಾಸ ಮಾಡುತ್ತಿರುವ ನಮಗೆ ಮೂಲ ಭೂತ ಸೌಲಭ್ಯ ನೀಡದೆ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳು ಕಡೆಗಣನೆ ಮಾಡುತ್ತಿದ್ದಾರೆ. ಇದೀಗ ಮತಕ್ಕಾಗಿ ನಮ್ಮನ್ನು ಒತ್ತಾಯಿಸುತ್ತಿದ್ದು, ಮೂಲಭೂತ ಸೌಕರ್ಯ ನೀಡಿದರೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ ತ್ಪಪಿದಲ್ಲಿ, ಮತದಾನ ಬಹಿಷ್ಕಾರದ ಮೂಲಕ ಉತ್ತರ ನೀಡುತ್ತೇವೆ ಎಂದು ಅಲ್ಲಿನ ನಿವಾಸಿ ರಾಣಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಸುಮಾರು 72 ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ರಸ್ತೆ, ನೀರು, ವಿದ್ಯುತ್ ಸೌಲಭ್ಯ ನೀಡದೆ ನಮ್ಮನ್ನು ಸತಾಯಿಸಲಾಗುತ್ತಿದೆ. ಇದೀಗ ಚುನಾವಣೆ ಬಂದಿರುವುದರಿಂದ ಒಂದಷ್ಟು ಪಕ್ಷದ ಪ್ರಮುಖರುಳು ನಮ್ಮನ್ನು ಮತಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಇಲ್ಲಿ ನಮಗೆ ಯಾವ ಸೌಕರ್ಯ ನೀಡದ ಕಾರಣ ನಾವು ಸೌಲಭ್ಯ ನೀಡಿದರೆ ಮಾತ್ರ ಮತದಾನ ಮಾಡುವುದಾಗಿ ನಿರ್ಧರಿಸಿದ್ದೇವೆ ಎಂದರು.

ತಾಲೂಕು ಪಂಚಾಯ್ತಿ ಇಒ, ಸ್ಥಳೀಯ ಪಿಡಿಒ ನಮಗೆ ಸ್ಪಂದಿ ಸುತ್ತಿಲ್ಲ. ನಮ್ಮನ್ನು ಅಲ್ಲಿಂದ ಬಿಟ್ಟು ಹೋಗುವಂತೆ ಒತ್ತಾಯಿ ಸುತ್ತಿದ್ದಾರೆ ಎಂದು ಆರೋಪಿಸಿದರು. 6 ತಿಂಗಳಿನಿಂದ ಅಲ್ಲಿಯೇ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದೇವೆ. ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ನಮ್ಮನ್ನು ವಿಚಾರಿಸಲು ಯಾರೂ ಬರು ತ್ತಿಲ್ಲ. ಆದರೂ ನಾವು ಇಲ್ಲಿಯೇ ಬದುಕು ಮುಂದುವರಿಸುತ್ತೇವೆ ಎಂದರು. ಸೌಲಭ್ಯ ಕಲ್ಪಿಸದೇ ಇದ್ದರೆ ಮತದಾನದಲ್ಲಿ ಪಾಲ್ಗೊ ಳ್ಳುವುದಿಲ್ಲ ಎಂದು ಎಚ್ಚರಿಸಿದರು. ಗೋಷ್ಟಿಯಲ್ಲಿ ಅಲ್ಲಿನ ನಿವಾಸಿಗ ಳಾದ ಕರ್ಕು, ಕಮಲಮ್ಮ, ಅಣ್ಣು ಹಾಗೂ ಮಣಿ ಇದ್ದರು.

Translate »