ಎನ್‍ಸಿಸಿ ಕ್ಯಾಂಪ್‍ನಲ್ಲಿ ರಕ್ತದಾನ ಶಿಬಿರ
ಮೈಸೂರು

ಎನ್‍ಸಿಸಿ ಕ್ಯಾಂಪ್‍ನಲ್ಲಿ ರಕ್ತದಾನ ಶಿಬಿರ

June 12, 2019

ಮೈಸೂರು: ಮೈಸೂರಿನ ಮಹಾರಾಜ ಹಾಗೂ ಯುವರಾಜ ಕಾಲೇಜು ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಜೂ.5ರಿಂದ ಆರಂಭಗೊಂಡಿರುವ ಎನ್‍ಸಿಸಿ ಕ್ಯಾಂಪ್‍ನಲ್ಲಿ ಮಂಗಳವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಎನ್‍ಸಿಸಿ ಮೈಸೂರು ಗ್ರೂಪ್ ಆಶ್ರಯ ದಲ್ಲಿ `ಹಾಸನದ ಎನ್‍ಸಿಸಿ 15ನೇ ಕರ್ನಾಟಕ ಬೆಟಾಲಿಯನ್’ ವತಿಯಿಂದ ಕ್ಯಾಂಪ್ ಏರ್ಪಡಿಸಲಾಗಿದೆ. ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ನಿರ್ದೇಶ ನಾಲಯದ ಅಡಿಯಲ್ಲಿ ಈ ಬಿಎಲ್‍ಸಿ/ಸಿಎಟಿಸಿ ಕ್ಯಾಂಪ್ (ಬೇಸಿಕ್ ಲೀಡರ್‍ಶಿಪ್ ಕ್ಯಾಂಪ್/ಕಂಬೈನ್ಡ್ ಆನ್ಯೂಯಲ್ ಟ್ರೈನಿಂಗ್ ಕ್ಯಾಂಪ್) ಆಯೋಜಿಸಲಾಗಿದೆ.

ಜೂ.14ರವರೆಗೆ ನಡೆಯುವ ಈ ಕ್ಯಾಂಪ್‍ನಲ್ಲಿ ವಿವಿಧ ಚಟುವಟಿಕೆಗಳು ಜರುಗಲಿದ್ದು, ಇಂದು ರಕ್ತದಾನ ಶಿಬಿರ ನಡೆಯಿತು. ಯುವಕ ಹಾಗೂ ಯುವತಿ ಕೆಡೆಟ್‍ಗಳು ಸೇರಿದಂತೆ ಒಟ್ಟು 600 ಮಂದಿ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಕ್ಯಾಂಪ್‍ನಲ್ಲಿ ಪಾಲ್ಗೊಂಡಿದ್ದು, ಈ ಪೈಕಿ 225 ಮಹಿಳಾ ಶಿಬಿರಾರ್ಥಿಗಳಿದ್ದಾರೆ.

ಕ್ಯಾಂಪ್‍ನಲ್ಲಿ ಶಿಸ್ತು-ಸಂಯಮ ಸೇರಿ ದಂತೆ ಅನೇಕ ವಿಷಯಗಳಿಗೆ ಸಂಬಂಧಿ ಸಿದಂತೆ ಸಂಪನ್ಮೂಲ ವ್ಯಕ್ತಿಗಳು ಉಪ ನ್ಯಾಸ ನೀಡಲಿದ್ದಾರೆ. ನಾಯಕತ್ವ ಗುಣ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವಿಕೆ, ಗುಂಪು ಚರ್ಚೆಯ ಮೂಲಕ ವಿಚಾರ ವಿನಿಮ ಯದ ಮಹತ್ವ ಎಂಬಿತ್ಯಾದಿ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ. ಜೊತೆಗೆ ಭಾರತದ ರಕ್ಷಣಾ ಸಚಿವಾಲಯದ ಎಸ್‍ಎಸ್‍ಬಿ (ಸರ್ವೀಸ್ ಸೆಲೆಕ್ಸನ್ ಬೋರ್ಡ್) ಅಧಿಕಾರಿಗಳು ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ.

6 ಎನ್‍ಸಿಸಿ ಗ್ರೂಪ್‍ಗಳಾದ ಬೆಂಗ ಳೂರು-ಎ ಮತ್ತು ಬಿ, ಬೆಳಗಾವಿ, ಬಳ್ಳಾರಿ, ಮಂಗಳೂರು ಹಾಗೂ ಮೈಸೂರು ಗ್ರೂಪ್‍ಗಳ ವ್ಯಾಪ್ತಿಯಿಂದ ರಾಜ್ಯದ ನಾನಾ ಭಾಗಗಳಿಂದ ಕೆಡೆಟ್ ಗಳು ಕ್ಯಾಂಪ್‍ನಲ್ಲಿ ಪಾಲ್ಗೊಂಡಿದ್ದಾರೆ. ಕ್ಯಾಂಪ್ ಅಡ್ಜಟಂಟ್ ಮೇಜರ್ ಬಿ.ಮಾದವ್ ನಾರಾಯಣ್, ಲೆಫ್ಟಿನೆಂಟ್ ಕೆ.ಕೆ.ಥೆರಿಸಾ, ಮೇಜರ್ ಜಯರಾಜ್, 14 ಕರ್ನಾಟಕ ಬೆಟಾಲಿಯನ್‍ನ ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಎಂ.ಕೃಷ್ಣಮೂರ್ತಿ ಮತ್ತಿತರರು ಕ್ಯಾಂಪ್‍ನಲ್ಲಿ ಭಾಗವಹಿಸಿದ್ದಾರೆ.

Translate »