ಲಂಚ ಸ್ವೀಕಾರ: ಸಿಬಿಐ ಬಲೆಗೆ ಐಟಿ ಅಧಿಕಾರಿ
ಮೈಸೂರು

ಲಂಚ ಸ್ವೀಕಾರ: ಸಿಬಿಐ ಬಲೆಗೆ ಐಟಿ ಅಧಿಕಾರಿ

April 4, 2019

ಬೆಂಗಳೂರು: ಐಟಿ ದಾಳಿಗೆ ಒಳಗಾಗಿದ್ದ ಬಿಲ್ಡರ್‍ವೊಬ್ಬರ ಬಳಿ 14 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿ ನಾಗೇಶ್ ಎಂಬುವರೇ ಸಿಬಿಐ ಬಲೆಗೆ ಬಿದ್ದವರಾಗಿದ್ದು, ಮಾ.6ರಂದು ಐಟಿ ದಾಳಿಗೆ ಒಳಗಾಗಿದ್ದ ಬಿಲ್ಡರ್‍ವೊಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಲು ನಾಗೇಶ್ 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಸಿಬಿಐ ಅಧಿಕಾರಿಗಳಿಗೆ ಬಿಲ್ಡರ್ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿ ಗಳು ಐಟಿ ಅಧಿಕಾರಿಗಳನ್ನು ಬಲೆಗೆ ಕೆಡವಲು ಕಾರ್ಯತಂತ್ರ ರೂಪಿಸಿದ್ದರು. ಅದರಂತೆ ಬೆಂಗಳೂರಿನ ಜಯನಗರ ದಲ್ಲಿರುವ ಕಾಫಿ ಡೇನಲ್ಲಿ ಇಂದು ಸಂಜೆ ನಾಗೇಶ್ ಮೊದಲ ಕಂತಿನ 14 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಂತೆಯೇ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಅವ ರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ನರೇಂದ್ರ ಸಿಂಗ್ ಎಂಬಾತನನ್ನು ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಬಂಧಿಸ ಲಾಗಿದೆ ಎಂದು ಮೂಲಗಳು ತಿಳಿಸಿವೆ.

Translate »