ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ
ಕೊಡಗು

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ

June 10, 2018

ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ದೂರು ದಾಖಲು ಜಿಲ್ಲಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟಿಸ್

ಮಡಿಕೇರಿ: ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬ್ರಹ್ಮಗಿರಿ ತಪ್ಪಲು ಏರಲು ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರ ವಿವಾದದ ಸ್ವರೂಪ ಪಡೆದಿದ್ದು, ಪತ್ರಿಕಾ ವರದಿಯನ್ನಾಧರಿಸಿ ರಾಜ್ಯ ಮಾನವ ಹಕ್ಕು ಆಯೋಗ ಸ್ಯಯಂ ದೂರು ದಾಖಲಿಸಿಕೊಂಡುಕೊಡಗು ಜಿಲ್ಲಾಧಿಕಾರಿ ಮತ್ತು ಭಾಗಮಂಡಲ ತಲ ಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಜ್ಯೋತಿಷಿ ನಾರಾಯಣ ಪೊದವಾಳ್, ಚೋದ್ಯರಾದ ಶ್ಯಾಂ ಸುಂದರ್ ಶಾಸ್ತ್ರಿ, ಶ್ರೀ ನೀಲೇಶ್ವರ ಪದ್ಮನಾಭ್ ತಂತ್ರಿ ಇವರುಗಳ ಸಮ್ಮುಖದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಯಲ್ಲಿ ಸಪ್ತರ್ಷಿಗಳು ತಪ್ಪಸ್ಸು ಮಾಡಿದ ಸ್ಥಳವಾದ ಬ್ರಹ್ಮಗಿರಿಯಲ್ಲಿ ನಿಶ್ಯಬ್ಧ ಮತ್ತು ಶುದ್ಧತೆ ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಗಿರಿ ಏರಲು ಯಾರಿಗೂ ಅವಕಾಶ ಕಲ್ಪಿಸ ಬಾರದೆಂಬ ಅಂಶ ಗೋಚರಿಸಿತ್ತು. ಇದಾದ ಬಳಿಕ ವೃದ್ಧ ಮಹಿಳೆಯರು, ಬಾಲೆಯರು ತೆರಳ ಬಹುದೆಂದು ಕಂಡು ಬಂದಿತ್ತು.

ಮಾತ್ರವಲ್ಲದೆ ಅಕ್ಟೋಬರ್ 17ರ ತುಲಾ ಸಂಕ್ರಮಣದಿಂದ ಮೇ.15ರ ವೃಷಭ ಸಂಕ್ರಮಣದವರೆಗೆ ಶುದ್ಧ ಮುದ್ರಿಕೆಯಲ್ಲಿ ತೆರಳುವಂತೆ ಜ್ಯೋತಿಷಿಗಳು ನಿರ್ದೇಶನ ನೀಡಿದ್ದರು. ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ಈ ಅಂಶಗಳು ಸಹಜವಾಗಿಯೇ ಮಹಿಳಾ ಪರವಾದಿಗಳ ಆಕ್ರೋಶಕ್ಕೆ ತುತ್ತಾ ಗಿತ್ತಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ಮೂಲಕ ವಿವಾದ ಸೃಷ್ಟಿ ಸಿದ್ದವು. ಈ ವಿಚಾರ ರಾಜ್ಯಮಟ್ಟದಲ್ಲಿ ಸುದ್ದಿ ಯಾದ ಸಂದರ್ಭ ಎಚ್ಚೆತ್ತ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಕ್ರಮಕ್ಕೆ ಮುಂದಾಗಿದೆ. ಜ್ಯೋತಿಷಿಗಳ ಸೂಚನೆಯನ್ನು ಪಾಲಿಸಲು ದೇವಾಲಯ ಆಡಳಿತ ಮಂಡಳಿ ಮುಂದಾದಲ್ಲಿ ಮಹಿಳೆ ಯರ ಸಮನಾಂತರ ಹಕ್ಕಿಗೆ ಧಕ್ಕೆಯಾಗ ಲಿದ್ದು, ಸಮಿತಿ ಯಾವ ಕ್ರಮ ಕೈಗೊಳ್ಳ ಲಿದೆ ಎಂದು ನೋಟೀಸ್‍ನಲ್ಲಿ ಪ್ರಶ್ನಿಸ ಲಾಗಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಜೂನ್ 1ರಂದು ನೋಟೀಸ್ ಜಾರಿ ಮಾಡಿದ್ದು ಈ ಕುರಿತು ಜೂ.22ರ ಒಳಗೆ ಉತ್ತರಿಸುವಂತೆ ಸೂಚಿಸಿದ್ದು, ಪ್ರಕರಣದ ವಿಚಾರಣೆಯನ್ನು ಜೂ.25ಕ್ಕೆ ನಿಗಧಿ ಮಾಡಿದೆ.

ಈ ಕುರಿತು ತಮ್ಮ ವಕೀಲರ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ಸ್ಪಷ್ಟೀ ಕರಣ ನೀಡಿರುವ ತಲಕಾವೇರಿ-ಭಾಗ ಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಈ ಹಿಂದೆ ನಡೆಸ ಲಾದ ಪ್ರಶ್ನೆಯಲ್ಲಿ ಕ್ಷೇತ್ರದಲ್ಲಿ ಕೆಲವು ದೋಷಗಳು ಕಂಡು ಬಂದಿವೆ. ಅಷ್ಟ ಮಂಗಲದ ದೋಷ ಪರಿಹಾರದ ಕುರಿತು ಚರ್ಚಿಸಲು ಜೂನ್ 18ರಿಂದ ಮತ್ತೊಮ್ಮೆ ಅಷ್ಟಮಂಗಲ ನಡೆಸಲಾಗುತ್ತದೆ.

ದೇವಾಲಯದ ಪ್ರಾವಿತ್ಯತೆ ಕಾಪಾಡು ವುದು, ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಸಮಯ ನಿಗಧಿ, ಪೂಜಾ ವಿಧಿ, ವಿಧಾನ ಗಳ ಕುರಿತು ಇನ್ನಷ್ಟೇ ಕ್ರಮ ಕೈಗೊಳ್ಳ ಬೇಕಿದ್ದು, ಎಲ್ಲಿಯೂ ತಾರತಮ್ಯ ಮಾಡಿಲ್ಲ ಎಂದು ಆಯೋಗಕ್ಕೆ ಉತ್ತರಿಸಿದ್ದಾರೆ. ಮಾತ್ರವಲ್ಲದೆ ತಲಕಾವೇರಿಯಲ್ಲಿ ಯಾವುದೇ ರೀತಿಯ ಲಿಂಗಭೇದಕ್ಕೆ ಇಂದಿನವರೆಗೂ ಅವಕಾಶ ಕಲ್ಪಿಸಿಲ್ಲ, ಆ ಉದ್ದೇಶವು ಸಮಿತಿ ಗಿಲ್ಲ.

ಬ್ರಹ್ಮಕಲಶೋತ್ಸವದ ಕುರಿತು ಅಷ್ಟ ಮಂಗಲದಲ್ಲಿ ಚರ್ಚಿಸಲಾಗಿದ್ದು ಉತ್ತ ರಾಯಣದ ಬಳಿಕ ಅಂದರೆ ಜನವರಿ ಬಳಿಕ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಚಿಂತಿಸಲಾಗುತ್ತಿದೆ ಎಂದು ನೋಟೀಸ್‍ಗೆ ಬಿ.ಎಸ್. ತಮ್ಮಯ್ಯ ಉತ್ತರ ನೀಡಿದ್ದಾರೆ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಅನಾನುಕೂಲವಾಗ ದಂತೆ ಕೆಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ ಪ್ರತಿ ಹಂತ ದಲ್ಲೂ ಜಿಲ್ಲಾಡಳಿತ ರಾಜ್ಯ ಧಾರ್ಮಿಕ ದತ್ತಿನಿಧಿ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸೇರಿದಂತೆ ರಾಜ್ಯ ಸರ್ಕಾರದ ನೀತಿ ನಿಯಮಗಳಿಗೆ ಅನು ಸಾರ ವಾಗಿ ಯೋಜನೆಗಳನ್ನು ಜಾರಿಗೊಳಿಸು ವುದಾಗಿ ಲಿಖಿತ ರೂಪದಲ್ಲಿ ಸಮ ಜಾಯಿಷಿಕೆ ನೀಡಲಾಗಿದೆ.

ತಲಕಾವೇರಿ ಕ್ಷೇತ್ರದಲ್ಲಿ 2006ರಲ್ಲಿ ಜೀರ್ಣೊದ್ದಾರ ಕಾರ್ಯ ಮುಕ್ತಾಯ ಗೊಂಡಿದ್ದು, ಇದೀಗ 12 ವರ್ಷಗಳ ಬಳಿಕ ಕ್ಷೇತ್ರ ತಂತ್ರಿಗಳ ಸಮ್ಮುಖದಲ್ಲಿ ಧಾರ್ಮಿಕ ಆಚರಣೆಗಳ ಕುರಿತು ಪ್ರಶ್ನೋತ್ತರ ನಡೆಸಲಾಗಿದೆ ಎಂದು ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ಸಮಜಾಯಿಷಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ಮೈಸೂರುಮಿತ್ರ’ದೊಂದಿಗೆ ಪ್ರತಿ ಕ್ರಿಯಿಸಿದ ಬಿ.ಎಸ್.ತಮ್ಮಯ್ಯ, ಬ್ರಹ್ಮಗಿರಿ ಬೆಟ್ಟಕ್ಕೆ ಇಂದಿಗೂ ಯಾರಿಗೂ ಪ್ರವೇಶ ನಿರಾಕರಿಸಿಲ್ಲ. ಆದರೆ ಮಳೆಗಾಲದಲ್ಲಿ ಪ್ರವೇಶ ನಿರ್ಬಂಧಿಸುವುದು ಅನಿವಾರ್ಯ. ಬಾರಿ ಮಳೆ ಗಾಳಿ ಮತ್ತು ಪಾಚಿಗಟ್ಟಿರುವ ಮೆಟ್ಟಿಲುಗಳಿಂದ ಬೆಟ್ಟ ಏರುವವರಿಗೆ ಅನಾ ಹುತವಾಗುವುದನ್ನು ತಡೆಯಲು ಈ ಕ್ರಮ ಅನಿ ವಾರ್ಯವಾಗಿದೆ ಎಂದು ತಿಳಿಸಿದರು.

Translate »